ETV Bharat / bharat

ಪ್ರೌಢ ಶಾಲೆ ಪರೀಕ್ಷೆ ಬರೆಯಲು ಗಂಡನ ಮನೆಯಿಂದ ತಪ್ಪಿಸಿಕೊಂಡು ಬಂದ ಗೃಹಿಣಿ!

ಪಶ್ಚಿಮ ಬಂಗಾಳದಲ್ಲಿ ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭವಾಗಿವೆ. ಅತ್ತೆ ಮನೆಯಿಂದ ಓಡಿ ಬಂದು ಓರ್ವ ಗೃಹಿಣಿ ಪರೀಕ್ಷೆಗೆ ಹಾಜರಾಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ತನ್ನ ತಂದೆ ಸಾವಿನಲ್ಲೂ ಪರೀಕ್ಷೆ ಎದುರಿಸಿದ ಘಟನೆಗಳು ವರದಿಯಾಗಿದೆ.

housewife-flees-home-to-appear-for-hs-exam-in-bengals-farakka
ಪ್ರೌಢ ಶಾಲೆ ಪರೀಕ್ಷೆ ಬರೆಯಲು ಗಂಡನ ಮನೆಯಿಂದ ತಪ್ಪಿಸಿಕೊಂಡು ಬಂದ ಗೃಹಿಣಿ!
author img

By

Published : Mar 16, 2023, 10:35 PM IST

Updated : Mar 17, 2023, 2:54 PM IST

ಮುರ್ಷಿದಾಬಾದ್‌ (ಪಶ್ಚಿಮ ಬಂಗಾಳ): ಪ್ರೌಢ ಶಾಲೆ ಪರೀಕ್ಷೆ (higher secondary examination) ಬರೆಯುವ ನಿಟ್ಟಿನಲ್ಲಿ ಗಂಡನ ಮನೆಯಿಂದ ವಿವಾಹಿತೆಯೊಬ್ಬರು ತಪ್ಪಿಸಿಕೊಂಡು ಬಂದು ಪೊಲೀಸರ ಮೊರೆ ಹೋಗಿರುವ ಪ್ರಸಂಗ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ನೆರವಿನಿಂದ ಈ ಗೃಹಿಣಿ ಪರೀಕ್ಷೆಗೆ ಹಾಜರಾಗುವಲ್ಲಿ ಸಫಲರಾಗಿದ್ದಾರೆ.

20 ವರ್ಷದ ಸುಲ್ತಾನಾ ಖಾತುನ್ ಎಂಬ ಗೃಹಿಣಿಯೇ ವಿದ್ಯಾಭ್ಯಾಸಕ್ಕಾಗಿ ಪತಿ ಮನೆಯಿಂದ ಓಡಿ ಬಂದಿದ್ದರು. ಮುರ್ಷಿದಾಬಾದ್‌ ಜಿಲ್ಲೆಯ ಫರಕ್ಕಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಂದುಗ್ರಾಮ್‌ನ ಪ್ರೌಢ ಶಾಲೆ ವಿದ್ಯಾರ್ಥಿನಿಯಾಗಿದ್ದಾರೆ. ಮಾರ್ಚ್ 14ರಿಂದ 12ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಿವೆ. ಈ ಪರೀಕ್ಷೆ ಹಾಜರಾಗಬೇಕೆಂದು ಸುಲ್ತಾನಾ ನಿರ್ಧರಿಸಿದ್ದರು. ಆದರೆ, ಇದಕ್ಕೆ ಪತಿ ಬಂಟಿ ಶೇಖ್ ಮತ್ತು ಆತನ ಕುಟುಂಬದ ಇತರ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಅತ್ತಿಗೆ ಮನೆಯಲ್ಲಿ ಸುಲ್ತಾನಾ ಜಗಳವಾಡಿದ್ದಾರೆ. ಈ ವೇಳೆ, ಆಕೆಯ ಪರೀಕ್ಷೆಯ ಪ್ರವೇಶಪತ್ರ ಮತ್ತು ಪುಸ್ತಕಗಳನ್ನು ಪತಿ ಮನೆಯವರು ಬಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ಬುಧವಾರ ಸಂಜೆಯಿಂದ ಸುಲ್ತಾನಾ ಅವರನ್ನು ಮನೆಯಲ್ಲೇ ಬೀಗ ಹಾಕಿ ಬಂದಿದ್ದಾರೆ. ಗುರುವಾರ ಬೆಳಗ್ಗೆ ಹೇಗೋ ಮನೆಯಿಂದ ತಪ್ಪಿಸಿಕೊಂಡು ಓಡಿ ಹೊರ ಬಂದಿದ್ದಾರೆ. ನಂತರ ನೇರವಾಗಿ ಫರಕ್ಕಾ ಪೊಲೀಸ್ ಠಾಣೆಗೆ ತಲುಪಿದ್ದಾರೆ.

