ಮಲ್ಕಂಗಿರಿ: ಒಡಿಶಾದ ಗಾಗ್‌ಪದರ್ ಗ್ರಾಮದ ಬಳಿ ಇಂದು ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡಿದ್ದು, ಈ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಯೋಧನೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಮಲ್ಕಂಗಿರಿಯ ಮಥಿಲಿ ಬ್ಲಾಕ್‌ನಿಂದ ವರದಿಯಾಗಿದೆ.
ಗಾಯಾಳು ಯೋಧನನ್ನು ಧರ್ಮೇಂದ್ರ ಸಾಹೂ ಎಂದು ಗುರುತಿಸಲಾಗಿದ್ದು, ಅವರ ಎಡಗಾಲಿಗೆ ತೀವ್ರವಾದ ಗಾಯವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಹಿಂದಿರುಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ.
ಈ ಸುದ್ದಿಯನ್ನೂ ಓದಿ: ಕಾಶ್ಮೀರ: ಬಾರ್ಡರ್ ಪೋಸ್ಟ್, ಗ್ರಾಮ ಗುರಿಯಾಗಿಸಿ ಪಾಕ್ನಿಂದ ಗುಂಡಿನ ದಾಳಿ
ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಮಾವೋವಾದಿಗಳು ಇಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ನಂತರ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.