ಉಜ್ಜಯಿನಿ (ಮಧ್ಯ ಪ್ರದೇಶ): ಜಿಲ್ಲೆಯ ನಾಗ್ಡಾ ಪ್ರದೇಶದಲ್ಲಿ, ಪತಿಯೊಬ್ಬ ತನ್ನ ಪತ್ನಿಯ ಮೂಗು, ಕೆನ್ನೆ ಹಾಗೂ ಸ್ತನಗಳನ್ನು ಕತ್ತರಿಸಿರುವ ಘಟನೆ ನಡೆದಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಉಜ್ಜಯಿನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗ್ಡಾ ನಗರದ ಆಮ್ಲಾ ರಸ್ತೆ ಪ್ರದೇಶದ ನಿವಾಸಿಯಾಗಿರುವ ರಾಜೇಶ್, ಪತ್ನಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ, ತೀವ್ರವಾಗಿ ಗಾಯಗೊಳಿಸಿದ್ದಾನೆ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ.
ಘಟನೆಯ ಬಳಿಕ ಪತಿ, ಮಾವ ಹಾಗೂ ಅತ್ತೆ ತಲೆಮರೆಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.