ETV Bharat / bharat

ಭಾರತ - ಪಾಕ್​ ಪಂದ್ಯ.. ಹೋಟೆಲ್​ ಫುಲ್​ ಬುಕ್​, ವರ್ಕೌಟ್​ ಆಯ್ತು ಕ್ರಿಕೆಟ್​ ಅಭಿಮಾನಿಗಳ ಸೂಪರ್​ ಐಡಿಯಾ!! - ಬಹು ನಿರೀಕ್ಷಿತ ಭಾರತ ಪಾಕಿಸ್ತಾನ ವಿಶ್ವಕಪ್ ಹಣಾಹಣಿ

2023ರ ವಿಶ್ವಕಪ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ - ಪಾಕಿಸ್ತಾನ ಮುಖಾಮುಖಿಯಾಗಲಿವೆ. ಅಕ್ಟೋಬರ್ 15 ರಂದು ನಡೆಯಲಿರುವ ಪಂದ್ಯಕ್ಕಾಗಿ ಹೋಟೆಲ್‌ಗಳು ಭರ್ತಿಯಾದ ನಂತರ ಕ್ರಿಕೆಟ್​ ಅಭಿಮಾನಿಗಳು ಮಾಡಿದ್ದ ಐಡಿಯಾ ಈಗ ವರ್ಕೌಟ್​ ಆಗಿದೆ.

ICC World Cup 2023  India vs Pakistan match  Ahmedabad hotel full  fans booking beds in hospital  ಭಾರತ ಪಾಕ್​ ಪಂದ್ಯ  ಹೋಟೆಲ್​ ಫುಲ್​ ಬುಕ್  ವರ್ಕೌಟ್​ ಆಯ್ತು ಕ್ರಿಕೆಟ್​ ಅಭಿಮಾನಿಗಳ ಸೂಪರ್​ ಐಡಿಯಾ  2023ರ ವಿಶ್ವಕಪ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ  ಭಾರತ ಪಾಕಿಸ್ತಾನ ಮುಖಾಮುಖಿ  ನರೇಂದ್ರ ಮೋದಿ ಕ್ರೀಡಾಂಗಣ  ಬಹು ನಿರೀಕ್ಷಿತ ಭಾರತ ಪಾಕಿಸ್ತಾನ ವಿಶ್ವಕಪ್ ಹಣಾಹಣಿ  ಅಭಿಮಾನಿಗಳಿಗೆ ಶಾಕಿಂಗ್​ ಸಂಗತಿ
ವರ್ಕೌಟ್​ ಆಯ್ತು ಕ್ರಿಕೆಟ್​ ಅಭಿಮಾನಿಗಳ ಸೂಪರ್​ ಐಡಿಯಾ!!
author img

By

Published : Jul 22, 2023, 7:20 PM IST

ಅಹಮದಾಬಾದ್, ಗುಜರಾತ್​: ಅಕ್ಟೋಬರ್ 15 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ವಿಶ್ವಕಪ್ ಹಣಾಹಣಿಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಶಾಕಿಂಗ್​ ಸಂಗತಿಯೊಂದು ಮುನ್ನೆಲೆಗೆ ಬಂದಿದೆ. ಹೌದು, ನಗರದ ಬಹುತೇಕ ಎಲ್ಲಾ ಹೋಟೆಲ್‌ಗಳು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಆದರೆ ಲಭ್ಯವಿರುವ ಕೆಲವು ಕೊಠಡಿಗಳ ಬಾಡಿಗೆ ತುಂಬಾ ಹೆಚ್ಚಾಗಿದ್ದು, ಸಾಮಾನ್ಯರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

  • Fans are booking hospital beds in Ahmedabad as hotel rooms hit record breaking rates for India Vs Pakistan match. (Ahmedabad Mirror). pic.twitter.com/RZnfIZOURz

    — Mufaddal Vohra (@mufaddal_vohra) July 21, 2023 " class="align-text-top noRightClick twitterSection" data=" ">

