ಹೈದರಾಬಾದ್(ತೆಲಂಗಾಣ): ಮುತ್ತಿನ ನಗರಿ ಎಂಬ ಹೆಸರುಗಳಿಸಿರುವ ಹೈದರಾಬಾದ್ ಇದೀಗ ಸತತ ಎರಡನೇ ವರ್ಷವೂ ವಿಶ್ವದ ವೃಕ್ಷಗಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್ಬರ್ ಡೇ ಫೌಂಡೇಶನ್ ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಈ ಘೋಷಣೆ ಮಾಡಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಅರ್ಬರ್ಡೆ ಫೌಂಡೇಶನ್ ವತಿಯಿಂದ ಸತತ ಎರಡನೇ ವರ್ಷವೂ ಹೈದರಾಬಾದ್ ನಗರವನ್ನು ವಿಶ್ವದ ಟ್ರೀ ಸಿಟಿ ಎಂದು ಗುರುತಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 3,50,56,635 ಮರ ನಡೆಲಾಗಿದೆ. ವಿಶ್ವದಾದ್ಯಂತ ಗಿಡ ಮರಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿರುವ ವಿಶ್ವ ಸಂಸ್ಥೆಯ ಜೊತೆಗೆ ಕೈ ಸೇರಿಸಿ ಕೆಲಸ ಮಾಡುತ್ತಿರುವ ಆರ್ಬರ್ ಡೇ ಫೌಂಡೇಶನ್ 2021 ‘ಟ್ರೀ ಸಿಟಿ’ ಎಂದು ಘೋಷಿಸಿದೆ.
ಇದನ್ನೂ ಓದಿ: ನವಾಬ್ ಮಲಿಕ್ ಕುಟುಂಬದ 147 ಎಕರೆ ಕೃಷಿಭೂಮಿ, ಕೋಟ್ಯಂತರ ಮೌಲ್ಯದ ಆಸ್ತಿ ಜಪ್ತಿ
ಹೈದರಾಬಾದ್ನಲ್ಲಿ ಅತಿ ಹೆಚ್ಚಿನ ಮರ ನೆಡುವ ಯೋಜನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕಾಗಿ ವಿವಿಧ ರೀತಿಯ ಯೋಜನೆ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಅನೇಕ ಸಿನಿಮಾ ನಟರು ಸಾಥ್ ನೀಡಿದ್ದಾರೆ.