ಪಶ್ಚಿಮ ಗೋದಾವರಿ(ಆಂಧ್ರ ಪ್ರದೇಶ): ಅತಿಯಾಗಿ ತಿನ್ನುವುದೂ ಸಹ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದು ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಪ್ರಾಣಿಗಳಿಗೂ ಸಹ ಅನ್ವಯಿಸುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ ಸರ್ಪವೊಂದು ಒಂದೇ ಬಾರಿಗೆ ಎಂಟು ಮೊಟ್ಟೆಗಳನ್ನು ನುಂಗಿ ನಂತರ ಉಗುಳಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಜೀಲುಗುಮಿಲ್ಲಿಯಲ್ಲಿ ಬೆಳಕಿಗೆ ಬಂದಿದೆ.
ಜೀಲುಗುಮಿಲ್ಲಿ ವಿಜಯಾ ಬ್ಯಾಂಕ್ ಬಳಿಯ ಮನೆಯೊಂದರಲ್ಲಿ ಹಾವನ್ನು ಗಮನಿಸಿದ ಸ್ಥಳೀಯರು ಅದನ್ನು ಹೊರಗೆಳೆದಿದ್ದಾರೆ. ಅಷ್ಟರೊಳಗೆ ಆ ಹಾವು ಮೊಟ್ಟೆಗಳನ್ನು ನುಂಗಿತ್ತು.
ಹಾವಿಗೆ ನುಂಗಿದ ಮೊಟ್ಟೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲರೂ ನೋಡುತ್ತಿರುವಾಗ ಅದು ಪ್ರತಿಯೊಂದು ಮೊಟ್ಟೆಯನ್ನು ಹೊರಹಾಕಿತು. ಈ ಘಟನೆಯನ್ನು ಸ್ಥಳೀಯರು ಚಿತ್ರೀಕರಿಸಿ ಅಂತರ್ಜಾಲದಲ್ಲಿ ಹಾಕಿದ್ದರಿಂದ ವೈರಲ್ ಆಗಿದೆ.
ಓದಿ: ದೇವರ ಪೂಜಾ ಕಾರ್ಯದಲ್ಲಿ ತಾರತಮ್ಯ ಆರೋಪ.. ದೇವಾಲಯಕ್ಕೆ ಬೀಗ ಹಾಕಿದ್ದ ಅರ್ಚಕ ವಜಾ