ನವದೆಹಲಿ : ಹೆಲಿಕಾಪ್ಟರ್ ಪತನದ ಪ್ರಕರಣವನ್ನು ತ್ರಿ-ಸೇವಾ ತನಿಖೆಗೆ ಐಎಫ್ ಆದೇಶ ನೀಡಿದೆ. ಇದರ ಮುಂದಾಳತ್ವವನ್ನು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಸತ್ತಿಗೆ ತಿಳಿಸಿದರು. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು IAF ನ ಹಿರಿಯ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ.
General Rawat helicopter crashed : 08 ಡಿಸೆಂಬರ್ 21 ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತ ತನಿಖೆ ಮಾಡಲು IAF ತ್ರಿ-ಸೇವಾ ನ್ಯಾಯಾಲಯವನ್ನು ಸ್ಥಾಪಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಮತ್ತು ಸತ್ಯಗಳನ್ನು ಹೊರತರಲಾಗುವುದು. ಅಲ್ಲಿಯವರೆಗೆ, ಯಾರೂ ಮಾಹಿತಿಯಿಲ್ಲದೇ ಊಹಾಪೋಹಗಳು ಬಿತ್ತಬಾರದು ಎಂದು IAF ಟ್ವಿಟರ್‌ನಲ್ಲಿ ಮನವಿ ಮಾಡಿದೆ.
-
IAF has constituted a tri-service Court of Inquiry to investigate the cause of the tragic helicopter accident on 08 Dec 21. The inquiry would be completed expeditiously & facts brought out. Till then, to respect the dignity of the deceased, uninformed speculation may be avoided.
— Indian Air Force (@IAF_MCC) December 10, 2021 " class="align-text-top noRightClick twitterSection" data="
">IAF has constituted a tri-service Court of Inquiry to investigate the cause of the tragic helicopter accident on 08 Dec 21. The inquiry would be completed expeditiously & facts brought out. Till then, to respect the dignity of the deceased, uninformed speculation may be avoided.
— Indian Air Force (@IAF_MCC) December 10, 2021IAF has constituted a tri-service Court of Inquiry to investigate the cause of the tragic helicopter accident on 08 Dec 21. The inquiry would be completed expeditiously & facts brought out. Till then, to respect the dignity of the deceased, uninformed speculation may be avoided.
— Indian Air Force (@IAF_MCC) December 10, 2021
ಇಂದು ಸಂಜೆ ದೆಹಲಿಯಲ್ಲಿ ಸೇನಾ ಗೌರವಗಳೊಂದಿಗೆ ಜನರಲ್ ರಾವತ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೇಂದ್ರ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಹಲವು ಪ್ರಮುಖ ನಾಯಕರು ಜನರಲ್ ರಾವತ್ ಅವರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.