ETV Bharat / bharat

'ಲಸಿಕೆ ಪಾಸ್‌ಪೋರ್ಟ್‌' ಜಾರಿಗೆ ಮುಂದಾದ ಶ್ರೀಮಂತ ರಾಷ್ಟ್ರಗಳು: ಭಾರತ ವಿರೋಧಿಸಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ - ಲಸಿಕೆ ಕೊರತೆ

ಜಿ7 ರಾಷ್ಟ್ರಗಳ ಶೃಂಗಸಭೆಗೂ ಮುನ್ನ ನಡೆದ ಆರೋಗ್ಯ ಸಚಿವ ಸಭೆಯಲ್ಲಿ ಕೋವಿಡ್ ಲಸಿಕೆ ಸಮಾನತೆ ಕುರಿತಂತೆ ಭಾರತ ತನ್ನ ನಿಲುವು ವ್ಯಕ್ತಪಡಿಸಿದೆ.

G7 Meet
ಜಿ 7 ಸಭೆ
author img

By

Published : Jun 6, 2021, 9:38 AM IST

ನವದೆಹಲಿ: ಕೇಂದ್ರ ಆರೋಗ್ಯ ಸಚಿವರು ಪಾಲ್ಗೊಂಡಿದ್ದ ಜಿ 7 ಶೃಂಗಸಭೆಯಲ್ಲಿ ಕೋವಿಡ್ -19 ಲಸಿಕೆ ಪಾರ್ಸ್​ಪೋರ್ಟ್ ಅಳವಡಿಸಿಕೊಳ್ಳುವುದನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಅಂತಹ ಉಪಕ್ರಮವು "ದೊಡ್ಡ ತಾರತಮ್ಯ'ಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.

ಈ ಸಭೆಯಲ್ಲಿ 7 ಶ್ರೀಮಂತ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಸಿಕೆ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ 'ಲಸಿಕೆ ಪಾಸ್​ಪೋರ್ಟ್' ಕಲ್ಪನೆಯ ಬಗ್ಗೆ ಭಾರತದ ಕಾಳಜಿಯನ್ನು ಪರಿಗಣಿಸುವುದು ಸೂಕ್ತ. ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಲಸಿಕೆ ಉತ್ಪಾದನೆ, ಪೂರೈಕೆ ಮತ್ತು ಅದರ ದರದಲ್ಲಿ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಬೇಕಾದ ಈ ಸಮಯದಲ್ಲಿ ಲಸಿಕೆ ಪಾರ್ಸ್ಪೋರ್ಟ್ ಅನುಷ್ಠಾನಕ್ಕೆ ತಂದರೆ, ಅದರಿಂದ ದೊಡ್ಡ ತಾರತಮ್ಯ ಮತ್ತು ಅನಾನುಕೂಲ ಉಂಟಾಗಲಿದೆ ಎಂದು ಸಚಿವ ಹರ್ಷವರ್ಧನ್ ಲಸಿಕೆ ಪಾರ್ಸ್ ಪೋರ್ಟ್ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟವಾಗಿ ಹೇಳಿದರು.

ಲಸಿಕೆ ಲಭ್ಯತೆ ಮತ್ತು ದರ ಮತ್ತು ಪರಿಣಾಮಕತ್ವದ ಪುರಾವೆಗಳನ್ನು ಪರಿಗಣಿಸಿದ ಬಳಿಕ ಲಸಿಕೆ ಪಾರ್ಸ್​ಪೋರ್ಟ್ ಜಾರಿಗೆ ತರುವ ಬಗ್ಗೆ ಯೋಚಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

