ETV Bharat / bharat

ಹೋಟೆಲ್‌ನಲ್ಲಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಪತ್ನಿ; ನಡೀತು ಹೈಡ್ರಾಮಾ - ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಪತಿಯು ಆಗ್ರಾದ ಹೋಟೆಲ್‌ನಲ್ಲಿ ಪ್ರಿಯಕರನೊಂದಿಗೆ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದಾನೆ.

Husband caught wife boyfriend in hotel in Agra
ಆಗ್ರಾದ ಹೋಟೆಲ್‌ನಲ್ಲಿ ಪ್ರಿಯಕರನೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ
author img

By

Published : Jun 26, 2023, 8:16 PM IST

ಆಗ್ರಾ (ಉತ್ತರ ಪ್ರದೇಶ): ತಾಜ್​ ನಗರಿ ಆಗ್ರಾದಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಗಂಡ ಹೆಂಡತಿಯದ್ದಾಗಿದೆ. ಪತಿ ಭಾನುವಾರ ಆಗ್ರಾ ಹೋಟೆಲ್‌ಯೊಂದರಲ್ಲಿ ಪ್ರಿಯಕರನೊಂದಿಗೆ ಪತ್ನಿಯನ್ನು ಹಿಡಿದಿದ್ದಾನೆ. ಸಿಟ್ಟಿಗೆದ್ದ ಪತಿ ಮೊದಲು ಪತ್ನಿಯ ಗೆಳೆಯನಿಗೆ ಥಳಿಸಿದ್ದು, ಪತ್ನಿ ಓಡಿಹೋಗಲು ಆರಂಭಿಸಿದಾಗ ಆಕೆಯನ್ನೂ ಹಿಡಿದಿದ್ದಾನೆ. ಇದಾದ ಬಳಿಕ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ದೊಡ್ಡ ಗಲಾಟೆಯೇ ನಡೆದಿದೆ. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರ ಸಮ್ಮುಖದಲ್ಲಿ ಇಬ್ಬರ ನಡುವೆ ಒಪ್ಪಂದಕ್ಕೆ ಬರಲಾಯಿತು.

ಈ ಘಟನೆಯು ಭಾನುವಾರ ನಡೆದಿದ್ದು, ವೈರಲ್ ಆದ ವಿಡಿಯೋ ಯಮುನಾ ನದಿಯ ಮಂಡಿ ಸಮಿತಿಯ ಮುಂಭಾಗದಲ್ಲಿರುವ ಹೋಟೆಲ್‌ನ ಹೊರಗಿನಿಂದ ಮಾಡಲಾಗಿದೆ. ವಿಡಿಯೋದಲ್ಲಿ ಮಹಿಳೆ ಹಾಗೂ ಪುರುಷನ ಜೊತೆಗೆ ಜಗಳ ನಡೆಯುತ್ತಿದೆ. ಹೋಟೆಲ್​ನೊಳಗೆ ಪತ್ನಿ ಹಾಗೂ ಬಾಯ್​ ಫ್ರೆಂಡ್​ ಇರುವ ಪತಿ ಗಮನಿಸಿದ್ದಾನೆ. ಪತಿ ಹೋಟೆಲ್‌ನಲ್ಲಿ ನುಗ್ಗಿ, ಪತ್ನಿ ಹಾಗೂ ಬಾಯ್​ ಫ್ರೆಂಡ್ ಅನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ್ದಾನೆ. ಈ ಹೈವೋಲ್ಟೇಜ್ ಡ್ರಾಮಾ ತುಂಬಾ ಹೊತ್ತು ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತನ್ನ ಪ್ರಿಯಕರನೊಂದಿಗೆ ಪತ್ನಿಯನ್ನು ಹೋಟೆಲ್‌ನಲ್ಲಿ ಹಿಡಿದಿರುವುದಾಗಿ ವ್ಯಕ್ತಿ ಮಾಹಿತಿ ನೀಡಿದ್ದಾನೆ ಎಂದು ಟ್ರಾನ್ಸ್‌ ಯಮುನಾ ಪೊಲೀಸ್‌ ಠಾಣೆ ಪ್ರಭಾರಿ ಇನ್‌ಸ್ಪೆಕ್ಟರ್‌ ಆನಂದ್‌ ಪ್ರಕಾಶ್‌ ತಿಳಿಸಿದ್ದಾರೆ. ಪೊಲೀಸರು ಆಗಮಿಸುವ ವೇಳೆಗಾಗಲೇ ಗಲಾಟೆ ಶಾಂತವಾಗಿತ್ತು. ಎರಡೂ ಕಡೆಯವರನ್ನೂ ಠಾಣೆಗೆ ಕರೆದುಕೊಂಡು ಬರಲಾಯಿತು. ಬಳಿಕ ಇಬ್ಬರ ನಡುವೆ ರಾಜಿಯಾಗಿದೆ. ಇದಾದ ಬಳಿಕ ಇಬ್ಬರ ಕಡೆಯವರು ಅಲ್ಲಿಂದ ತೆರಳಿದರು.

