ETV Bharat / bharat

ಬ್ರಿಟಿಷರ ವಿರುದ್ಧ ಕಹಳೆ ಊದಿದ್ದ ವೀರ ಸೇನಾನಿಗಳು.. ಸ್ವಾತಂತ್ರ್ಯಕ್ಕಾಗಿ ಕಿಚ್ಚು ಹಚ್ಚಿದ ಕ್ರಾಂತಿಕಿಡಿಗಳು - ಹರಿಯಾಣ

ಹಿಸಾರ್​ನಲ್ಲಿದ್ದ ಎಲ್ಲಾ ಬ್ರಿಟಿಷರನ್ನು ಕ್ರಾಂತಿಕಾರಿಗಳು ಹೊಡೆದುರುಳಿಸಿದರು. ಬ್ರಿಟಿಷ್ ಪಡೆಗಳು ಕ್ರಾಂತಿಕಾರಿಗಳ ಸದ್ದಡಗಿಸಲು ಯುದ್ಧಕ್ಕೆ ಸಿದ್ದರಾಗಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ನೂರಾರು ಕ್ರಾಂತಿಕಾರಿಗಳು ಹುತಾತ್ಮರಾದರು. ಅವರೆಲ್ಲ ಸ್ವಾತಂತ್ರ್ಯದ ಕನಸಿಗೆ ಕಿಚ್ಚು ಹಚ್ಚಿದರು.

Hisar revolutionaries who fought with the British for independence
ಬ್ರಿಟಿಷರ ವಿರುದ್ಧ ಕಹಳೆ ಊದಿದ್ದ ವೀರ ಸೇನಾನಿಗಳು
author img

By

Published : Oct 17, 2021, 6:15 AM IST

ಹಿಸಾರ್​(ಹರಿಯಾಣ)​: ಸ್ವಾತಂತ್ರ್ಯದ ನಿಜ ಮೌಲ್ಯ ತಿಳಿಯಬೇಕಿದ್ರೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಏನೆಲ್ಲಾ ಅನುಭವಿಸಿದ್ದರು ಎಂಬುದನ್ನು ತಿಳಿಯುವುದು ಮುಖ್ಯ. ತಾಯ್ನಾಡನ್ನು ದಾಸ್ಯದಿಂದ ಮುಕ್ತಗೊಳಿಸಲು ಕೊನೆಯ ಉಸಿರಿನವರೆಗೂ ನಡೆಸಿದ ಹೋರಾಟಗಳು, ತ್ಯಾಗ, ಬಲಿದಾನ ಆದರ್ಶವಾಗಿದೆ.

1947ರಲ್ಲಿ ನಾವು ಸ್ವಾತಂತ್ರ್ಯ ಪಡೆದಿರಬಹುದು. ಆದರೆ, ನೂರಾರು ವರ್ಷದ ಹಿಂದೆಯೇ ಬ್ರಿಟಿಷರ ವಿರುದ್ಧ ಕಿಚ್ಚು ಹೊತ್ತಿಕೊಂಡಿತ್ತು. ಅದರಲ್ಲಿ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೂಲವಾಗಿದೆ. ಈ ಇತಿಹಾಸದಲ್ಲಿ ಹರಿಯಾಣದ ಹಿಸಾರ್​ ಹೋರಾಟಗಾರದ್ದೇ ಒಂದು ಅಧ್ಯಾಯ.

ಮೇ 29, 1857ರಂದು ಹೋರಾಟಗಾರರು ಹಿಸಾರ್​ ಅನ್ನು ಸ್ವತಂತ್ರ ಭೂಮಿ ಎಂದು ಘೋಷಿಸಿದರು. ಆದರೆ, ಈ ಹೋರಾಟ ಅಲ್ಲಿಗೇ ಅಂತ್ಯವಾಗಲಿಲ್ಲ. ಹಿಸಾರ್​​ನಲ್ಲಿದ್ದ ಎಲ್ಲ ಬ್ರಿಟಿಷರನ್ನು ಕ್ರಾಂತಿಕಾರಿಗಳು ಹೊಡೆದುರುಳಿಸಿದರು. ಆದರೆ, ಕೆಲವರನ್ನ ಹಿಡಿದು ಜೈಲಿಗಟ್ಟಿದರು. ಈ ವೇಳೆ, ತಪ್ಪಿಸಿಕೊಂಡ ಕೆಲವರು ಈಸ್ಟ್ ಇಂಡಿಯಾ ಕಂಪನಿಗೆ ಈ ಸುದ್ದಿ ಮುಟ್ಟಿಸಿದ್ದರು.