ಯುಎಸ್​, ಯುಕೆ ಸೇರಿದಂತೆ ಹಲವಾರು ಶ್ರೀಮಂತ ರಾಷ್ಟ್ರಗಳು ತಮ್ಮ ದೇಶದ ನಾಗರಿಕರು ಹೊರ ರಾಷ್ಟ್ರಗಳಿಗೆ ತೆರಳಲು ಮತ್ತು ಹೊರಗಿನವರು ತಮ್ಮ ದೇಶಕ್ಕೆ ಬರಲು ಲಸಿಕೆ ಪಾರ್ಸ್​ಪೋರ್ಟ್ ಕಡ್ಡಾಯಗೊಳಿಸಲು ಮುಂದಾಗಿದೆ. ಯುರೋಪಿಯನ್ ಯೂನಿಯನ್ ಕೂಡ ಈ ನಿರ್ಧಾರಕ್ಕೆ ಸಹಮತ ಸೂಚಿಸಿದೆ. ಆದರೆ, ತನ್ನ ಒಟ್ಟು ಜನ ಸಂಖ್ಯೆಯ ಕೇವಲ ಶೇ.3 ರಷ್ಟು ಜನರಿಗೆ ಮಾತ್ರ ಲಸಿಕೆ ಹಾಕಿಸಿರುವ ಭಾರತ ಈ ನಿರ್ಧಾರವನ್ನು ವಿರೋಧಿಸಿದೆ. ಇದು ಅಭಿವೃದ್ದಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳ ನಡುವೆ ತಾರತಮ್ಯ ಸೃಷ್ಟಿಯಾಗಲು ಕಾರಣವಾಗುತ್ತದೆ ಎಂದು ಭಾರತ ಹೇಳಿದೆ.

ಮುಂದಿನ ವಾರದ ಜಿ 7 ಶೃಂಗಸಭೆಯ ಮುನ್ನ ದಕ್ಷಿಣ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜಿ7 ರಾಷ್ಟ್ರಗಳ ಆರೋಗ್ಯ ಸಚಿವರ ಸಭೆ ನಡೆಯಿತು. ಈ ವರ್ಷದ ಜಿ7 ಸಭೆಯಲ್ಲಿ ಭಾರತ ಅತಿಥಿ ರಾಷ್ಟ್ರವಾಗಿದೆ.

ಏನಿದು ಲಸಿಕೆ ಪಾಸ್​​ಪೋರ್ಟ್ ?

ಲಸಿಕೆ ಪಾರ್ಸ್​ಪೋರ್ಟ್ ಹೊರದೇಶಗಳಿಗೆ ತೆರಳುವ ಜನರಿಗೆ ಸರ್ಕಾರದ ಕಡೆಯಿಂದ ನೀಡುವ ಅಧಿಕೃತ ಲಸಿಕೆ ಪಡೆದ ಒಂದು ದಾಖಲೆಯಾಗಿದೆ. ಜಾಗತಿಕವಾಗಿ ಲಸಿಕೆ ಪಾರ್ಸ್​ಪೋರ್ಟ್ ಕಡ್ಡಾಯವಾದರೆ, ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರಗಳ ಪ್ರಯಾಣಿಕರು ಲಸಿಕೆ ಪಡೆಯದೆ ವಿದೇಶಿ ಪ್ರಯಾಣ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಉದ್ಯೋಗಸ್ಥರು ಮತ್ತು ತುರ್ತು ಕಾರ್ಯಗಳಿಗೆ ತೆರಳುವವರಿಗೆ ಸಮಸ್ಯೆಯಾಗಲಿದೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇನ್ನೂ ಲಸಿಕೆ ಕೊರತೆಯಿದೆ. ಹಾಗಾಗಿ ಎಲ್ಲರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಭಾರತದಲ್ಲೇ ಕೇವಲ ಶೇ. 3 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಲಸಿಕೆ ಪಾಸ್​​ಪೋರ್ಟ್ ಕಡ್ಡಾಯಗೊಳಿಸಿದರೆ, ಖಂಡಿತವಾಗಿ ಜನಸಾಮಾನ್ಯರಿಗೆ ಸಮಸ್ಯೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.