ಡ್ರೈ ಫ್ರೂಟ್ಗಳಲ್ಲಿ ಒಂದಾಗಿರುವ ಪಿಸ್ತಾ ಸಿಹಿತಿಂಡಿಗಳ ರುಚಿ ಮತ್ತು ಬಣ್ಣ ಹೆಚ್ಚಿಸುವುದು ಮಾತ್ರವಲ್ಲ, ಪೌಷ್ಟಿಕಾಂಶದ ಮೌಲ್ಯವನ್ನೂ ಕೂಡ ನೀಡುತ್ತದೆ. ಆಯುರ್ವೇದವೂ ಈ ಒಣಹಣ್ಣಿನ ಔಷಧೀಯ ಗುಣಗಳನ್ನು ಒಪ್ಪಿಕೊಂಡಿದೆ. ಪುಣೆಯಲ್ಲಿರುವ ಆಯುರ್ವೇದಿಕ್ ವೈದ್ಯ ಡಾ.ಕಲಾಕಾಂತ, ಪಿಸ್ತಾದ ಮಹತ್ವ ವಿವರಿಸಿದ್ದು, ಅವರ ಪ್ರಕಾರ ಆಯುರ್ವೇದದಲ್ಲಿ ಪಿಸ್ತಾವನ್ನು 'ಕಫ' ಮತ್ತು 'ಪಿತ್ತ' ವರ್ಧಕಗಳು ಎಂದು ಪರಿಗಣಿಸಲಾಗುತ್ತದೆ. ಇದು 'ವಾತ'ಕ್ಕೆ ಪರಿಹಾರ ನೀಡುವುದಲ್ಲದೆ ದೇಹದ ಶಕ್ತಿ ವೃದ್ಧಿಸುತ್ತದೆ. ಇದರ ಸೇವನೆಯಿಂದ ಪುರುಷರ ಲೈಂಗಿಕ ಆರೋಗ್ಯವೃದ್ಧಿಯಾಗುತ್ತದೆ ಎಂದು ಪರಿಗಣಿಸಲಾಗಿದೆ. ಪಿಸ್ತಾ ಮಾತ್ರವಲ್ಲ, ಅದರ ತೊಗಟೆ, ಎಲೆಗಳು ಮತ್ತು ಎಣ್ಣೆಯನ್ನು ಕೂಡ ಔಷಧೀಯ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ.
ಪಿಸ್ತಾದಲ್ಲಿರುವ ಪೋಷಕಾಂಶಗಳಿವು..: ವಿಟಮಿನ್ ಎ, ಕೆ, ಸಿ, ಡಿ, ಇ ಮತ್ತು ಬಿ-6, ಖನಿಜಗಳು, ಮೆಗ್ನೀಸಿಯಮ್, ಕಬ್ಬಿಣ, ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಅಮೈನೋ ಆಮ್ಲ, ಫೋಲೇಟ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಥಯಾಮಿನ್, ಅಪರ್ಯಾಪ್ತ ಕೊಬ್ಬು, ಒಲೀಕ್ ಮತ್ತು ಲಿನೋಲಿಕ್ ಆಮ್ಲ ಮತ್ತು ಫೈಟೊಕೆಮಿಕಲ್ಸ್ ಇದರಲ್ಲಿದೆ. ಮಧುಮೇಹ ವಿರೋಧಿ, ಉರಿಯೂತ ಮತ್ತು ಆ್ಯಂಟಿಆಕ್ಸಿಡೇಟಿವ್ ಗುಣಲಕ್ಷಣಗಳೂ ಕೂಡ ಪಿಸ್ತಾದಲ್ಲಿವೆ.
ಔಷಧೀಯ ಗುಣಗಳೇನು?: ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (NCBI)ನಲ್ಲಿ ಪ್ರಕಟವಾದ ಸಂಶೋಧನೆಯು ಪಿಸ್ತಾಗಳ ಸೇವನೆಯು ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ (LDL) ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಉಲ್ಲೇಖಿಸಿದೆ. ಇದು ಪರಿಧಮನಿಯ ಮತ್ತು ರಕ್ತಕೊರತೆಯ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಪಿಸ್ತಾವನ್ನು ಮಿತವಾಗಿ ಸೇವನೆ ಮಾಡಿದ್ದಲ್ಲಿ ಚಯಾಪಚಯ ಶಕ್ತಿಯ ಅಂಶ, ಸಂತೃಪ್ತಿಯ ಅಂಶಗಳು ದೇಹದ ತೂಕವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತವೆ ಎಂಬುದನ್ನು NCBI ಸಂಶೋಧನೆ ಹೇಳುತ್ತದೆ.
