ETV Bharat / bharat

ಸಣ್ಣ ವಿವಾದಕ್ಕೆ ಗರ್ಭಿಣಿ ಪತ್ನಿ ಕೊಂದು, ಪೊಲೀಸ್ ಠಾಣೆಗೆ ಶರಣಾದ ಗಂಡ - ಹೆಂಡತಿ ಕೊಲೆ ಮಾಡಿದ ಗಂಡ

ಉತ್ತರ ಪ್ರದೇಶದ ಮೀರತ್ ಹಾಗೂ ಪ್ರತಾಪ್​ಗಢದಲ್ಲಿ ನಡೆದಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

HUSBAND KILLED HIS WIFE
HUSBAND KILLED HIS WIFE
author img

By

Published : Apr 25, 2022, 4:54 PM IST

ಮೀರತ್/ಪ್ರತಾಪ್​ಗಢ​(ಉತ್ತರ ಪ್ರದೇಶ): ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ಜಗಳ ನಡೆಯುವುದು ಸರ್ವೆ ಸಮಾನ್ಯ. ಆದರೆ, ಇದೇ ವಿಚಾರಕ್ಕಾಗಿ ಆಕ್ರೋಶಗೊಂಡ ಪತಿ ಗರ್ಭಿಣಿ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಆರೋಪಿ ವಿನೋದ್ ಕುಮಾರ್ ತನ್ನ ತಾಯಿ ಜೈದೇವಿ, ಪತ್ನಿ ಪೂನಂ ಹಾಗೂ ಇಬ್ಬರು ಮಕ್ಕಳಾದ ಬಬ್ಲು (6) ಹಾಗೂ ಮಗಳು ವಂದನಾ (4) ಅವರೊಂದಿಗೆ ಪಟ್ಟಣದ ಮೂರನೇ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ಕಲಹದ ವಿಚಾರವಾಗಿ ಇಂದು ಬೆಳಗ್ಗೆ ವಿನೋದ್​ ತನ್ನ ಪತ್ನಿ ಪೂನಂ ಜೊತೆ ಜಗಳವಾಡಿದ್ದಾನೆ. ಇದರ ಬೆನ್ನಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆಕೆಯ ಕತ್ತು ಸೀಳಿದ್ದಾನೆ. ಇದರ ಬೆನ್ನಲ್ಲೇ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಘಟನಾ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅನೇಕರನ್ನ ವಿಚಾರಣೆಗೊಳಪಡಿಸಿದ್ದಾರೆ. ಗರ್ಭಿಣಿಯ ಮೃತದೇಹವನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ₹1 ಕೋಟಿ ನಗದು, ಅಪಾರ ಚಿನ್ನಾಭರಣದೊಂದಿಗೆ ಸಿಕ್ಕಿಬಿದ್ದ ದಂಪತಿ!

ಮತ್ತೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಪ್ರತಾಪ್​ಗಢದಲ್ಲಿ ಸಹೋದರನೊಬ್ಬ ಮೊಬೈಲ್ ವಿಚಾರಕ್ಕಾಗಿ ಸಹೋದರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಗುಡಿಯಾ ಎಂಬ ಯುವತಿ ತನ್ನ ಮೊಬೈಲ್ ಕಳ್ಳತನವಾದ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನ ಪತ್ನಿ ಕಾಂಚನಾ ಮೇಲೆ ಆರೋಪ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಧೀರಜ್ ಶುಕ್ಲಾ ಸಹೋದರಿ ಮೇಲೆ ಗುಂಡು ಹಾರಿಸಿ, ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.