ಔಸಾ/ಲಾತೂರ್ : ಪತಿಯೇ ತನ್ನ ತೋಟದ ಮಾಲೀಕ ಹಾಗೂ ಆತನ ಸಹೋದರನಿಗೆ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುವಂತೆ ಒತ್ತಾಯಿಸಿರುವ ಮುಜುಗರದ ಗಟನೆಯೊಂದು ಔಸಾ ತಾಲೂಕಿನ ಸರೋಲಾ ಪ್ರದೇಶದಲ್ಲಿ ನಡೆದಿದೆ. ಆಘಾತಕಾರಿ ಸಂಗತಿಯೆಂದರೆ, ಅತ್ಯಾಚಾರದ ನಂತರ ಸಂತ್ರಸ್ತೆ ಸುಮಾರು 15 ಕಿ.ಮೀ ದೂರ ನಡೆದು ಮಧ್ಯರಾತ್ರಿ ಲಾತೂರ್‌ನ ಎರಡು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.
ಆದರೆ, ಸಂತ್ರಸ್ತೆಗೆ ಸಹಾಯ ಸಿಗಲಿಲ್ಲ. ಅಂತಿಮವಾಗಿ, ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಆಕೆಯ ಪತಿ ಸೇರಿದಂತೆ ಮೂವರ ವಿರುದ್ಧ ಅತ್ಯಾಚಾರ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಲಾತೂರ್ ಜಿಲ್ಲೆಯ ನಿಲಂಗಾ ತಾಲೂಕಿನ 33 ವರ್ಷದ ಮಹಿಳೆ ಔಸಾ ತಾಲೂಕಿನ ಸರೋಲಾ ರಸ್ತೆಯಲ್ಲಿರುವ ಜಮೀನಿನಲ್ಲಿ ಪತಿಯೊಂದಿಗೆ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಪತಿ-ಪತ್ನಿಯರ ನಡುವಿನ ಜಗಳದಿಂದಾಗಿ ಮಹಿಳೆ ತನ್ನ ತಾಯಿಯೊಂದಿಗೆ ಇರಲು ಲಾತೂರ್‌ಗೆ ಬಂದಿದ್ದಳು. ಆದರೆ, ಸಂತ್ರಸ್ತೆಯ ತಾಯಿ ಆಕೆಯನ್ನು ಮತ್ತೆ ಕರೆದುಕೊಂಡು ಬಂದು ಪತಿಯೊಂದಿಗೆ ಜಮೀನಿನಲ್ಲಿ ಬಿಟ್ಟು ಹೋಗಿದ್ದರು.
ಏಪ್ರಿಲ್ 9ರಂದು ಪತಿ ಮತ್ತು ಪತ್ನಿ ನಡುವೆ ಮತ್ತೆ ಜಗಳವಾದ ನಂತರ ರಾತ್ರಿ 9 ಗಂಟೆ ಸುಮಾರಿಗೆ ಸಂತ್ರಸ್ತೆಯ ಪತಿ ತೋಟದ ಮಾಲೀಕರಾದ ಇಲ್ಲು ಶೇಖ್ ಹಾಗೂ ಮೂಸಾ ಶೇಖ್ ಅವರನ್ನು ಮನೆಗೆ ಕರೆಸಿದ್ದರು. ಆಗ ಪತಿಯು ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡುವಂತೆ ಅವರಿಗೆ ಹೇಳಿದ್ದಾನೆ. ವರದಿಯ ಪ್ರಕಾರ, ಆ ಇಬ್ಬರು ಪತಿಯ ಎದುರೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಘಟನೆಯ ನಂತರ, ಸಂತ್ರಸ್ತೆ ಮಧ್ಯರಾತ್ರಿ ಸುಮಾರು 15 ಕಿ.ಮೀ ನಡೆದುಕೊಂಡು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಲಾತೂರ್ ನಗರದ ವಿವೇಕಾನಂದ ಚೌಕ್ ಪೊಲೀಸ್ ಠಾಣೆಗೆ ಘಟನೆಯನ್ನು ವರದಿ ಮಾಡಿದ್ದಾರೆ. ಆದರೆ, ಸ್ಥಳೀಯ ಪೊಲೀಸ್ ಆಡಳಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಹೋಗಲು ಸಲಹೆ ನೀಡಿದ್ದಾರೆ. ಅದರಂತೆ, ಮಹಿಳೆ ತನ್ನ ತಾಯಿಯೊಂದಿಗೆ ತೆರಳಿ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಿಂಗಳೆಯನ್ನು ಭೇಟಿಯಾಗಿದ್ದಳು.
ಮಹಿಳೆ ತನ್ನ ಮೇಲೆ ಆಗಿರುವ ದೌರ್ಜನ್ಯವನ್ನು ವಿವರಿಸುತ್ತಿದ್ದಂತೆ ಅಧೀಕ್ಷಕರು ಔಸಾ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಆದೇಶಿಸಿದರು. ಆರೋಪಿ ಪತಿ ಮತ್ತು ಇತರ ಇಬ್ಬರ ವಿರುದ್ಧ ಔಸಾ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ಉಪವಿಭಾಗೀಯ ಪೊಲೀಸ್ ಅಧಿಕಾರಿ ಮಧುಕರ್ ಪವಾರ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಔಸಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಂಕರ್ ಪಟ್ವಾರಿ ಅವರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿ ತಂದೆ!