ETV Bharat / bharat

ನರಕ ಚತುರ್ದಶಿ ಆಚರಣೆ ಹಿಂದಿನ ಕಥೆ ಏನು.. ‘ಯಮ ಪ್ರದೀಪ’ದ ಬಗ್ಗೆ ನಿಮಗೆ ಎಷ್ಟು ಗೊತ್ತು?

author img

By

Published : Oct 22, 2022, 11:14 AM IST

ಧನತ್ರಯೋದಶಿ ಎಂದೂ ಕರೆಯಲ್ಪಡುವ ಧನ್ತೇರಸ್ ದಿನವನ್ನು ಐದು ದಿನಗಳು ಆಚರಿಸುವ ದೀಪಾವಳಿ ಹಬ್ಬದ ಮೊದಲ ದಿನವಾಗಿದೆ. ಧನ್ತೇರಸ್​ ಬಳಿಕ ಎರಡನೇ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.

Narak Chaturdashi History And Significance  Diwali 2022  Chhoti Diwali 2022  Narak Chaturdashi 2022  History and significance of Narak Chaturdashi  ನರಕ ಚತುರ್ದಶಿ ಆಚರಣೆಯ ಹಿಂದಿನ ಕಥೆ ಏನು  ಧನತ್ರಯೋದಶಿ ಎಂದೂ ಕರೆಯಲ್ಪಡುವ ಧನ್ತೇರಸ್ ದಿನ  ದೀಪಾವಳಿ ಹಬ್ಬದ ಮೊದಲ ದಿನ  ಧನ್ತೇರಸ್​ ಬಳಿಕ ಎರಡನೇ ದಿನವನ್ನು ನರಕ ಚತುರ್ದಶಿ  ಐದು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬ  ಎರಡನೇ ದಿನವನ್ನು ನರಕ ಚತುರ್ದಶಿ  ಈ ಹಬ್ಬವನ್ನು ಛೋಟಿ ದೀಪಾವಳಿ  ರಾಕ್ಷಸ ರಾಜ ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯ
ನರಕ ಚತುರ್ದಶಿ ಆಚರಣೆಯ ಹಿಂದಿನ ಕಥೆ

ಐದು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಎರಡನೇ ದಿನವನ್ನು ನರಕ ಚತುರ್ದಶಿ ಆಚರಿಸಲಾಗುತ್ತದೆ. ಪ್ರೀತಿಯಿಂದ ಈ ಹಬ್ಬವನ್ನು ಛೋಟಿ ದೀಪಾವಳಿ ಎಂದು ಕರೆಯಲಾಗುತ್ತಿದೆ. ನರಕ ಚತುರ್ದಶಿಯನ್ನು ಧನ್ತೇರಸ್ ನಂತರದ ದಿನ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅಕ್ಟೋಬರ್ 23 ರಂದು ಸಂಜೆ 6:40 ಕ್ಕೆ ಪ್ರಾರಂಭವಾಗಿ, ಅಕ್ಟೋಬರ್ 24 ರಂದು ಸಂಜೆ 5:28 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ನರಕ ಚತುರ್ದಶಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.

ರಾಕ್ಷಸ ರಾಜ ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು14 ವರ್ಷಗಳ ವನವಾಸದ ನಂತರ ಭಗವಾನ್ ರಾಮನು ಹಿಂದಿರುಗಿದ ಸುದ್ದಿಯೊಂದಿಗೆ ಹನುಮಂತನು ಅಯೋಧ್ಯೆ ತಲುಪಿದನು ಎಂದು ನಂಬಲಾಗಿದೆ. ಈ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಆಚರಣೆಗಳನ್ನು ಬಳಸಿ ಆಚರಿಸಲಾಗುತ್ತದೆ.

ಪುರಾಣಗಳಲ್ಲಿ ಹಬ್ಬದ ಬಗ್ಗೆ ಏನು ಹೇಳಲಾಗಿದೆ; ಪುರಾಣಗಳ ಪ್ರಕಾರ, ಭಗವಾನ್ ಇಂದ್ರನನ್ನು ಸೋಲಿಸಿ ಅದಿತಿ ದೇವಿಯ ಕಿವಿಯೋಲೆಗಳನ್ನು ಕಿತ್ತುಕೊಂಡ ನಂತರ ರಾಕ್ಷಸ ರಾಜ ನರಕಾಸುರನು ಪ್ರಾಗ್ಜ್ಯೋತಿಷಪುರದ ಆಡಳಿತಗಾರನಾದನು. ನರಕಾಸುರನು ದೇವತೆಗಳ ಮತ್ತು ಋಷಿಗಳ 16000 ಹೆಣ್ಣು ಮಕ್ಕಳನ್ನು ಅಪಹರಿಸಿ ಸೆರೆಮನೆಗೆ ಹಾಕಿದನು.

