ETV Bharat / bharat

ಪರಾರಿಯಾದ ಅಮೃತಪಾಲ್ ಸಿಂಗ್​ ಪತ್ತೆಗೆ ಪೊಲೀಸರ ಶೋಧ ಕಾರ್ಯ: ನಾಳೆಯೂ ಇಂಟರ್​ನೆಟ್​ ಸ್ಥಗಿತ - ಖಲಿಸ್ತಾನ್

ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್​ ಸೆರೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬಂಧಿತ ವಾರಿಸ್ ಪಂಜಾಬ್ ಸಂಘಟನೆಯ ನಾಲ್ವರು ಸದಸ್ಯರನ್ನು ಪಂಜಾಬ್‌ನಿಂದ ಅಸ್ಸೋಂನ ದಿಬ್ರುಗಢಕ್ಕೆ ಸ್ಥಳಾಂತರಿಸಲಾಗಿದೆ.

hunt-for-amritpal-singh-continues-punjab-govt-extends-ban-on-internet-services
ಪರಾರಿಯಾದ ಅಮೃತಪಾಲ್ ಸಿಂಗ್​ ಪತ್ತೆಗೆ ಪೊಲೀಸರ ಶೋಧ ಕಾರ್ಯ: ನಾಳೆಯೂ ಇಂಟರ್​ನೆಟ್​ ಸ್ಥಗಿತ
author img

By

Published : Mar 19, 2023, 7:56 PM IST

ಚಂಡೀಗಢ (ಪಂಜಾಬ್​): ಪರಾರಿಯಾಗಿರುವ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್​ ಪತ್ತೆಗೆ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ. ಇದರ ನಡುವೆ ರಾಜ್ಯದ ಹಲವೆಡೆ ಇಂಟರ್​ನೆಟ್​ ಮತ್ತು ಎಸ್‌ಎಂಎಸ್ ಸೇವೆಗಳ ಮೇಲಿನ ನಿರ್ಬಂಧವನ್ನು ಸೋಮವಾರ ಮಧ್ಯಾಹ್ನದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್​ ಪರಾರಿ: ಪಂಜಾಬ್​ ಪೊಲೀಸರ ಪ್ರಕಟಣೆ

ನಿನ್ನೆ ಅಮೃತಪಾಲ್ ಸಿಂಗ್​ ಬಂಧನಕ್ಕಾಗಿ ಪೊಲೀಸರು ಬೃಹತ್​ ಕಾರ್ಯಾಚರಣೆಗೆ ಇಳಿದಿದ್ದರು. ಆದರೆ, ಕಾರಿನಲ್ಲಿ ಅಮೃತಪಾಲ್ ಪರಾರಿಯಾಗಿದ್ದ. ಈತನ ಸೆರೆ ಹಿಡಿಯಲು ಪೊಲೀಸರು ಬೆನ್ನಟ್ಟಿದ್ದರೂ, ಪಲಾಯನ ಆಗಿದ್ದಾನೆ. ಹೀಗಾಗಿಯೇ, ಇಂದು ಕೂಡ ಪೊಲೀಸರು ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಅಮೃತಪಾಲ್​ ಬೆಂಗಾವಲಿನ ಕಾರುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಾಳೆಯವರೆಗೂ ಇಂಟರ್​ನೆಟ್​ ಸೇವೆ ಸ್ಥಗಿತ: ಮತ್ತೊಂದೆಡೆ, ಅಮೃತಪಾಲ್ ಸಿಂಗ್​ ವಿರುದ್ಧ ಪೊಲೀಸರು ಕಾರ್ಯಾಚರಣೆ ಭಾಗವಾಗಿ ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಪಂಜಾಬ್‌ನ ಪ್ರಾದೇಶಿಕ ನ್ಯಾಯ ವ್ಯಾಪ್ತಿಯಲ್ಲಿ ಎಲ್ಲ ಮೊಬೈಲ್ ಇಂಟರ್​ನೆಟ್​ ಸೇವೆಗಳು ಮತ್ತು ಎಲ್ಲ ಎಸ್​ಎಂಎಸ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಬ್ಯಾಂಕಿಂಗ್ ಸೇವೆ ಮತ್ತು ಮೊಬೈಲ್ ರಿಚಾರ್ಜ್​ಗೆ ಅವಕಾಶ ನೀಡಲಾಗಿದೆ.

ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಎಲ್ಲ ಡಾಂಗಲ್ ಸೇವೆಗಳು, ವಾಯ್ಸ್​ ಕಾಲ್​ ಹೊರತುಪಡಿಸಿ ಉಳಿದ ಎಲ್ಲ ಸೇವೆಗಳನ್ನು ಮಾರ್ಚ್​ 20ರ ಮಧ್ಯಾಹ್ನ 12 ಗಂಟೆಯವರೆಗೆ ನಿರ್ಬಂಧಿಸಿ ಆದೇಶಿಸಲಾಗಿದೆ. ಮತ್ತೊಂದೆಡೆ, ಜಲಂಧರ್‌ನಲ್ಲಿ ಎಸ್‌ಎಸ್‌ಪಿ ಅರ್ಬನ್ ಮತ್ತು ಎಸ್‌ಎಸ್‌ಪಿ ಗ್ರಾಮಾಂತರ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ.

ನಾಲ್ವರು ಅಸ್ಸೋಂಗೆ ರವಾನೆ: ವಾರಿಸ್ ಪಂಜಾಬ್ ದೇ ಮುಖ್ಯಸ್ಥನಾದ ಅಮೃತಪಾಲ್ ಸಿಂಗ್​ನ ಆರು ಸಹಚರರು ಸೇರಿ ಸುಮಾರು 80 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ವಾರಿಸ್ ಪಂಜಾಬ್ ಸಂಘಟನೆಯ ನಾಲ್ವರು ಸದಸ್ಯರನ್ನು ಪಂಜಾಬ್‌ನಿಂದ ಅಸ್ಸೋಂನ ದಿಬ್ರುಗಢಕ್ಕೆ ಭಾನುವಾರ ಸ್ಥಳಾಂತರಿಸಲಾಗಿದೆ. ಬಂಧಿತ ಸದಸ್ಯರನ್ನು ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ಗೆ ತೀವ್ರ ಶೋಧ: ಸಲಹೆಗಾರನ ಬಂಧನ, ಬಸ್​, ಇಂಟರ್ನೆಟ್‌ ಬಂದ್​

ಬಂಧಿತ ಆರೋಪಿಗಳನ್ನು ಅಸ್ಸೋಂಗೆ ಕರೆತಂದ ನಿಟ್ಟಿನಲ್ಲಿ ದಿಬ್ರುಗಢ ಜಿಲ್ಲೆಯ ಮೋಹನ್‌ಬರಿ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ, ಜೈಲಿನಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಂಧಿತ ನಾಲ್ವರನ್ನು ಹೆಚ್ಚಿನ ಭದ್ರತೆಯೊಂದಿಗೆ ದಿಬ್ರುಗಢ ಜೈಲಿನಲ್ಲಿ ಇರಿಸಲಾಗುವುದು ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಫೆಬ್ರವರಿ 24ರಂದು ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ವಾರಿಸ್ ಪಂಜಾಬ್ ಬೆಂಬಲಿಗರು ನುಗ್ಗಿದ್ದರು. ಇತ್ತೀಚೆಗೆ ಅಪಹರಣ ಪ್ರಕರಣದಲ್ಲಿ ಬಂಧಿತನಾದ ತೂಫಾನ್‌ ಅನ್ನು ಬಿಡುಗಡೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ದರು. ಈ ವೇಳೆ ಪೊಲೀಸರು ಮತ್ತು ತೀವ್ರಗಾಮಿ ಸಿಖ್ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಿಂದ ಅಮೃತಪಾಲ್ ಸಿಂಗ್ ಪೊಲೀಸರಿಗೆ ಸವಾಲಾಗಿದ್ದು, ಈತನ ವಿರುದ್ಧ ಹಲವು ಕೇಸ್​ಗಳನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ವಿರುದ್ಧ ಪೊಲೀಸ್ ಕಾರ್ಯಾಚರಣೆ: ಇಂಟರ್​ನೆಟ್​ ಸೇವೆ ಸ್ಥಗಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.