ಚಂಡೀಗಢ: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಎಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರನ್ನು ವಿಜಿಲೆನ್ಸ್ ಬ್ಯೂರೋ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಸೋಮವಾರ ತಡರಾತ್ರಿ ಕಾರ್ಯಾಚರಣೆಯಲ್ಲಿ ಎಎಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಚಂಡೀಗಢದ ಸೆಕ್ಟರ್ - 17ರಲ್ಲಿ ಪತ್ನಿಯೊಂದಿಗೆ ಶಾಪಿಂಗ್ ಮಾಡುತ್ತಿದ್ದಾಗಲೇ ಸಂಜಯ್ ಪೊಪ್ಲಿ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ಇಂದು ಕೋರ್ಟ್ಗೆ ಹಾಜರು: ಸಂಜಯ್ ಪೊಪ್ಲಿ 2008ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ. ಇಡೀ ಲಂಚ ಹಗರಣದಲ್ಲಿ ಭಾಗಿಯಾಗಿದ್ದ ಸಂಜಯ್ ಪೊಪ್ಲಿ ಅವರ ಸಹಾಯಕ ಕಾರ್ಯದರ್ಶಿ ಸಂದೀಪ್ ವತ್ಸ್ ಅವರನ್ನೂ ಜಲಂಧರ್‌ನಿಂದ ಬಂಧಿಸಲಾಗಿದೆ. ವಿಜಿಲೆನ್ಸ್ ಬ್ಯೂರೋ ಇವರಿಬ್ಬರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಲಂಚದ ಆರೋಪ: ಒಳಚರಂಡಿ ಗುತ್ತಿಗೆದಾರರಿಂದ ಲಂಚ ಪಡೆದ ಆರೋಪ ಸಂಜಯ್ ಪೊಪ್ಲಿ ಮೇಲಿದೆ. ನೀರು ಮತ್ತು ಒಳಚರಂಡಿ ಮಂಡಳಿಯ ಸಿಇಒ ಆಗಿ ಸಂಜಯ್ ಪೊಪ್ಲಿ ಕೆಲಸ ಮಾಡುತ್ತಿದ್ದರು. ಅವರು ಲಂಚದ ಬಗ್ಗೆ ಮಾತನಾಡಿರುವ ಧ್ವನಿಮುದ್ರಣವೊಂದು ಹೊರಬಿದ್ದಿತ್ತು. ಆ ಬಳಿಕವೇ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರನ್ನು ಬಂಧಿಸಲಾಗಿದೆ. ಮೊಹಾಲಿ ವಿಜಿಲೆನ್ಸ್ ಬ್ಯೂರೋ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 9, ಭ್ರಷ್ಟಾಚಾರ ಕಾಯ್ದೆಯ ಸೆಕ್ಷನ್ 7, 7 ಎ ಮತ್ತು 120 ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಸಹಾಯವಾಣಿ ಸಂಖ್ಯೆಗೆ ದೂರು: ಅಧಿಕಾರಿಗೆ ಲಂಚ ನೀಡಿದ ವ್ಯಕ್ತಿ 17 ನಿಮಿಷದ ದೂರಿನ ದಾಖಲಾತಿ ಸಮೇತ ಸಿಎಂ ಸಹಾಯವಾಣಿ ಸಂಖ್ಯೆಗೆ ಜೂ.3ರಂದು ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ಅಧಿಕಾರಿಗಳ ತಂಡ ತನಿಖೆ ಆರಂಭಿಸಿ ಕ್ರಮ ಕೈಗೊಂಡಿದೆ.
ಇದನ್ನು ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: 5ನೇ ದಿನದ ವಿಚಾರಣೆಗಾಗಿ ರಾಹುಲ್ ಗಾಂಧಿಗೆ ಇಡಿ ಸಮನ್ಸ್