ಐಸಿಸಿ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿಯ ಘೋಷಣೆಯ ನಂತರ ಪಂದ್ಯದ ದಿನದಂದು ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ತುಂಬಾನೇ ಹೆಚ್ಚಾಗಿವೆ. ಇದರಿಂದಾಗಿ ಅನೇಕ ಅಭಿಮಾನಿಗಳು ಕೈಗೆಟುಕುವ ಬೆಲೆಯಲ್ಲಿ ಲಾಡ್ಜ್​ ರೂಂಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ಹೋಟೆಲ್ ಕೊಠಡಿಗಳು ಈಗಾಗಲೇ ಸಂಪೂರ್ಣವಾಗಿ ಬುಕ್ ಆಗಿದ್ದು, ಕೆಲವೊಂದು ರೂಂಗಳ ಬೆಲೆಗಳು 1.5 ಲಕ್ಷಕ್ಕೂ ಅಧಿಕವಾಗಿವೆ. ಇದರಿಂದಾಗಿ ಕ್ರಿಕೆಟ್‌ನ ಬಹುಮುಖ್ಯ ಪಂದ್ಯದ ಸಮಯದಲ್ಲಿ ಇಲ್ಲಿ ಉಳಿಯಲು ಸ್ಥಳವನ್ನು ಹುಡುಕಲು ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ತೊಂದರೆಯಾಗಿದೆ.

ಕೆಲವು ಅಭಿಮಾನಿಗಳು ಈ ಅದ್ಭುತ ಸವಾಲನ್ನು ನಿಭಾಯಿಸಲು ಅದ್ಭುತ ಮಾರ್ಗವನ್ನು ಸಹ ಕಂಡುಕೊಂಡಿದ್ದಾರೆ. ಕ್ರಿಕೆಟ್ ನಿರೂಪಕ ಮುಫದ್ದಲ್ ವೋಹ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪ್ರವೃತ್ತಿಯನ್ನು ತೋರಿಸಿದರು. ಅಹಮದಾಬಾದ್‌ನಲ್ಲಿ ವಸತಿಗಿಂತ ಆಸ್ಪತ್ರೆಯ ಹಾಸಿಗೆಗಳನ್ನು ಕಾಯ್ದಿರಿಸುವುದು ಉತ್ತಮ ಎಂದು ಕೆಲವು ಅಭಿಮಾನಿಗಳು ಕಂಡುಕೊಂಡಿದ್ದಾರೆ.

ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲು ನಗರವು ಸಜ್ಜಾಗುತ್ತಿದ್ದಂತೆ ಆಸ್ಪತ್ರೆಯ ಆಡಳಿತಗಾರರು ಭಾರತ - ಪಾಕಿಸ್ತಾನ ಪಂದ್ಯದ ದಿನಾಂಕದಂದು ಬೆಡ್ ಬುಕ್ಕಿಂಗ್‌ಗಳಲ್ಲಿ ಅಸಾಮಾನ್ಯ ಹೆಚ್ಚಳವನ್ನು ಗಮನಿಸಿದ್ದಾರೆ. ಹೋಟೆಲ್ ಕೊಠಡಿಗಳಲ್ಲಿನ ಹಣದುಬ್ಬರವು ಅಹಮದಾಬಾದ್‌ಗೆ ಮಾತ್ರ ಸೀಮಿತವಾಗಿಲ್ಲ. ಅಕ್ಕಪಕ್ಕದ ನಗರಗಳ ಹೋಟೆಲ್ ದರದಲ್ಲಿಯೂ ತೀವ್ರ ಏರಿಕೆಯಾಗಿದೆ. ಅಹಮದಾಬಾದ್‌ನಿಂದ ಕೇವಲ ಒಂದು ಗಂಟೆ ದೂರದಲ್ಲಿರುವ ವಡೋದರಾದಲ್ಲಿ ಹೋಟೆಲ್ ಬುಕಿಂಗ್ ದರಗಳು ಸಾಮಾನ್ಯ ದರಕ್ಕಿಂತ ಆರರಿಂದ ಏಳು ಪಟ್ಟು ಹೆಚ್ಚಾಗಿದೆ.

