ETV Bharat / bharat

'ಭಾರತ ನಮ್ಮ ನಿಜವಾದ ಗೆಳೆಯ': 1971ರ ಯುದ್ಧದ ವರ್ಚುವಲ್  ಶೃಂಗಸಭೆಯಲ್ಲಿ ಶೇಖ್‌ ಹಸೀನಾ

ಅಧಿಕಾರ ವಹಿಸಿಕೊಂಡಾಗಿನಿಂದಲೂ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವನ್ನು ಬಲಪಡಿಸುವುದಕ್ಕೆ ನನ್ನ ಆದ್ಯತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಜೊತೆ ಇಂದು ನಡೆದ ವರ್ಚುವಲ್‌ ಶೃಂಗಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Bangladesh PM
ಬಾಂಗ್ಲಾ ಪ್ರಧಾನಿ
author img

By

Published : Dec 17, 2020, 12:52 PM IST

ನವದೆಹಲಿ: 1971ರ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಸದಸ್ಯರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ವಿಜಯ ದಿವಸ್ ಪ್ರಯುಕ್ತ ದ್ವಿಪಕ್ಷೀಯ ವರ್ಚುಯಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಿದ್ದು, ಭಾರತೀಯ ಸೈನಿಕರಿಗೆ ಬಾಂಗ್ಲಾ ಪಿಎಂ ಗೌರವ ಸಲ್ಲಿಸಿದ್ದಾರೆ.

ಉಭಯ ದೇಶಗಳ ಸೈನಿಕರು, ಅಮಾಯಕ ಜನರೂ ಸೇರಿದಂತೆ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 30 ಲಕ್ಷಕ್ಕೂ ಹೆಚ್ಚು ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ವಿಮೋಚನೆಗಾಗಿ ಹೃದಯಪೂರ್ವಕ ಬೆಂಬ ನೀಡಿದ ಭಾರತ ಸರ್ಕಾರ ಮತ್ತು ಜನರಿಗೆ ನಾನು ನನ್ನ ಕೃತಜ್ಞತೆ ತಿಳಿಸುತ್ತೇನೆ. ಭಾರತ ನಮ್ಮ ನಿಜವಾದ ಗೆಳೆಯ ಎಂದು ಶೇಖ್ ಹಸೀನಾ ಹೇಳಿದರು.

  • I pay deep homage to the 3 million martyrs who laid their lives. I pay tribute to the members of the Indian armed forces martyred in the 1971 war. I pay my gratitude to the govt and people of India who extended wholehearted support for the cause of our liberation: Bangladesh PM https://t.co/CRBIx0GWhC pic.twitter.com/OiS3c67MaU

    — ANI (@ANI) December 17, 2020 " class="align-text-top noRightClick twitterSection" data=" ">

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಅಧಿಕಾರ ವಹಿಸಿಕೊಂಡಾಗಿನಿಂದಲೂ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವನ್ನು ಬಲಪಡಿಸುವುದು ಮತ್ತು ಗಾಢವಾಗಿಸುವುದಕ್ಕೆ ಆದ್ಯತೆ ನೀಡಿರುವುದಾಗಿ ತಿಳಿಸಿದರು.

ವಿರೋಧಿ ಶಕ್ತಿಗಳ ವಿರುದ್ಧ ಬಾಂಗ್ಲಾದೇಶದ ವಿಜಯವನ್ನು ಆಚರಿಸುವುದು ನಮಗೆ ಗೌರವವಾಗಿದೆ. ಬಾಂಗ್ಲಾದೇಶವು 50 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ತಮ್ಮ ಜೀವವನ್ನು ತ್ಯಾಗ ಮಾಡಿದ ಉಭಯ ರಾಷ್ಟ್ರಗಳ ಹುತಾತ್ಮರಿಗೆ ಗೌರವ ಸಲ್ಲಿಸುವುದಾಗಿ ಮೋದಿ ಹೇಳಿದ್ದಾರೆ.

ಇದೇ ವೇಳೆ, ಮುಂದಿನ ವರ್ಷ ರಾಷ್ಟ್ರದ ಭೇಟಿಗೆ ಆಹ್ವಾನಿಸಿದ್ದಕ್ಕಾಗಿ ಬಾಂಗ್ಲಾದೇಶದ ಪ್ರಧಾನ ಮಂತ್ರಿಗೆ ಮೋದಿ ಧನ್ಯವಾದ ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.