ಪೊಲೀಸ್​ ಠಾಣೆ ಮೆಟ್ಟಿಲೇರಿದ ಗಲಾಟೆ: ''ಎರಡು ತಿಂಗಳ ಹಿಂದೆ ಸೆಟಲ್ ಮೆಂಟ್ ನಡೆದಿದೆ. ಆರು ವರ್ಷಗಳ ಹಿಂದೆ ಮದುವೆಯಾಗಿತ್ತು ಎಂದು ಪತಿ ತಿಳಿಸಿದ್ದಾನೆ. ಮದುವೆಯಾದ ಕೆಲ ದಿನಗಳ ನಂತರ ಪತ್ನಿ ಪ್ರಕರಣ ದಾಖಲಿಸಿದ್ದಾಳೆ. ಇದರಿಂದಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ವಿಷಯ ಕೌಟುಂಬಿಕ ಸಲಹಾ ಕೇಂದ್ರಕ್ಕೆ ತಲುಪಿದಾಗ ಎರಡು ತಿಂಗಳ ಹಿಂದಷ್ಟೆ ಇಬ್ಬರ ನಡುವೆ ರಾಜಿ ಏರ್ಪಟ್ಟಿತ್ತು. ಅಂದಿನಿಂದ ಹೆಂಡತಿ- ಪತಿಯೊಂದಿಗೆ ವಾಸಿಸುತ್ತಿದ್ದಳು. ಆದರೆ, ಅವಳು ಯಾರನ್ನಾದರೂ ಭೇಟಿಯಾಗಲು ಹೋಗುತ್ತಾಳೆ ಎಂಬ ಅನುಮಾನ ಪತಿ ಮೇಲೆ ಇತ್ತು. ಭಾನುವಾರವೂ ಪತ್ನಿ ಮನೆಯಿಂದ ಹೊರ ಹೋದಾಗ ಆಕೆಯನ್ನು ಹಿಂಬಾಲಿಸಿದ್ದ. ಹೆಂಡತಿ ಹೋಟೆಲ್ ತಲುಪಿದಾಗ ಅವಳ ಅನುಮಾನ ನಿಜವಾಯಿತು. ಪತ್ನಿ ತನ್ನ ಗೆಳೆಯನ ಜೊತೆ ಹೋಟೆಲ್​ನಲ್ಲಿ ರೂಮಿನಲ್ಲಿದ್ದಳು. ಆತನನ್ನು ನೋಡಿ ಮನೆಯವರನ್ನು ಕರೆಸಲಾಯಿತು. ಪತಿಯನ್ನು ಕಂಡ ಪತ್ನಿಗೆ ಭಯವಾಯಿತು. ಪತ್ನಿ ಮತ್ತು ಆಕೆಯ ಗೆಳೆಯ ತಪ್ಪಿಸಿಕೊಳ್ಳಲು ಓಡಲು ಪ್ರಾರಂಭಿಸಿದರು. ಆದರೆ, ಸಂಬಂಧಿಕರು ಅವಳನ್ನು ಹಿಡಿದಿದ್ದಾರೆ. ಪತಿ ಮತ್ತು ಕುಟುಂಬಸ್ಥರು ಆಕೆಯ ಪ್ರಿಯಕರನೊಂದಿಗೆ ಸೇರಿ ಮಹಿಳೆಗೆ ಥಳಿಸಿದ್ದಾರೆ. ಹೋಟೆಲ್ ಹೊರಗೆ ಗಲಾಟೆಯಾದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: Encounter: ನೇಪಾಳ ಗಡಿಯಲ್ಲಿ ಬಿಹಾರ ಪೊಲೀಸರಿಂದ ಗುಂಡಿನ ದಾಳಿ.. ಇಬ್ಬರು ದರೋಡೆಕೋರರ ಎನ್​ಕೌಂಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.