ETV Bharat / bharat

IBPS Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ 8594 ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ

ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ 606 ಮತ್ತು ಕರ್ನಾಟಕ ವಿಕಾಸ್​ ಗ್ರಾಮೀಣ ಬ್ಯಾಂಕ್​​ನ ಒಟ್ಟು 200 ಹುದ್ದೆಗಳ ಭರ್ತಿಗೂ ಅಧಿಸೂಚನೆ ಹೊರಡಿಸಲಾಗಿದೆ

IBPS RRB Recruitment For Karnataka Regional Bank

author img

By

Published : Jun 20, 2023, 12:47 PM IST

ದೇಶದ ವಿವಿಧ ಬ್ಯಾಂಕಿಂಗ್​ ವಲಯದಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಇನ್ಸ್​ಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್ (IBPS) ಅರ್ಜಿ ಆಹ್ವಾನಿಸಿದೆ. ಪ್ರಾದೇಶಿಕ ಬ್ಯಾಂಕಿಂಗ್​ ವಲಯದಲ್ಲಿ (ಆರ್​ಆರ್​ಬಿ) ನಡೆಯುತ್ತಿರುವ ಈ ನೇಮಕಾತಿಯಲ್ಲಿ ಒಟ್ಟು 8594 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ 606 ಮತ್ತು ಕರ್ನಾಟಕ ವಿಕಾಸ್​ ಗ್ರಾಮೀಣ ಬ್ಯಾಂಕ್​​ನ ಒಟ್ಟು 200 ಹುದ್ದೆಗಳ ಭರ್ತಿಗೂ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಜೂನ್​ 21 ಕಡೆಯ ದಿನವಾಗಿದೆ.

ಹುದ್ದೆ ವಿವರ: ಐಬಿಪಿಎಸ್​ನ ಆರ್​ಆರ್​ಬಿ ಹುದ್ದೆಗಳ ಭರ್ತಿ ನಡೆಯಲಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನ 606 ಹುದ್ದೆ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ನ 200 ಹುದ್ದೆಗಳ ಭರ್ತಿ ನಡೆಯಲಿದೆ.

ಕರ್ನಾಟಕ ಪ್ರಾದೇಶಿಕ ಬ್ಯಾಂಕ್​ನಲ್ಲಿ ಆಫೀಸರ್​ ಅಸಿಸ್ಟೆಂಟ್​ (ಮಲ್ಟಿ ಪರ್ಪಸ್​) 450 ಹುದ್ದೆ, ಆಫೀಸರ್​ ಸ್ಕೇಲ್​-1 (ಅಸಿಸ್ಟೆಂಟ್​ ಮ್ಯಾನೇಜರ್​​)- 350 ಹುದ್ದೆ, ಆಫೀಸರ್​ ಸ್ಕೇಲ್​ 2- 4 (ಕಾನೂನು), ಆಫೀಸರ್​ ಸ್ಕೇಲ್​ 2 (ಸಿಎ)- 2 ಹುದ್ದೆಗಳ ಭರ್ತಿ ನಡೆಯಲಿದೆ.

ಕಿರು ಅಧಿಸೂಚನೆ
ಕಿರು ಅಧಿಸೂಚನೆ

ವಿದ್ಯಾರ್ಹತೆ:

  • ಆಫೀಸರ್​ ಅಸಿಸ್ಟೆಂಟ್​ (ಮಲ್ಟಿ ಪರ್ಪಸ್​) ಹುದ್ದೆಗೆ ಪದವಿ,
  • ಆಫೀಸರ್​ ಸ್ಕೇಲ್​-1 (ಅಸಿಸ್ಟೆಂಟ್​ ಮ್ಯಾನೇಜರ್​​) - ಪದವಿ,
  • ಆಫೀಸರ್​ ಸ್ಕೇಲ್​ 2- 4 (ಕಾನೂನು)- ಎಲ್​ಎಲ್​ಬಿ,
  • ಆಫೀಸರ್​ ಸ್ಕೇಲ್​ 2 (ಸಿಎ)- 2 - ಸಿಎ

ವಯೋಮಿತಿ:

  • ಆಫೀಸರ್​ ಅಸಿಸ್ಟೆಂಟ್​ (ಮಲ್ಟಿ ಪರ್ಪಸ್​) ಹುದ್ದೆಗೆ 18 ರಿಂದ 28 ವರ್ಷ,
  • ಆಫೀಸರ್​ ಸ್ಕೇಲ್​-1 (ಅಸಿಸ್ಟೆಂಟ್​ ಮ್ಯಾನೇಜರ್​​) - 18 ರಿಂದ 30 ವರ್ಷ,
  • ಆಫೀಸರ್​ ಸ್ಕೇಲ್​ 2- 4 (ಕಾನೂನು)- 18 ರಿಂದ 30 ವರ್ಷ,
  • ಆಫೀಸರ್​ ಸ್ಕೇಲ್​ 2 (ಸಿಎ)- 2 - 21 ರಿಂದ 32 ವರ್ಷ

ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗೆ 175 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಇತರ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೂರು ಹಂತದಲ್ಲಿ ಆಯ್ಕೆ ಮಾಡಲಾಗುವುದು. ಮೊದಲಿಗೆ ಪ್ರಿಲಿಮಿನರಿ ಎಕ್ಸಾಮಿನೇಷನ್​ ನಂತರ ಮುಖ್ಯ ಪರೀಕ್ಷೆ (ಬಹು ಆಯ್ಕೆ) ಕಡೆಯದಾಗಿ ಸಂದರ್ಶನ ಮೂಲಕ ಆಯ್ಕೆ ನಡೆಸಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಧಿಕೃತ ಜಾಲತಾಣವಾದ ibps.in ಭೇಟಿ ನೀಡಿ ಅಧಿಸೂಚನೆಯನ್ನು ಮೊದಲು ಸರಿಯಾಗಿ ಗಮನಿಸಬೇಕು. ಬಳಿಕ ಅರ್ಜಿ ಭರ್ತಿಗೆ ಮುಂದಾಗಬೇಕು. ಅಗತ್ಯ ದಾಖಲಾತಿ, ಮಾಹಿತಿಗಳೊಂದಿಗೆ ನಿಗದಿತದ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಕೆ ಮಾಡಬೇಕು. ಜೂನ್​ 1ರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 21 ಆಗಿದೆ.

ಇದನ್ನೂ ಓದಿ: ಬಿಇಎಲ್​ ನಾನ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಉದ್ಯೋಗಾವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.