ETV Bharat / bharat

ದಾಲ್​ ಸರೋವರದ ಮೇಲೆ 'ಏರ್​​ ಶೋ': 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಪರೂಪದ ಅವಕಾಶ - ದಾಲ್​ ಸರೋವರ ಏರ್​ ಶೋ

ಭಾರತೀಯ ವಾಯುಪಡೆ (ಐಎಎಫ್‌) ಸೆಪ್ಟೆಂಬರ್​​ 26ರಂದು ಜಮ್ಮು ಕಾಶ್ಮೀರದ ಪ್ರಸಿದ್ಧ ದಾಲ್‌ ಸರೋವರದ ಮೇಲೆ 'ಏರ್‌ ಶೋ' ನಡೆಸಲಿದೆ. ಯುವ ಸಮುದಾಯವನ್ನು ವಾಯುಪಡೆಗೆ ಸೇರುವಂತೆ ಪ್ರೇರೇಪಿಸುವುದು, ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

air show
air show
author img

By

Published : Sep 15, 2021, 5:15 PM IST

ನವದೆಹಲಿ: 'ಆಜಾದಿ ಕಾ ಅಮೃತ್​ ಮಹೋತ್ಸವ' ಆಚರಣೆಯ ಭಾಗವಾಗಿ ಶ್ರೀನಗರದ ದಾಲ್​​ ಸರೋವರದ ಮೇಲೆ ಏರ್​ ಶೋ ನಡೆಸಲು ಭಾರತೀಯ ವಾಯುಪಡೆ ಸಜ್ಜಾಗಿದೆ. ಸೆಪ್ಟೆಂಬರ್​ 26ರಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯದ ಯುವಕರು ಐಎಎಫ್​ ಸೇರಲು ಪ್ರೇರೇಪಿಸುವ ಉದ್ದೇಶದಿಂದ ಈ ಏರ್​ ಶೋ ಆಯೋಜಿಸಲಾಗಿದ್ದು, ಇದರಲ್ಲಿ ವಿವಿಧ ಶಾಲಾ-ಕಾಲೇಜುಗಳ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ನ್ಯೂಸ್: ಮೈದಾನಕ್ಕೆ ತೆರಳಿ IPL ವೀಕ್ಷಿಸಲು ಅವಕಾಶ; ಆದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ..

ಈ ಬಗ್ಗೆ ಮಾತನಾಡಿರುವ ಐಎಎಫ್​​​ ಅಧಿಕಾರಿ ಪಾಂಡುರಂಗ ಕೆ.ಪೋಲ್​, ಕಣಿವೆ ನಾಡಿನ ಯುವಕರನ್ನು ವಾಯುಪಡೆಗೆ ಸೆಳೆಯುವುದು ಇದರ ಉದ್ದೇಶ. ಇದರ ಜೊತೆಗೆ, ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದರು. 'ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ' ಎಂಬುದು ಏರ್‌ಶೋ ಮುಖ್ಯ ಥೀಮ್​ ಆಗಿದೆ. ವಿದ್ಯಾರ್ಥಿಗಳ ಜೊತೆಗೆ ಸುಮಾರು 700 ಶಿಕ್ಷಕರು ಈ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.