ETV Bharat / bharat

ಭಾರತದ ಮುಖ್ಯಸ್ಥರಾಗಿ ರಾಜೇಶ್ ರೇಗೆ ನೇಮಕ ಮಾಡುವುದಾಗಿ ಘೋಷಿಸಿದ ಹನಿವೆಲ್

ತಂತ್ರಜ್ಞಾನ ಕಂಪನಿ ಹನಿವೆಲ್ ಭಾರತದ ಮುಖ್ಯಸ್ಥರಾಗಿ ರಾಜೇಶ್ ರೇಗೆ ಅವರನ್ನು ನೇಮಕ ಮಾಡುವುದಾಗಿ ತಿಳಿಸಿದೆ.

Honeywell appoints Rajesh Rege as new India market head

author img

By

Published : Feb 7, 2022, 12:39 PM IST

ನವದೆಹಲಿ: ತಂತ್ರಜ್ಞಾನ ಕಂಪನಿ ಹನಿವೆಲ್ ಭಾರತದ ಮುಖ್ಯಸ್ಥರಾಗಿ ರಾಜೇಶ್ ರೇಗೆ ಅವರನ್ನು ನೇಮಕ ಮಾಡುವುದಾಗಿ ತಿಳಿಸಿದೆ. ಈ ಮೂಲಕ ರೇಜ್ ಅವರು ಹನಿವೆಲ್‌ನ ಇಂಡಿಯಾ ಕಾರ್ಯತಂತ್ರದ ಭಾಗವಾಗಲಿದ್ದಾರೆ.

ಹನಿವೆಲ್ಸ್ ಹೈ ಗ್ರೋತ್ ರೀಜನ್ಸ್ (HGR) ಮತ್ತು ಹನಿವೆಲ್ ಇಂಡಿಯಾದಲ್ಲಿ ಹೆಚ್ಚು ಸಮರ್ಥ ನಾಯಕತ್ವದ ತಂಡವನ್ನು ಸೇರುವ ಅವರು, ಬಲವಾದ ಮಧ್ಯಸ್ಥಗಾರರ ತೊಡಗಿಸಿಕೊಳ್ಳುವಿಕೆಯನ್ನು ನಿರ್ಮಿಸಲು ತಮ್ಮ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಹೆಚ್​ಜಿಆರ್ ಅಧ್ಯಕ್ಷ ಬೆನ್ ಡ್ರಿಗ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹನಿವೆಲ್‌ನ ನಾಲ್ಕು ಕಾರ್ಯತಂತ್ರದ ವ್ಯಾಪಾರ ಗುಂಪುಗಳಲ್ಲಿ ಭಾರತದ ಕಾರ್ಯಾಚರಣೆಗಳ ಮುಂದುವರಿದ ಬೆಳವಣಿಗೆಗೆ ರೆಗೆ ಜವಾಬ್ದಾರರಾಗಿರುತ್ತಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ 32 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಇವರು ಪಡೆದಿದ್ದಾರೆ. ಈ ಮೊದಲು ಮೈಕ್ರೋಸಾಫ್ಟ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಇವರು ಅಲ್ಲಿ ಭಾರತಕ್ಕಾಗಿ ತಂತ್ರಜ್ಞಾನ ಮತ್ತು ಕ್ಲೌಡ್ ಪರಿಹಾರಗಳ ವ್ಯವಹಾರವನ್ನು ಮುನ್ನಡೆಸಿದ್ದರು.

ಇದನ್ನು ಓದಿ:ಎಲೆಕ್ಟ್ರಿಕ್ ಕಾರು ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ: ಟೆಸ್ಲಾ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ

ಹನಿವೆಲ್​ ಬಗ್ಗೆ: ಹನಿವೆಲ್ ಇಂಟರ್‌ನ್ಯಾಶನಲ್ ಕಂಪನಿ. ಇದು ಅಮೇರಿಕನ್ ಸಾರ್ವಜನಿಕವಾಗಿ ವ್ಯಾಪಾರ ಮಾಡುವ, ನಾರ್ತ್ ಕೆರೊಲಿನಾದ ಚಾರ್ಲೊಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಂಘಟಿತ ನಿಗಮವಾಗಿದೆ. ಇದು ಪ್ರಾಥಮಿಕವಾಗಿ ನಾಲ್ಕು ಕ್ಷೇತ್ರಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಏರೋಸ್ಪೇಸ್, ಕಟ್ಟಡ ತಂತ್ರಜ್ಞಾನಗಳು, ಕಾರ್ಯಕ್ಷಮತೆಯ ಸಾಮಗ್ರಿಗಳು ಮತ್ತು ತಂತ್ರಜ್ಞಾನಗಳು ಹಾಗೂ ಸುರಕ್ಷತೆ ಮತ್ತು ಉತ್ಪಾದಕತೆಯ ಪರಿಹಾರಗಳಲ್ಲಿ ಇದು ತನ್ನ ಕೆಲಸ ನಿರ್ವಹಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.