ನರಕ ಚತುರ್ದಶಿಯ ಮುನ್ನಾದಿನದಂದು ಶ್ರೀಕೃಷ್ಣನು ನರಕಾಸುರನನ್ನು ಸತ್ಯಾಭಾಮ ಸಹಾಯದಿಂದ ಕೊಂದನು. 16000 ಒತ್ತೆಯಾಳುಗಳನ್ನು ಸೆರೆಯಿಂದ ಮುಕ್ತಗೊಳಿಸಿದನು ಮತ್ತು ಅದಿತಿ ದೇವಿಯ ಅಮೂಲ್ಯವಾದ ಕಿವಿಯೋಲೆಗಳನ್ನು ಸಹ ಮರಳಿ ಪಡೆದನು. ಈ ದಿನವನ್ನು ದುಷ್ಟನನ್ನು ಸಂಹವರಿಸಿ ವಿಜಯವನ್ನು ಪಡೆದ ದಿನವಾದ್ದರಿಂದ ವಿಜಯದ ಸಂಕೇತವಾಗಿ ಹಬ್ಬವನ್ನು ಆಚರಿಸುತ್ತಾರೆ.

ದಕ್ಷಿಣ ಭಾರದತ ಬಹುತೇಕ ಪ್ರದೇಶದಲ್ಲಿ ದೀಪಾವಳಿಯ ಹಬ್ಬವನ್ನು ರಾತ್ರಿಯ ಸಮಯದಲ್ಲಿ ಆಚರಿಸುತ್ತಾರೆ. ಪೂರ್ವ ಯೋಜಿತವಾಗಿ ಜನರು ಹಬ್ಬವನ್ನು ಸ್ವಾಗತಿಸಲು ಎಣ್ಣೆ ಸ್ನಾನ ಮಾಡುವುದರ ಮೂಲಕ ಪವಿತ್ರತೆಯನ್ನು ಪಡೆದುಕೊಳ್ಳುತ್ತಾರೆ. ನಂತರ ವಿಷ್ಣು ಅಥವಾ ವಿಠ್ಠಲನ ದೇವಸ್ಥಾನಕ್ಕೆ ಹೋಗುವಾಗ ಹಣೆಯ ಮೇಲೆ ಎಣ್ಣೆ ಮತ್ತು ಕುಂಕುಮ ಮಿಶ್ರಣದ ನಾಮವನ್ನು ಅನ್ವಯಿಸಿಕೊಳ್ಳುತ್ತಾರೆ.

ಯಮ ದೀಪ ಎಂದರೇನು?: ಮುಸ್ಸಂಜೆಯ ಸಮಯದಲ್ಲಿ ಪೂರ್ವಜರ ಆತ್ಮದ ಶಾಂತಿಗಾಗಿ ಮತ್ತು ಪ್ರಯಾಣದ ಹಾದಿಯನ್ನು ಬೆಳಗಿಸಲು ಏಳು ದೀಪಗಳನ್ನು ಅರ್ಪಿಸಲಾಗುತ್ತದೆ. ಈ ಆಚರಣೆಯನ್ನು ‘ಯಮ ಪ್ರದೀಪ’ ಎನ್ನುತ್ತಾರೆ. ‘ಯಮ’ ಎಂಬ ಹಿಟ್ಟಿನಿಂದ ಮಾಡಿದ ದೊಡ್ಡ ದೀಪವನ್ನು ಈ ದಿನ ಹಚ್ಚುವುದು ವಾಡಿಕೆ.

ಒಮ್ಮೆ ದೀಪವನ್ನು ಹಿಡಿದುಕೊಂಡು ಮನೆಯ ಸುತ್ತಲೂ ನಡೆದು ಮನೆಯ ಹೊರಗೆ ಇರಿಸಿ. ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ಮತ್ತು ಸರಿಯಾದ ಆಚರಣೆಗಳ ಪ್ರಕಾರ ಉಪವಾಸ ಮಾಡಿ. ಸಂಜೆ 'ಯಮ' ದೀಪವನ್ನು ಹಚ್ಚಿ. ಈ ದಿನದ ಪೂಜೆಯನ್ನು ಕುಟುಂಬಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದೀಪವನ್ನು ಹಚ್ಚುವುದರಿಂದ ಸಾವನ್ನಪ್ಪಿದ ಮೇಲೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.

ಓದಿ: ಕುಟುಂಬದ ಸಂಪತ್ತು, ಆರೋಗ್ಯ ವೃದ್ದಿಗೆ ದೀಪಾವಳಿ ಆಚರಣೆ ಹೀಗಿರಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.