ಅದಿಲಾಬಾದ್ (ತೆಲಂಗಾಣ): ನಾನು ಎಂದಿಗೂ ರೈತ ಪ್ರತಿಭಟನೆಯ ವಿರೋಧಿಯಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಏಕಲವ್ಯ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು, ಸಾವಯವ ಕೃಷಿಕರೊಂದಿಗೆ ಸಂವಾದ ನಡೆಸಿದರು.
ಇದನ್ನೂ ಓದಿ: ಆಪ್ಗೆ ಐದು ವರ್ಷ ನೀಡಿ.. ಬಿಜೆಪಿಯ 25 ವರ್ಷ ಮರೆಯುವಿರಿ: ಗುಜರಾತ್ನಲ್ಲಿ ಕೇಜ್ರಿವಾಲ್ ಮಾತು
ರೈತರು ಸಂಘಟಿತರಾಗಿ ಸಾವಯವ ಕೃಷಿ ಮಾಡಬೇಕು. ಅದಿಲಾಬಾದ್ನ ಸಾವಿರಾರು ರೈತರು ಈ ಕೃಷಿ ಮಾರ್ಗವನ್ನು ಅನುಸರಿಸಿ ಯಶಸ್ವಿಯಾಗಿದ್ದಾರೆ. ರೈತರು ನಮ್ಮ ಅನ್ನದಾತರಾಗಿರುವಾಗ ನಾನು ಅವರ ಪ್ರತಿಭಟನೆ, ಆಂದೋಲನಗಳ ವಿರೋಧಿಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಹೇಳಿದರು.