ಹೈದರಾಬಾದ್ (ತೆಲಂಗಾಣ): ಹೈದರಾಬಾದ್ನ ಶಂಷಾಬಾದ್ ವಿಮಾನ ನಿಲ್ದಾಣ ಸಮೀಪದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಮಗಳು ಮೃತಪಟ್ಟಿರುವ ಘಟನೆ ನಡೆದಿದೆ. 25 ವರ್ಷದ ತಾನಿಯಾಖಾನ್ ಎಂಬುವವರೇ ಮೃತರು.
ಸ್ಥಳೀಯ ಕಾಂಗ್ರೆಸ್ ಮುಖಂಡ ಫಿರೋಜ್ಖಾನ್ ಎಂಬುವವರ ಪುತ್ರಿಯಾಗಿರುವ ತಾನಿಯಾ ಖಾನ್ ಹಾಗೂ ಸ್ನೇಹಿತರಾದ ದಿಯಾ ಮತ್ತು ಮಿರ್ಜಾ ಅಲಿ ರಾತ್ರಿ ಊಟಕ್ಕೆಂದು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ನಂತರ ಮರಳಿ ಬರಬೇಕಾದರೆ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದೆ. ಅಲ್ಲದೇ, 100 ಮೀಟರ್ ದೂರದವರೆಗೂ ಕಾರಿನ ಹಾಗೆಯೇ ಎಳೆದುಕೊಂಡು ಬಂದು ಪಲ್ಟಿ ಹೊಡೆದಿದೆ.
ಕಾರಿನಲ್ಲಿದ್ದ ತಾನಿಯಾ ಖಾನ್ ಸೀಟ್ ಬೆಲ್ಟ್ ಹಾಕಿಕೊಂಡಿರಲಿಲ್ಲ ಎಂದು ಹೇಳಲಾಗಿದ್ದು, ಕಾರು ಅಪಘಾತ ಸಂಭವಿಸುತ್ತಿದ್ದಂತೆ ಹೆದ್ದಾರಿಗೆ ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇತ್ತ, ಕಾರು ಚಾಲನೆ ಮಾಡುತ್ತಿದ್ದ ಮಿರ್ಜಾ ಅಲಿ ಹಾಗೂ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ದಿಯಾ ಸೀಟ್ ಬೆಲ್ಟ್ ಧರಿಸಿದ್ದರು. ಈ ಇಬ್ಬರು ಕೂಡ ಪ್ರಾಣಾಣಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದಾಗ ಎಸಿ ಸ್ಫೋಟ: ನವ ವಿವಾಹಿತ ಸುಟ್ಟು ಕರಕಲು