ರಾಂಚಿ: ಮಿನ್ಹಾಜ್ ಅನ್ಸಾರಿ ಎಂಬ ವ್ಯಕ್ತಿ ತನ್ನ ಪತ್ನಿಯ ಕತ್ತನ್ನು ಸೀಳಿ ಕೊಂದಿದ್ದಾನೆ. ಇಲ್ಲಿನ ಕಂಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದು ಮಹಿಳೆಯ ಶವ ನೋಡಿದ ಜನರು ಬೆಚ್ಚಿ ಕೂಗಿದ್ದಾರೆ, ಆಗ ವಿಷಯ ಬೆಳಕಿಗೆ ಬಂದಿದೆ.
ಆರೋಪಿಯ ಪತ್ತೆಗೆ ಪೊಲೀಸ್ ತಂಡ ಕಾರ್ಯನಿರತವಾಗಿದೆ. ಮಿನ್ಹಾಜ್ ತನ್ನ ಪತ್ನಿಯನ್ನು ಏಕೆ ಕೊಂದಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.
ಇದನ್ನೂ ಓದಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಭಾವಿಪತಿಯನ್ನೇ ಜೈಲಿಗಟ್ಟಿದ ಲೇಡಿ ಸಬ್ ಇನ್ಸ್ಪೆಕ್ಟರ್!