ETV Bharat / bharat

ಉದ್ಯೋಗದ  ಹೆಸರಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಸದೆಬಡಿದ ಹೈದರಾಬಾದ್ ಪೊಲೀಸ್

ಅಕ್ಟೋಬರ್​ 20, 2021ರಲ್ಲಿ ಹೈದರಾಬಾದ್​​ನಲ್ಲಿ ಯುವತಿಯೊಬ್ಬರು ಏರ್​ ಹೋಸ್ಟೆಸ್​ ಉದ್ಯೋಗ ಕೊಡಿಸುವುದಾಗಿ ನಂಬಿಸಿ 8 ಲಕ್ಷ ರೂ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಯುವತಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತುಕೊಂಡಿದ್ದ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Hyderabad Police busts call centre in Delhi's Mayur Vihar; 8 held
ಬಹುಮಾನದ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್ ಸದೆಬಡಿದ ಹೈದರಾಬಾದ್ ಪೊಲೀಸ್
author img

By

Published : Jan 9, 2022, 5:35 AM IST

ಹೈದರಾಬಾದ್​: ಡೆಲ್ಲಿಯಲ್ಲಿ ಕುಳಿತು ಅಮಾಯಕರು, ಉದ್ಯೋಗಾಕಾಂಕ್ಷಿಗಳನ್ನ ಗುರಿ ಮಾಡಿ ಬಹುಮಾನ, ಉದ್ಯೋಗದ ಹೆಸರಿನ ಆಸೆ ತೋರಿಸಿ ವಂಚನೆ ಮಾಡುತ್ತಿದ್ದ 8 ಮಂದಿಯನ್ನು ಹೈದರಾಬಾದ್ ಸಿಟಿ​ ಸೈಬರ್ ಕ್ರೈಮ್​​ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ದೆಹಲಿಯ ಮಯೂರ್ ವಿಹಾರ್​ನಲ್ಲಿದ್ದ ನಕಲಿ ಕಾಲ್​ ಸೆಂಟರ್​​ ಮೇಲೆ ದಾಳಿ ನಡೆಸಿ 8 ಮಂದಿ ವಂಚಕರನ್ನು ಬಂಧಿಸಲಾಗಿದೆ. ರಾಜೇಶ್​ ಸಿಂಗ್ ಅಲಿಯಾನ್​ ಚಂದನ್​, ಅನುಭ್ ಸಿಂಗ್, ನಫೀಜ್​ ಸೈಫಾಲಿ ಅಲಿಯಾಸ್​ ನೇಹಾ ಸಿಂಗ್, ಯೋಗಿತಾ ಅಲಿಯಾಸ್ ಪೂಜಾ ಕುಮಾರಿ, ಶಾಲು ಕುಮಾರಿ ಅಲಿಯಾಸ್​ ರಾಧಿಕಾ ರೈ, ಪ್ರಿಯಾ ಅಲಿಯಾಸ್​ ನೇಹಾ ಕುಮಾರಿ ಮತ್ತು ಶಿವಾನಿ ಅಲಿಯಾಸ್​ ನಂದಿನಿ ಅಗರ್ವಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಗ್ದರಿಗೆ ಮೋಸ ಮಾಡಿ ಹಣಗಳಿಸುವ ಉದ್ದೇಶದಿಂದ ಈ ಎಲ್ಲಾ 8 ಆರೋಪಿಗಳು ದೆಹಲಿಯ ಮಯೂರ್​ ವಿಹಾರ್​​ನಲ್ಲಿ ಕಾಲ್​ ಸೆಂಟರ್​ ಆರಂಭಿಸಿದ್ದರು. ವಿವಿಧ ಉದ್ಯೋಗ ವೆಬ್​ಸೈಟ್​ಗಳಲ್ಲಿಉದ್ಯೋಗ ಆಕಾಂಕ್ಷಿಗಳ ವಿವರ ತೆಗೆದುಕೊಂಡು ಕರೆ ಮಾಡಿ ಉದ್ಯೋಗದ ಆಸೆ ತೋರಿಸಿ, ಪ್ರೊಸೆಸಿಂಗ್ ಫೀಜ್​ ಎಂದು ಹಣವನ್ನು ಪಡೆಯುತ್ತಿದ್ದರು. ಮೊಬೈಲ್​ ಮತ್ತು ಇಮೇಲ್​ ಮೂಲಕ ಸಂಪರ್ಕಿಸಿ ಉದ್ಯೋಗದ ಆಸೆ ತೋರಿಸಿ ವಂಚನೆ ಮಾಡುತ್ತಿದ್ದರು ಎಂದು ಹೈದರಾಬಾದ್​ ಜಂಟಿ ಪೊಲೀಸ್​ ಆಯುಕ್ತ ಗಜರಾವ್​ ಭೂಪಾಲ್​ ತಿಳಿಸಿದ್ದಾರೆ.

ಅಕ್ಟೋಬರ್​ 20, 2021ರಲ್ಲಿ ಹೈದರಾಬಾದ್​​ನಲ್ಲಿ ಯುವತಿಯೊಬ್ಬರು ಏರ್​ ಹೋಸ್ಟೆಸ್​ ಉದ್ಯೋಗ ಕೊಡಿಸುವುದಾಗಿ ನಂಬಿಸಿ 8 ಲಕ್ಷ ರೂ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಯುವತಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತುಕೊಂಡಿದ್ದ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬಂಧಿತರಿಂದ 26 ಮೊಬೈಲ್​ ಫೋನ್ಸ್​, ಒಂದು ಲ್ಯಾಪ್​ಟಾಪ್​, ಒಂದು ಮೊಬೈಲ್ ಡಾಂಗೆಲ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸುದ್ದಿ ಪ್ರಸಾರ ತಡೆಗೆ 25 ಲಕ್ಷ ರೂ ಬೇಡಿಕೆ: ಖಾಸಗಿ ಚಾನೆಲ್ ಸಿಬ್ಬಂದಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.