ETV Bharat / bharat

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿ. ಅರುಣ್ ಜೇಟ್ಲಿ ಪ್ರತಿಮೆ ಅನಾವರಣ - Former India cricketer Bishen Singh Bedi

ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರು ಸಿದ್ಧಪಡಿಸಿರುವ ಅರುಣ್​​ ಜೇಟ್ಲಿಯವರ ಪ್ರತಿಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅನಾವರಣಗೊಳಿಸಿದರು.

ದಿ.ಅರುಣ್ ಜೇಟ್ಲಿ ಅವರ ಪ್ರತಿಮೆ ಅನಾವರಣ
ದಿ.ಅರುಣ್ ಜೇಟ್ಲಿ ಅವರ ಪ್ರತಿಮೆ ಅನಾವರಣ
author img

By

Published : Dec 28, 2020, 4:48 PM IST

Updated : Dec 28, 2020, 5:03 PM IST

ನವದೆಹಲಿ: ವಿವಾದದ ನಡುವೆಯೂ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿ. ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

96 ವರ್ಷದ ಖ್ಯಾತ ಶಿಲ್ಪಿ ರಾಮ್ ಸುತಾರ್ ಅವರು ಸಿದ್ಧಪಡಿಸಿದ ಜೇಟ್ಲಿಯವರ ಪ್ರತಿಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣಗೊಳಿಸಿದರು.

ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವುದನ್ನು ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಬಲವಾಗಿ ಖಂಡಿಸಿದ್ದರು.

  • Unveiled a statue of Shri Arun Jaitley ji at New Delhi’s Arun Jaitley Stadium. His pioneering contribution in promoting cricket will never be forgotten. We will always miss him as an incredible person dedicated towards nation’s progress. My tributes to Arun ji on his jayanti. pic.twitter.com/DOIclIfrCM

    — Amit Shah (@AmitShah) December 28, 2020 " class="align-text-top noRightClick twitterSection" data=" ">

ಅನಾವರಣ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಭಾರತದ ಓಪನರ್ ಶಿಖರ್ ಧವನ್, ಮಾಜಿ ಭಾರತದ ಆರಂಭಿಕ ಆಟಗಾರ ಗೌತಮ್ ಗಂಭೀರ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕೇಂದ್ರ ಸಚಿವ ಹರ್ದೀಪ್ ಪುರಿ ಭಾಗವಹಿಸಿದ್ದರು.

ಓದಿ:ಆಂಧ್ರದ ಕೃಷ್ಣ ಜಿಲ್ಲೆಯಲ್ಲಿ​ ಕೋವಿಡ್​ ಲಸಿಕೆಯ 'ಡ್ರೈ ರನ್' ಕಾರ್ಯಕ್ರಮ ಆಯೋಜನೆ

"ಅರುಣ್ ನನಗೆ ಹಿರಿಯ ಸಹೋದರನಂತೆ ಇದ್ದರು. ರಾಜಕೀಯದಲ್ಲಿ ಅವರು ಹೆಚ್ಚು ಹೆಸರುವಾಸಿಯಾಗಿದ್ದರು. ಅವರ ಭಾಷಣಗಳು ತುಂಬಾ ಆಕ್ರಮಣಕಾರಿಯಾಗಿ ಇರುತ್ತಿದ್ದವು. ಸಂಸತ್ತಿನ ಘನತೆಯನ್ನು ಅವರು ಎಂದಿಗೂ ಕಡಿಮೆ ಮಾಡಲಿಲ್ಲ" ಎಂದು 13 ವರ್ಷದಿಂದ ಡಿಡಿಸಿಎ ಅಧ್ಯಕ್ಷರಾಗಿರುವ ಅಮಿತ್​​ ಶಾ ಹೇಳಿದ್ದಾರೆ.

ದೆಹಲಿಯ ಕ್ರಿಕೆಟ್ ಅಭಿವೃದ್ಧಿಯಲ್ಲಿ ಜೇಟ್ಲಿಯವರ ಕೊಡುಗೆ ಅಪಾರವಾಗಿದೆ. ನಾವು ಆಡಿದಾಗ ಮತ್ತು ಸೆಂಚುರಿ ಹೊಡೆದಾಗ ಮನ್ನಣೆಯನ್ನು ಪಡೆಯುತ್ತೇವೆ. ಆದರೆ ಬಹಳಷ್ಟು ಜನರು ತೆರೆಮರೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಕ್ರಿಕೆಟಿಗರಿಗೆ ಸಹಾಯ ಮಾಡುತ್ತಾರೆ. ಅದೇ ರೀತಿ ಜೈಟ್ಲಿಯವರು ಸಂಕಷ್ಟದ ಸಮಯದಲ್ಲಿಯೂ ನಮಗೆ ಹುರುಪು ತುಂಬುತ್ತಿದ್ದರು. ಅವರೊಬ್ಬ ಮಹಾನ್ ವ್ಯಕ್ತಿಯಾಗಿದ್ದರು ಎಂದು ಗಂಗೂಲಿ ಹೇಳಿದರು.

Last Updated : Dec 28, 2020, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.