ETV Bharat / bharat

ರೂಪಾಂತರ ವೈರಸ್ ಇಲ್ಲದಿದ್ದರೆ ಮೂರನೇ ಅಲೆಯಲ್ಲಿ ಹೆಚ್ಚು ಹಾನಿ ಮಾಡುವುದಿಲ್ಲ: ಲಸಿಕಾತಜ್ಞೆ ಕಾಂಗ್ - ಸಾಂಕ್ರಾಮಿಕ ರೋಗ ಮತ್ತು ಭಾರತ

ಭಾರತದಲ್ಲಿ ಕೋವಿಡ್ ಲಸಿಕೆ ಉದ್ಯಮವು ಸಂಪೂರ್ಣವಾಗಿ ಯಶಸ್ವಿಯಾಗುತ್ತಿದೆ ಎಂದು ಖ್ಯಾತ ಲಸಿಕಾ ತಜ್ಞೆ ಗಗನ್​​ದೀಪ್ ಕಾಂಗ್ ಅಭಿಪ್ರಾಯಪಟ್ಟಿದ್ದಾರೆ.

If there is no new variant, 3rd Covid wave will not be as devastating as 2nd, says Kang
ಹೊಸ ರೂಪಾಂತರ ವೈರಸ್ ಇಲ್ಲದಿದ್ದರೆ ಮೂರನೇ ಅಲೆಯಲ್ಲಿ ಹೆಚ್ಚು ಹಾನಿ ಮಾಡುವುದಿಲ್ಲ: ಲಸಿಕಾತಜ್ಞೆ ಕಾಂಗ್
author img

By

Published : Sep 18, 2021, 9:52 AM IST

ನವದೆಹಲಿ: ಹೊಸ ಕೋವಿಡ್ ರೂಪಾಂತರ ಇಲ್ಲದಿದ್ದರೆ, ಕೊರೊನಾ ಮೂರನೇ ಅಲೆಯು ಎರಡನೇ ಅಲೆಯಷ್ಟು ದುಷ್ಪರಿಣಾಮ ಬೀರುವುದಿಲ್ಲ ಎಂದು ಖ್ಯಾತ ಲಸಿಕಾ ತಜ್ಞೆ ಗಗನ್​​ದೀಪ್ ಕಾಂಗ್ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಸಿಐಐ ಲೈಫ್​ಸೈನ್ಸ್​ ಸಮ್ಮೇಳನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್​​​ನಲ್ಲಿ ಮಾತನಾಡಿದ ಅವರು, ​ಹೊಸ ರೂಪಾಂತರಗಳನ್ನು ನಿಭಾಯಿಸಬಲ್ಲ ಉತ್ತಮ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್​ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತಿರುವ ಗಗನ್​​ದೀಪ್ ಕಾಂಗ್, ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಭಾರತದ ಲಸಿಕೆ ಉದ್ಯಮವು ಸಂಪೂರ್ಣವಾಗಿ ಯಶಸ್ವಿಯಾಗುತ್ತಿದೆ. ಆದರೆ ಇನ್ನೂ ಹೆಚ್ಚು ದೂರ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಆಗಬಹುದಾದ ಅಪಾಯವನ್ನು ಎದುರಿಸಲು ವೈದ್ಯಕೀಯ ಸಂಶೋಧನಾ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಸರ್ಕಾರ ಮತ್ತುಅಕಾಡೆಮಿಗಳ ಅಗತ್ಯವೂ ಕೂಡಾ ಇದೆ ಎಂದು ಕಾಂಗ್ ಹೇಳಿದರು.

ಈಗಿರುವ ಹೊಸ ತಂತ್ರಜ್ಞಾನಗಳು ಅಪಾಯಗಳನ್ನೂ ತರುತ್ತವೆ. ಮುಂಬರುವ ವೈದ್ಯಕೀಯ ಸವಾಲುಗಳನ್ನು ಎದುರಿಸಲು ಸಿದ್ಧವಿರುವ ವ್ಯವಸ್ಥೆಯ ಅನಿವಾರ್ಯವಿದೆ. ಇದಕ್ಕೆ ಪೂರಕವಾದ ವೈದ್ಯಕೀಯ ಶಿಕ್ಷಣವೂ ಬೇಕಾಗಿದೆ ಎಂದು ಕಾಂಗ್ ಹೇಳಿದ್ದಾರೆ.

ಕಳೆದ ತಿಂಗಳು, ಐಐಟಿ-ಕಾನ್ಪುರದ ವಿಜ್ಞಾನಿ ಮಣೀಂದ್ರ ಅಗರವಾಲ್ ಅವರಿಂದ ಕೋವಿಡ್ ಬಗೆಗಿನ ಮೂವರ ತಂಡವೊಂದು ಅಕ್ಟೋಬರ್-ನವೆಂಬರ್ ನಡುವೆ ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಬರಬಹುದು ಎಂದು ಹೇಳಿತ್ತು.

ಇದನ್ನೂ ಓದಿ: ಕರುನಾಡಿನಲ್ಲಿ ನಡೆದ ಬೃಹತ್ ಕೋವಿಡ್ ಲಸಿಕಾ ಅಭಿಯಾನ; ಒಂದೇ ದಿನ 27 ಲಕ್ಷಕ್ಕೂ ಅಧಿಕ ಲಸಿಕೀಕರಣ..‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.