- ತೂಕ ನಷ್ಟ ಕುರಿತ ಅಧ್ಯಯನವೊಂದರಲ್ಲಿ, ಐಸೋಕಲೋರಿಕ್ ಪ್ರೆಟ್ಜೆಲ್ ಸ್ನ್ಯಾಕ್ ಅನ್ನು ಸೇವಿಸುವವರಿಗೆ ಹೋಲಿಸಿದರೆ ಪಿಸ್ತಾಗಳನ್ನು ಸೇವಿಸುವ ವ್ಯಕ್ತಿಗಳಲ್ಲಿ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ ಮತ್ತು ಟ್ರೈಗ್ಲಿಸರೈಡ್ ಮಟ್ಟ ಕಂಡುಬಂದಿದೆ.
- ಅದರೊಂದಿಗೆ ಪಿಸ್ತಾಗಳು ಬೊಜ್ಜು ವಿರೋಧಿ ಗುಣಲಕ್ಷಣಗಳನ್ನೂ ಹೊಂದಿದ್ದು, ಇದು ಪಿಷ್ಟದಿಂದ ಉಂಟಾಗುವ ಅಡೆತಡೆಗಳನ್ನು ಕಡಿಮೆ ಮಾಡಲು, ಕೊಬ್ಬು ಹೆಚ್ಚಾಗುವುದನ್ನು ತಡೆಗಟ್ಟಲು ಮತ್ತು ಕಡಿಮೆ ಶಕ್ತಿಯ ಸಾಂದ್ರತೆ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.
- ಮತ್ತೊಂದು ಸಂಶೋಧನೆಯು ಪಿಸ್ತಾದಲ್ಲಿ ಕೀಮೋ-ತಡೆಗಟ್ಟುವ ಗುಣಲಕ್ಷಣಗಳು ಇರುವುದನ್ನು ಕಂಡುಹಿಡಿದಿದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಪಿಸ್ತಾದಲ್ಲಿರುವ ಪಿ-ಟೊಕೊಫೆರಾಲ್ ಮತ್ತು ಇತರ ಆ್ಯಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ಪಿಸ್ತಾಗಳಲ್ಲಿ ಫೈಟೊನ್ಯೂಟ್ರಿಯೆಂಟ್ಸ್, ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳು ಭರಪೂರವಾಗಿವೆ. ಇವುಗಳು ನಮ್ಮ ಕಣ್ಣಿನ ಆರೋಗ್ಯಕ್ಕೆ ಸಹಾಯಕ. ಕಣ್ಣಿನ ಪೊರೆಗಳಂತಹ ದೀರ್ಘಕಾಲದ ಕಣ್ಣಿನ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತವೆ.
- 2014ರಲ್ಲಿ ಪೆನ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನವು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ, ದಿನಕ್ಕೆ ಎರಡು ಬಾರಿ ಪಿಸ್ತಾ ತಿನ್ನುವುದು ಮಧುಮೇಹ ಟೈಪ್ 2 ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿಸಿದೆ. ಜೊತೆಗೆ ಒತ್ತಡವನ್ನು ನಿವಾರಣೆ ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ ಎಂದು ವಿವರಿಸಲಾಗಿದೆ.
ತಜ್ಞರು ಏನು ಹೇಳುತ್ತಾರೆ?: ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಡಾ.ದಿವ್ಯಾ ಶರ್ಮಾ, ಪಿಸ್ತಾವನ್ನು ಆಸೆಪಟ್ಟು ಒಮ್ಮೆಗೆ ಸೇವಿಸುವುದಕ್ಕಿಂತ ನಿಯಂತ್ರಿತವಾಗಿ ಸೇವಿಸಿದರೆ, ಅವುಗಳಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳಿವೆ ಎನ್ನುತ್ತಾರೆ. ಇದು ಕಬ್ಬಿಣದಂಶದ ಕೊರತೆಯನ್ನು ಕಡಿಮೆ ಮಾಡಿ ದೇಹದ ಇಮ್ಯೂನಿಟಿ ಪವರ್ ಹೆಚ್ಚಿಸುತ್ತದೆ. ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ. ಹಲ್ಲುಗಳನ್ನು ಬಲವಾಗಿರಿಸುತ್ತದೆ. ಗರ್ಭಿಣಿಯರಿಗೂ ಇತರ ಒಣ ಹಣ್ಣುಗಳೊಂದಿಗೆ ಪಿಸ್ತಾವನ್ನು ನಿಯಂತ್ರಿತ ಪ್ರಮಾಣದಲ್ಲಿ ತಿನ್ನಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಅಗತ್ಯವಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಇದರಲ್ಲಿ ಸಮೃದ್ಧವಾಗಿದೆ.
ಇದನ್ನೂ ಓದಿ: ಪ್ರೋಟೀನ್ಯುಕ್ತ ಆಹಾರ ಸೇವಿಸಿ 'ಬಿಪಿ' ಕಡಿಮೆ ಮಾಡಿಕೊಳ್ಳಿ..