ETV Bharat / bharat

ವಿಮಾನದಲ್ಲಿ ಬಾಂಬ್..! ಹುಸಿ ಕರೆಗೆ ಬೆಚ್ಚಿಬಿದ್ದ ಶ್ರೀನಗರ, ದೆಹಲಿಗೆ ಹೊರಟಿದ್ದ ಗೋಫಸ್ಟ್​ ಏರ್​ಲೈನ್​ ವಿಳಂಬ - ಸುಳ್ಳು ಬಾಂಬ್​ ಕರೆ

ಸೋಮವಾರ ಸಂಜೆ 7 ಗಂಟೆಗೆ ಶ್ರೀನಗರದಿಂದ ದೆಹಲಿಗೆ ಹೊರಡಲು ಸಿದ್ಧವಾಗಿದ್ದ ಗೋಪಸ್ಟ್​ ಏರ್​ಲೈನ್ಸ್​​ನಲ್ಲಿ ಬಾಂಬ್​ ಇಂದೆ ಎಂದು ಹುಸಿ ಕರೆಯೊಂದು ಬಂದಿತ್ತು. ತಕ್ಷಣ ಎಚ್ಚೆತ್ತುಕೊಂಡು ಭದ್ರತಾ ಪಡೆ ಸಿಬ್ಬಂದಿ ಶೋಧಕಾರ್ಯ ನಡೆಸಿದಾಗ ಅದೊಂದು ಹುಸಿ ಕರೆ ಎಂದು ತಿಳಿದುಬಂದಿದೆ.

Hoax bomb call delays GoFirst flight from Srinagar to Delhi
ಶ್ರೀನಗರದಿಂದ ದೆಹಲಿಗೆ ಹೊರಡಲಿದ್ದ ಗೋಫಸ್ಟ್​ ಏರ್​ಲೈನ್​ ವಿಳಂಬ
author img

By

Published : Apr 19, 2022, 7:19 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದೆಹಲಿಗೆ ತೆರಳುವ ಗೋಫಸ್ಟ್ ಏರ್‌ಲೈನ್ಸ್​ನಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ವ್ಯಕ್ತಿಯೋರ್ವನಿಂದ ಬಂದ ಕರೆಯಿಂದಾಗಿ ಸೋಮವಾರ ಸಂಜೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ (ಎಸ್‌ಎಕ್ಸ್‌ಆರ್) ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ನವದೆಹಲಿ ಮೂಲದ ಸಂಖ್ಯೆಯೊಂದರಿಂದ ಸಂಜೆ 7 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ವಿಮಾನದೊಳಗೆ ಬಾಂಬ್ ಇಡಲಾಗಿದೆ ಎಂದು ಕರೆಯಲ್ಲಿ ಸುಳ್ಳು ಹೇಳಲಾಗಿತ್ತು. ನಾವು ಅದನ್ನು ಅನುಸರಿಸಿ ವಿಮಾನಯಾನ ಸಂಸ್ಥೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಿದ್ದೆವು ಎಂದು ಪೊಲೀಸ್​ ಮಹಾನಿರೀಕ್ಷಕ ವಿಜಯ್​ ಕುಮಾರ್​ ತಿಳಿಸಿದ್ದಾರೆ.

ಹುಸಿ ಕರೆಯನ್ನು ನಂಬಿ ವಿಮಾನ ಟೇಕ್​ ಆಫ್​ ಆಗುವುದನ್ನೂ ತಡೆಹಿಡಿದು ಬಾಂಬ್​ಗಾಗಿ ಸಂಪೂರ್ಣ ಹುಡುಕಾಟ ನಡೆಸಿದ್ದೇವೆ. ಆದರೆ ಆ ಥರ ಏನೂ ಕಂಡುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಗೋ ಫಸ್ಟ್​ ಏರ್​ಲೈನ್ಸ್​ನ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದು, 'G8 - 149 (A320-271 N) ಸೋಮವಾರ ಸಂಜೆ 7 ಗಂಟೆಗೆ ಶ್ರೀನಗರದಿಂದ ದೆಹಲಿಗೆ ಹೊರಡಲು ಸಿದ್ಧವಾಗಿತ್ತು. ಆದರೆ ಹುಸಿ ಕರೆಯಿಂದಾಗಿ ಅದು ವಿಳಂಬವಾಗಿದೆ. ಕರೆ ಬಂದ ಕೂಡಲೇ ಭದ್ರತಾ ಪಡೆಗೆ ಎಚ್ಚರಿಕೆ ನೀಡಿಲಾಗಿದೆ. ಅವರು ಎರಡು ಗಂಟೆಗಳ ಕಾಲ ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆಸಿದ್ದಾರೆ ಎಂದರು.

ಆದರೆ ಕರೆಯಲ್ಲಿ ಹೇಳಿದಂತೆ ಏನೂ ಪತ್ತೆಯಾಗಿಲ್ಲ. ಹಾಗಾಗಿ ಎರಡು ಗಂಟೆಗಳ ಹುಡುಕಾದ ನಂತರ ವಿಮಾನ ಟೇಕ್​ ಆಫ್​ ಆಗಲು ಅನುಮತಿ ನೀಡಲಾಯಿತು. ಅಂತಿಮವಾಗಿ, ವಿಮಾನವು ರಾತ್ರಿ 9.35ಕ್ಕೆ ಹೊರಟು ರಾತ್ರಿ 10.42ಕ್ಕೆ ತನ್ನ ಗಮ್ಯಸ್ಥಾನವನ್ನು (ದೆಹಲಿ) ತಲುಪಿತು. ನಮ್ಮ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ನಾವು ಉದ್ವಿಗ್ನರಾಗಿದ್ದೆವು. ದುರದೃಷ್ಟವಶಾತ್, ವಿಮಾನ ವಿಳಂಬದಿಂದಾಗಿ ಪ್ರಯಾಣಿಕರಿಗೆ ಅನಾನುಕೂಲತೆಯಾಗಿದೆ. ಅದಕ್ಕಾಗಿ ನಾವು ವಿಷಾದ ವ್ಯಕ್ತಪಡಿಸುತ್ತೇವೆ' ಎಂದು ಅಧಿಕಾರಿ ತಿಳಿಸಿದರು.

ಈ ಬೆದರಿಕೆಯ ಹುಸಿ ದೂರವಾಣಿ ಕರೆ ಮಾಡಿದವರನ್ನು ಶೀಘ್ರದಲ್ಲೇ ಗುರುತಿಸಲಾಗುವುದು ಮತ್ತು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ರನ್ ವೇನಲ್ಲಿ ಕಾಣಿಸಿಕೊಂಡ ನಾಯಿಗಳು : ಪಲ್ಟಿಯಾದ ಲಘು ವಿಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.