ETV Bharat / bharat

ಹೆಚ್ಚುವರಿ ಮೊಸರು ಕೇಳಿದ್ದಕ್ಕೆ ಗ್ರಾಹಕನಿಗೆ ಹಲ್ಲೆ; ರೆಸ್ಟೋರೆಂಟ್ ಸಿಬ್ಬಂದಿಯ ದುರ್ನಡತೆಗೆ ಬಿರಿಯಾನಿ ಪ್ರೇಮಿ ಸಾವು

Hyderabad Hotel Staff Beat Customer to Death: ಹೈದರಾಬಾದ್​ನ ಹೋಟೆಲ್​ವೊಂದರಲ್ಲಿ ಬಿರಿಯಾನಿ ಸವಿಯುತ್ತಿದ್ದಾಗ ಹೆಚ್ಚುವರಿ ಮೊಸರು (ರೈತಾ) ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕನನ್ನು ಥಳಿಸಿದ್ದು, ಬಿರಿಯಾನಿ ಪ್ರೇಮಿ ಪ್ರಾಣ ಕಳೆದುಕೊಂಡಿದ್ದಾರೆ.

curd
ಮೊಸರು
author img

By ETV Bharat Karnataka Team

Published : Sep 11, 2023, 12:42 PM IST

ಹೈದರಾಬಾದ್ : ಬಹುತೇಕ ಮಾಂಸಹಾರಿ ಪ್ರಿಯರಿಗೆ ಹೈದರಾಬಾದ್ ದಮ್ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುವುದು ಖಂಡಿತ. ಆದ್ದರಿಂದಲೇ ಭಾಗ್ಯನಗರದ ಪ್ರತಿ ಓಣಿಯಲ್ಲಿಯೂ ಬಿರಿಯಾನಿ ಹೋಟೆಲ್‌ಗಳನ್ನು ಕಾಣಬಹುದು. ಹೀಗಾಗಿಯೇ, ಹೈದರಾಬಾದ್ ಬಿರಿಯಾನಿಗೆ ಹೆಸರುವಾಸಿಯಾಗಿದೆ. ಸಂಡೇ ಬಂದರೆ ಸಾಕು ಕೆಲವರು ರೆಸ್ಟೋರೆಂಟ್‌ಗೆ ಹೋಗಿ ಬಾಯ್ತುಂಬ ಬಿರಿಯಾನಿ ಸವಿದು ಬರುತ್ತಾರೆ. ಇದೀಗ ಬಿರಿಯಾನಿ ಪ್ರಿಯರೊಬ್ಬರು ಹೋಟೆಲ್‌ಗೆ ಹೋಗಿ ಹೆಚ್ಚಿನ ಪ್ರಮಾಣದ ಮೊಸರು (ಮೊಸರು ರೈತಾ) ಕೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿ ಥಳಿಸಿದ್ದು, ಪರಿಣಾಮ ಬಿರಿಯಾನಿ ಪ್ರೇಮಿ ಪ್ರಾಣ ಕೊನೆಯುಸಿರೆಳೆದಿದ್ದಾರೆ.

ಹೈದರಾಬಾದ್‌ನ ಪಂಜಗುಟ್ಟದಲ್ಲಿನ ಹೋಟೆಲ್‌ಗೆ ಬಂದಿದ್ದ ಗ್ರಾಹಕ ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯ ಕಂಡಿದೆ. ಚಂದ್ರಯ್ಯನಗುಟ್ಟದ ಲಿಯಾಕತ್ ಎಂಬವರು ಭಾನುವಾರ ರಾತ್ರಿ ಪಂಜಗುಟ್ಟ ಪ್ರದೇಶದಲ್ಲಿರುವ ಹೋಟೆಲ್‌ವೊಂದಕ್ಕೆ ಬಿರಿಯಾನಿ ತಿನ್ನಲು ಬಂದಿದ್ದರು. ಈ ವೇಳೆ ಅವರು ಸಿಬ್ಬಂದಿ ಬಳಿ ಹೆಚ್ಚುವರಿ ಮೊಸರು ಕೇಳಿದ್ದಾರೆ. ಬಳಿಕ, ಹೋಟೆಲ್​ ಸಿಬ್ಬಂದಿ ಹೆಚ್ಚುವರಿ ಮೊಸರು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಹಾಗೂ ಗ್ರಾಹಕನ ನಡುವೆ ವಾಗ್ವಾದ ನಡೆದಿದೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿದ್ದು, ಸಿಬ್ಬಂದಿ ಲಿಯಾಖತ್ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ : ಧಾರವಾಡದಲ್ಲಿ ಪುಂಡರ ಅಟ್ಟಹಾಸ : ಅರೆ ನಗ್ನರಾಗಿ ಬರಬೇಡಿ ಎಂದಿದ್ದಕ್ಕೆ ಹೋಟೆಲ್​ ಸಿಬ್ಬಂದಿ‌ ಮೇಲೆ ಹಲ್ಲೆ ಆರೋಪ

ವಿಷಯ ತಿಳಿದ ಪಂಜಗುಟ್ಟ ಪೊಲೀಸರು ಹೊಟೇಲ್‌ಗೆ ಆಗಮಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಿಯಾಖತ್ ಪೊಲೀಸ್ ಠಾಣೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ನಂದಿನಿ ಉತ್ಪನ್ನ ಬೆಲೆ ಹೆಚ್ಚಳ ಬೆನ್ನಲ್ಲೇ ಹೋಟೆಲ್ ತಿಂಡಿ ತಿನಿಸಿನ ದರದಲ್ಲೂ ಏರಿಕೆ.. ಗ್ರಾಹಕರಿಂದ ಅಸಮಾಧಾನ, ಮಾಲೀಕರಿಂದ ಸಮರ್ಥನೆ

'ರೆಸ್ಟೋರೆಂಟ್ ಸಿಬ್ಬಂದಿ ಥಳಿಸಿ ಕೊಂದಿದ್ದಾರೆ': ರೆಸ್ಟೋರೆಂಟ್ ಸಿಬ್ಬಂದಿ ಥಳಿಸಿದ ಬಳಿಕ ಲಿಯಾಖತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಕರೆತಂದಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗೆಯೇ, ಎಂಐಎಂ ಎಂಎಲ್​ಸಿ ಮಿರ್ಜಾ ರಹಮತ್ ಬೇಗ್ ಪಂಜಗುಟ್ಟ ಪೊಲೀಸ್ ಠಾಣೆಗೆ ಆಗಮಿಸಿ ಮೃತ ಲಿಯಾಖತ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಮೃತ ಯುವಕನ ಶವವನ್ನು ಗಾಂಧಿ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ರಾಜಸ್ಥಾನ ಸಚಿವರ ಸೋದರಳಿಯನಿಂದ ಹೋಟೆಲ್​ನಲ್ಲಿ ದಾಂಧಲೆ : ಸಿಸಿಟಿವಿ ವಿಡಿಯೋ

ಇನ್ನು ಕಳೆದ ಮೇ ತಿಂಗಳಲ್ಲಿ ಧಾರವಾಡ ನಗರದ ಕೃಷಿ ವಿವಿ ಬಳಿ ಇರುವ ವಿ.ಕೆ.ಪ್ಯಾಲೇಸ್‌ನ​ ಹೋಟೆಲ್‌ಗೆ ನುಗ್ಗಿದ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಅರೆ ನಗ್ನರಾಗಿ ಬಂದಿದ್ದ ಯುವಕರಿಗೆ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಬುದ್ಧಿ ಹೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.