ನಿಯೋಮ್(ಲಡಾಖ್): ಭಾರತೀಯ ವಾಯು ಸೇನೆ ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ವಿಶ್ವದ ಅತಿ ಎತ್ತರದ ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್ ಟವರ್(ATC) ನಿರ್ಮಿಸಿದೆ. ಪೂರ್ವ ಲಡಾಖ್ನ ಅಡ್ವಾನ್ಸ್ ಲ್ಯಾಂಡಿಂಗ್ ಪ್ರದೇಶವಾಗಿರುವ ನಿಯೋಮ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಏರ್ ಟ್ರಾಫಿಕ್ ನಿರ್ಮಾಣಗೊಂಡಿದೆ.
ಕಳೆದ ಕೆಲ ತಿಂಗಳ ಹಿಂದೆ ಭಾರತ - ಚೀನಾ ನಡುವೆ ನಡೆದ ಸಂಘರ್ಷದ ಬಳಿಕ ಈ ಪ್ರದೇಶದಲ್ಲಿ ಭಾರತೀಯ ಸೇನೆ ಹೆಚ್ಚು ಸಕ್ರಿಯವಾಗಿದ್ದು, ಇದೀಗ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ನಿರ್ಮಾಣ ಮಾಡಿದೆ. ಈ ಮೂಲಕ ಚೀನಾ ಗಡಿಯಲ್ಲಿ ಭಾರತೀಯು ಸೇನೆ ತನ್ನ ವಾಯು ಸೇನೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಪೂರ್ವ ಲಡಾಖ್ನಲ್ಲಿ ಈಗಾಗಲೇ ವಿಶ್ವದ ಅತಿ ಎತ್ತರದ ರಸ್ತೆ ನಿರ್ಮಾಣಗೊಂಡಿದ್ದು, 19,300 ಅಡಿ ಎತ್ತರದಲ್ಲಿ ರಸ್ತೆ ನಿರ್ಮಾಣವಾಗಿದೆ.
ಮೊಬೈಲ್ ಏರ್ ಟ್ರಾಫಿಕ್ ಕಂಟ್ರೋಲ್(ATC) ಟವರ್ ಪೂರ್ವ ಲಡಾಖ್ನಲ್ಲಿ ಕಾರ್ಯನಿರ್ವಹಿಸುವ ವಿಂಗ್ ವಿಮಾನ ಮತ್ತು ಹೆಲಿಕಾಪ್ಟರ್ಗಳ ಕಾರ್ಯಾಚರಣೆ ನಿಯಂತ್ರಣ ಮಾಡಲಿದೆ. ಭಾರತೀಯ ವಾಯುಪಡೆ ಈ ಪ್ರದೇಶದಲ್ಲಿ ರಫೇಲ್, ಮಿಗ್-29 ಯುದ್ಧ ವಿಮಾನ ನಿಯೋಜನೆ ಮಾಡಿದೆ. ಚೀನಾ ಯೋಧರಿಗೆ ಟಾಂಗ್ ನೀಡುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದನ್ನೂ ಓದಿರಿ: 750 ಕೋಟಿ ರೂ. ವೆಚ್ಚದಲ್ಲಿ ಲಡಾಖ್ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ: ಕೇಂದ್ರ ಅನುಮೋದನೆ
ಲಡಾಖ್ನಲ್ಲಿ ಕೇಂದ್ರ ಸರ್ಕಾರ ಕೂಡ ವಿವಿಧ ಅಭಿವೃದ್ದಿ ಪರ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, ಕಳೆದ ಕೆಲ ದಿನಗಳ ಹಿಂದೆ ನಡೆದ ಸಚಿವ ಸಂಪುಟದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಾಣ ಮಾಡಲು ಮುಂದಾಗಿದೆ.