ನವದೆಹಲಿ: ವೈದ್ಯಕೀಯ ಆಮ್ಲಜನಕ ಮತ್ತು ಕೋವಿಡ್ ಪರಿಹಾರ ಕಾರ್ಯಾಚರಣೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ಭಾರತೀಯ ವಾಯುಪಡೆ ತನ್ನ 732 ಬಗೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಂಡಿದೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶದೊಳಗೆ ಮತ್ತು ವಿದೇಶಗಳಿಂದ 498 ಆಮ್ಲಜನಕ ಟ್ಯಾಂಕರ್‌ಗಳನ್ನು ಸ್ಥಳಾಂತರಿಸಿ, ಜನರ ನೆರವಿಗೆ ನಿಂತಿವೆ. ಈ ಮೆಗಾ ಕಾರ್ಯಾಚರಣೆಗಾಗಿ ವಾಯುಪಡೆಯು ತಲಾ ಆರು ಸಿ -17 ಮತ್ತು ಇಲ್ಯುಶಿನ್ -76 ಪ್ರಯಾಣಿಕ ವಿಮಾನಗಳು ಮತ್ತು 30 ಮಧ್ಯಮ - ಲಿಫ್ಟ್ ಸಿ -130 ಜೆ ಮತ್ತು ಎಎನ್ - 32 ವಿಮಾನಗಳನ್ನು ಒಳಗೊಂಡಂತೆ 42 ಸಾರಿಗೆ ವಿಮಾನಗಳನ್ನು ನಿಯೋಜಿಸಿದೆ.
ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಕುರಿತು ಮತ್ತೊಂದು ಶಾಕಿಂಗ್ ಸುದ್ದಿ.. ವೈರಾಲಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದೇನು?
403 ಆಮ್ಲಜನಕ ಟ್ಯಾಂಕರ್ ಮತ್ತು 163.3 ಮೆಟ್ರಿಕ್ ಟನ್ ಇತರ ಸಾಧನಗಳನ್ನು ಸಾಗಿಸಲು 939 ಗಂಟೆಗಳ ಕಾಲ ಭಾರತೀಯ ಸೇನಾ ಹೆಲಿಕಾಪ್ಟರ್ ಹಾಗೂ ವಿಮಾನಗಳು ಹಾರಾಟ ನಡೆಸಿವೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ. ಐಎಎಫ್ ವಿಮಾನಗಳು ಜರ್ಮನಿ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಸಿಂಗಾಪುರ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ದೇಶಗಳಿಗೆ ತೆರಳಿ ಆಮ್ಲಜನಕವನ್ನು ತೆಗೆದುಕೊಂಡು ಬಂದಿವೆ.