ಓದಿ: FIFA Women's World Cup: ಆಕ್ಲೆಂಡ್​ನಲ್ಲಿ ಗುಂಡಿನ ದಾಳಿ, ಇಬ್ಬರು ಸಾವು

ಮುಂದುವರಿದ ಹಗ್ಗಜಗ್ಗಾಟ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್​ ಹಗ್ಗಜಗ್ಗಾಟ ಮುಂದುವರಿದಿದೆ. ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್​ನಲ್ಲಿ ಭಾರತ ಭಾಗವಹಿಸಲಿಲ್ಲ ಎಂದು ಭಾರತ ಹೇಳಿದರೆ, ಭಾರತದಲ್ಲಿ ನಡೆಯುವ ವಿಶ್ವಕಪ್​ ಅನ್ನು ತಾನು ಗೈರಾಗುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಎರಡೂ ಕ್ರಿಕೆಟ್​ ಸಂಸ್ಥೆಗಳ ನಡುವಿನ ಮನಸ್ತಾಪ ಬಗೆಹರಿಸಲು ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ ಶತಪ್ರಯತ್ನ ನಡೆಸುತ್ತಿದೆ. ಈಗಾಗಲೇ ಪಾಕ್​ ಮಂಡಳಿ ಜೊತೆ ಅದರ ನಿಯೋಗ ಮಾತುಕತೆಯನ್ನೂ ನಡೆಸಿದೆ. ಆದಾಗ್ಯೂ ಯಾವುದೇ ನಿರ್ಣಯ ಹೊರಬಿದ್ದಿಲ್ಲ ಎಂಬ ಮಾಹಿತಿ ಜುಲೈ ಎರಡನೇ ವಾರದಲ್ಲಿ ತಿಳಿದುಬಂದಿತ್ತು.

ಪಾಕಿಸ್ತಾನ ಮತ್ತು ಭಾರತದ ರಾಜಕೀಯ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್​ ಮೇಲೆ ಅದು ಪರಿಣಾಮ ಬೀರಿದೆ. ಭದ್ರತೆ ಕಾರಣಕ್ಕಾಗಿ ಟೀಂ ಇಂಡಿಯಾ ಪಾಕ್​ಗೆ ತೆರಳಲು ಹಿಂದೇಟು ಹಾಕುತ್ತಿದೆ. ಹೀಗಿರುವಾಗ ಪಾಕಿಸ್ತಾನಕ್ಕೆ ಸೂಕ್ತ ಭದ್ರತೆ ನೀಡುವ ಆಶ್ವಾಸನೆ ನೀಡಿದಾಗ್ಯೂ ಅದು ಭಾರತಕ್ಕೆ ಬರಲು ತಗಾದೆ ತೆಗೆಯುತ್ತಿದೆ. ಇದು ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ.

ಪಾಕಿಸ್ತಾನ ಅದೆಷ್ಟೇ ವಿರೋಧ ವ್ಯಕ್ತಪಡಿಸಿದರೂ ಭಾರತದಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಭಾಗವಹಿಸಲು ಒಪ್ಪಲೇಬೇಕು. ಇಲ್ಲವಾದಲ್ಲಿ ಭಾರಿ ನಷ್ಟ ಅನುಭವಿಸುವುದು ಮಾತ್ರ ಖಂಡಿತ. ಈ ಪ್ರಜ್ಞೆ ಪಾಕ್​ ಮಂಡಳಿಗಿದ್ದರೂ ಹಠಕ್ಕೆ ಬಿದ್ದಂತೆ ಅದು ವರ್ತಿಸುತ್ತಿದೆ. ಹೀಗಾಗಿ ಪಾಕಿಸ್ತಾನದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.