ನೆರವಿಗೆ ಬಂದ ಪೊಲೀಸರು: ಪರೀಕ್ಷೆ ಬರೆಯವ ಇಚ್ಛೆಯಿಂದ ಮನೆಯಿಂದ ತಪ್ಪಿಸಿಕೊಂಡು ಬಂದ ಸುಲ್ತಾನಾ ಪೊಲೀಸರಿಗೆ ಎಲ್ಲ ವಿಷಯವನ್ನೂ ಎಳೆ - ಎಳೆಯಾಗಿ ವಿವರಿಸಿದ್ದಾರೆ. ಸುಲ್ತಾನಾ ಸಂಕಟ ಕೇಳಿದ ಪೊಲೀಸರು ಆಕೆಗೆ ನೆರವಿಗೆ ಬಂದಿದ್ದಾರೆ. ತಕ್ಷಣವೇ ಇಂಗ್ಲಿಷ್ ಪರೀಕ್ಷೆ ಬರೆಯಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಇಲ್ಲಿನ ನ್ಯೂ ಫರಕ್ಕಾ ಪ್ರೌಢ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪೊಲೀಸರೇ ಸುಲ್ತಾನಾ ಅವರನ್ನು ತಮ್ಮ ಭದ್ರತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಇದರಿಂದ ಆಕೆಗೆ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗಿದೆ.

ನನಗೆ ಓದುವುದು ಇಷ್ಟ: ಪರೀಕ್ಷಾ ಕೇಂದ್ರಕ್ಕೆ ಪೊಲೀಸರು ಕರೆತಂದ ಬಳಿಕ ಮಾತನಾಡಿದ ಸುಲ್ತಾನಾ, ''ನನಗೆ ಓದುವುದು ತುಂಬಾ ಇಷ್ಟ. ನಾನು ಹೈಯರ್ ಸೆಕೆಂಡರಿ ಪರೀಕ್ಷೆ ತೆಗೆದುಕೊಳ್ಳಲು ಬಯಸಿದ್ದೆ. ನನ್ನ ಪತಿಯ ಮನೆಯವರ ನನ್ನನ್ನು ತಡೆಯಲು ಮುಂದಾಗಿದ್ದರು. ಹೀಗಾಗಿ ನಾನು ಪೊಲೀಸರ ಸಹಾಯಕ್ಕಾಗಿ ಮೊರೆ ಹೋಗಿದ್ದೆ. ಪೊಲೀಸರಿಗೆ ನನಗೆ ಪರೀಕ್ಷೆಗೆ ಹೋಗಲು ವ್ಯವಸ್ಥೆ ಮಾಡಿದರು'' ಎಂದು ತಿಳಿಸಿದರು.

ತಂದೆ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ: ಇದು ಸುಲ್ತಾನಾ ಅವರ ಕಥೆಯಾದರೆ, ಮತ್ತೊಬ್ಬ ಮೌಶುಮಿ ಎಂಬ ವಿದ್ಯಾರ್ಥಿನಿ ತನ್ನ ತಂದೆಯ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದು ಸ್ಥೈರ್ಯ ಮರೆದಿದ್ದಾರೆ. ಬೋಲ್ಪುರ್‌ನ ನಿವಾಸಿಯಾದ ಮೌಶುಮಿಯ ತಂದೆ ಗುರುವಾರ ಬೆಳಗ್ಗೆ 4 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಆದರೆ, ಕೆಲ ಗಂಟೆಗಳಲ್ಲೇ ಇಂಗ್ಲಿಷ್​ ಪರೀಕ್ಷೆ ಇತ್ತು. ತನ್ನ ತಂದೆಯನ್ನು ಕಳೆದುಕೊಂಡರೂ ಮೌಶುಮಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ಮುಗಿಸಿದ ನಂತರ ತಂದೆಯ ಅಂತ್ಯಸಂಸ್ಕಾರದಲ್ಲಿ ವಿದ್ಯಾರ್ಥಿನಿ ತನ್ನ ಕುಟುಂಬಸ್ಥರು ಮತ್ತು ಸಂಬಂಧಿಕರೊಂದಿಗೆ ಭಾಗಿಯಾಗಿದ್ದಾರೆ.

ಇದನ್ನೂ ಓದಿ: CRPF​ನಲ್ಲಿ 9 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ, ವೇತನ, ಪರೀಕ್ಷೆಯ ಸಂಪೂರ್ಣ ವಿವರ

Last Updated : Mar 17, 2023, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.