ಮುಂಬೈ (ಮಹಾರಾಷ್ಟ್ರ): ನಾನು ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೈವೇಗಾಗಿ ರಿಲಯನ್ಸ್ ಟೆಂಡರ್ ಅನ್ನು ತಿರಸ್ಕರಿಸಿದ್ದೆ. ಇದರಿಂದ ಧೀರೂಭಾಯಿ ಅಂಬಾನಿ ಅವರು ಅಸಮಾಧಾನಗೊಂಡಿದ್ದರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಇಂದು ಮುಂಬೈನಲ್ಲಿ 'ಹೆದ್ದಾರಿಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಹೂಡಿಕೆಯ ಅವಕಾಶಗಳು' ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, 1995ರಲ್ಲಿ ತಾವು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ವೇಳೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗಾಗಿ ರಿಲಯನ್ಸ್ ಕಂಪನಿಯ ಟೆಂಡರ್ ಅನ್ನು ತಿರಸ್ಕರಿಸುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರನ್ನು ಅಸಮಾಧಾನಗೊಳಿಸಿದ್ದೆ.
ಇದನ್ನೂ ಓದಿ: ಜೀವನ ಭದ್ರತೆ ನೀಡುವ ವಿಮಾ ಪಾಲಿಸಿ ನಮಗೆ ಎಷ್ಟು ಉಪಯೋಗ.. ಅನುಸರಿಸಬೇಕಾದ ನಿಯಮಗಳೇನು?
ಅಷ್ಟೇ ಅಲ್ಲ, ಅಂದಿನ ಮುಖ್ಯಮಂತ್ರಿಯಾಗಿದ್ದ ಬಾಳಾಸಾಹೇಬ್ ಠಾಕ್ರೆ ಕೂಡ ಅಸಮಾಧಾನಗೊಂಡಿದ್ದರು. ಯಾಕೆ ಹೀಗೆ ಮಾಡಿದಿರಿ ಎಂದು ಸಿಎಂ ನನ್ನನ್ನು ಕೇಳಿದ್ದರು. ಆ ಯೋಜನೆಗೆ ಮತ್ತು ಬಾಂದ್ರಾ-ವರ್ಲಿ ಸೀ ಲಿಂಕ್ ಮತ್ತು ಹೆದ್ದಾರಿಗಳಂತಹ ಇತರ ಯೋಜನೆಗಳಿಗೆ ನಾವು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತೇವೆ ಎಂದು ನಾನು ಹೇಳಿದೆ. ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದರು. ನಾವು ಯೋಜನೆಗಾಗಿ ಹಲವಾರು ಹೂಡಿಕೆದಾರರ ಬಳಿಗೆ ಹೋಗಿದ್ದೆವು. ಆದರೆ ಈಗ ಹೂಡಿಕೆದಾರರು ನಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.