ETV Bharat / bharat

ಹರೇ ಕೃಷ್ಣ ಹರೇ ರಾಮ್​, ತೃಣಮೂಲ ಘೋರ್ ಘೋರ್: ಮೋದಿ ವಿರುದ್ಧ ದೀದಿ ವಾಗ್ದಾಳಿ!

ಮಮತಾ ಬ್ಯಾನರ್ಜಿ ಹೂಗ್ಲಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ್ದು, ಈ ವೇಳೆ ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Mamata Banerjee
Mamata Banerjee
author img

By

Published : Jan 25, 2021, 4:22 PM IST

ಹೂಗ್ಲಿ(ಪಶ್ಚಿಮ ಬಂಗಾಳ): ಜೈ ಶ್ರೀರಾಮ್ ಘೋಷಣೆ ಕೇಳುತ್ತಿದ್ದಂತೆ ಭಾಷಣ ಮಾಡದೆ ತೆರಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ತಮ್ಮ ಆಕ್ರೋಶ ಹೊರಹಾಕಿದ್ದು, ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದೆರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಭಾಷಣ ಮಾಡಲು ಮಮತಾ ಬ್ಯಾನರ್ಜಿ ಆಗಮಿಸುತ್ತಿದ್ದಂತೆ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಮತಾ, ಸಮಾರಂಭಕ್ಕೆ ಕರೆದು ಅವಮಾನಿಸಬೇಡಿ ಎಂದು ಸಭೆಯಿಂದ ಹೊರ ನಡೆದಿದ್ದರು.

ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ

ಇಂದು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಮತಾಂಧ ದೇಶದ್ರೋಹಿಗಳು ಪ್ರಧಾನಿ ಮುಂದೆ ನನಗೆ ಕೀಟಲೆ ಮಾಡುವ ಧೈರ್ಯ ಮಾಡಿದರು. ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ನೇತಾಜಿ ಸುಭಾಷ್​ ಚಂದ್ರ ಬೋಸ್ ಎಲ್ಲರ ನಾಯಕ. ಆದರೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ರವೀಂದ್ರನಾಥ್ ಠಾಗೂರ್​, ವಿದ್ಯಾಸಾಗರ್​ ಸೇರಿದಂತೆ ಎಲ್ಲ ವಿದ್ವಾಂಸರಿಗೂ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಓದಿ: ನೇತಾಜಿ, ಬಂಗಾಳಕ್ಕೆ ಬಿಜೆಪಿ ಅವಮಾನ: ಮಮತಾ ಬ್ಯಾನರ್ಜಿ ಆಕ್ರೋಶ

ಇಂದಿಗೂ ದೇಶದಲ್ಲಿ ಹಿರಿಯ ಮಹಿಳೆಯರು, ಹರೇ ಕೃಷ್ಣ, ಹರೇ ರಾಮ್​ ಎನ್ನುತ್ತಾರೆ. ನಾನು ಹರೇ ಕೃಷ್ಣ, ಹರೇ ರಾಮ್​, ಬಿಜೆಪಿ ದೇಶ ಬಿಟ್ಟು ಹೋಗಲಿ ಎಂದು ಹೇಳುತ್ತೇನೆ. ಹರೇ ಕೃಷ್ಣ ಹರೇ ಹರೇ ತೃಣಮೂಲ ಘೋರ್ ಘೋರ್ (ಜೈ) ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಇದೇ ವೇಳೆ ತೃಣಮೂಲ ಕಾಂಗ್ರೆಸ್​ ಬಿಡಲು ಸಾಲುಗಟ್ಟಿ ನಿಂತಿರುವವರು ಆದಷ್ಟು ಬೇಗ ಹೊರಡಲಿ. ಬಂಗಾಳ ಮತ್ತು ಟಿಎಂಸಿ ನಿಮಗೆ ಅಗತ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಭಯದಿಂದ ಅವರು ಹೊರಟು ಹೋಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.