ಲಖನೌ (ಉ.ಪ್ರ): ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಸಹಾಯ ಧನ ಏರಿಕೆ ಮಾಡಿದೆ. ಮಾಸಿಕ 1,500 ರೂಪಾಯಿ ಏರಿಕೆ ಮಾಡಿದ್ದು, ತಿಂಗಳಿಗೆ 5,500 ರೂಪಾಯಿ ಪಡೆಯುತ್ತಿದ್ದವರು ಇನ್ನು ಮುಂದೆ 7,000 ರೂಪಾಯಿ ಸಾಹಯಧನ ಪಡೆಯಲಿದ್ದಾರೆ.
ಇದರ ಜತೆ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಸಹಾಯಧನದಲ್ಲಿ 1,250 ರೂಪಾಯಿ ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಅವರು ಮಾಸಿಕವಾಗಿ 4,250 ರೂಪಾಯಿ ಪಡೆಯುತ್ತಿದ್ದರು. ಇದೀಗ 1,250 ರೂಪಾಯಿ ಏರಿಕೆ ಕಂಡು 5,500 ರೂಪಾಯಿ ಪಡೆಯಲಿದ್ದಾರೆ.
ಇವರ ಜೊತೆ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕರ ಗೌರವ ಧನವನ್ನ 750ರೂ. ಹೆಚ್ಚಿಸಲಾಗಿದೆ. ಅವರೀಗ 3,250 ರೂ. ಬದಲಿಗೆ 4 ಸಾವಿರ ರೂಪಾಯಿ ಗೌರವ ಧನ ಪಡೆಯಲಿದ್ದಾರೆ.
ಇದಲ್ಲದೇ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ 75 ಜಿಲ್ಲೆಗಳಲ್ಲಿ ಒಟ್ಟು 53,000 ಹುದ್ದೆಗಳಿಗೆ ನೇಮಕಾತಿ ನಡೆಸಲು ಸರ್ಕಾರ ಮುಂದಾಗಿದೆ.
ಓದಿ: ಅವಸರದಲ್ಲಿ ಯಾವುದೇ ದೇವಾಲಯ ಒಡೆಯುವಂತಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