ಸ್ವಾತಂತ್ರ್ಯಕ್ಕಾಗಿ ಕಿಚ್ಚು ಹಚ್ಚಿದ ಹಿಸಾರ್​​ ಕ್ರಾಂತಿಕಿಡಿಗಳು

ಇಷ್ಟೆಲ್ಲ ನಡೆದ ಬಳಿಕ ಬ್ರಿಟಿಷ್ ಪಡೆಗಳು ಕ್ರಾಂತಿಕಾರಿಗಳ ಸದ್ದಡಗಿಸಲು ಸಂಚು ರೂಪಿಸಿದ್ದರು. ಇದಕ್ಕಾಗಿ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್​​​ನ ಬಳಿ ಸಹಾಯ ಕೇಳಿದಲ್ಲದೇ, ಆತನನ್ನೂ ಸೇರಿಕೊಂಡರು. ಕ್ರಾಂತಿಕಾರಿಗಳು ಕತ್ತಿ, ಖಡ್ಗದಂತಹ ಆಯುಧ ಹೊಂದಿದ್ದರು. ಆದರೆ, ಬ್ರಿಟಿಷರು ಬಂದೂಕು ಮತ್ತು ಫಿರಂಗಿಗಳನ್ನ ಹೊಂದಿದ್ದರು. ಬ್ರಿಟಿಷರು ಕೋಟೆಯೊಳಗಿದ್ದೆರ ಕ್ರಾಂತಿಕಾರಿಗಳು ಹೊರಗಿನಿಂದ ಯುದ್ಧ ಮಾಡಬೇಕಾಗಿತ್ತು.

ಹೀಗಾಗಿ, ಹೋರಾಟದಲ್ಲಿ ಕ್ರಾಂತಿಕಾರಿಗಳು ಹುತಾತ್ಮರಾಗಬೇಕಾಯಿತು. ಖಡ್ಗಗಳು ಬ್ರಿಟಿಷರ ಫಿರಂಗಿಗಳ ಮುಂದೆ ಮಂಕಾದವು. ಹೋರಾಟದಲ್ಲಿ 438 ಕ್ರಾಂತಿಕಾರಿಗಳು ಸ್ವತಂತ್ರಕ್ಕಾಗಿ ಮಡಿದರು. ಭೀಕರ ಹೋರಾಟದಲ್ಲಿ 235 ಕ್ರಾಂತಿಕಾರಿಗಳ ದೇಹ ಪತ್ತೆಯೇ ಆಗಲಿಲ್ಲ. ಇದಕ್ಕೂ ಭೀಕರ ಎಂದರೆ ಹೋರಾಟದ ವೇಳೆ ಬಂದಿಸಲ್ಪಟ್ಟಿದ್ದ 123 ಕ್ರಾಂತಿಕಾರಿಗಳನ್ನ ರೋಡ್​ ರೋಲರ್ ಹತ್ತಿಸಿ ಹತ್ಯೆ ಮಾಡಲಾಗಿತ್ತು.

ಆದ್ರೆ, ಅಲ್ಪಾವಧಿ ಎನಿಸಿದರೂ ಹಿಸಾರ್ ಮೇ 30, 1857ರಿಂದ ಆ.19, 1857 ಅಂದರೆ ಸುಮಾರು 80 ದಿನಗಳ ಕಾಲ ಸ್ವತಂತ್ರವಾಗಿ ಉಳಿದಿತ್ತು. ದಾಸ್ಯದ ಬಿಡುಗಡೆಗಾಗಿ ಅವರ ಕೊಡುಗೆ ಯಾವಾಗಲು ನೆನಪಿನಲ್ಲು ಉಳಿಯುತ್ತದೆ. ಜೊತೆಗೆ 1857 ಪ್ರಥಮ ಸ್ವಾತಂತ್ರ ಸಂಗ್ರಾಮ ಇತಿಹಾಸದಲ್ಲಿ ಹೊಸ ಚರಿತ್ರೆಯಾಗಿ ಉಳಿದುಕೊಂಡಿತು. ಅಲ್ಲಿಂದಲೇ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯ ಬೀಜ ಚಿಗುರೊಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.