ETV Bharat / bharat

ಶಾಲಾ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಸರ್ಕಾರಕ್ಕಿದೆ: ಸುಪ್ರೀಂಕೋರ್ಟ್​

ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿದ್ದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ 6 ನೇ ದಿನದ ವಿಚಾರಣೆ ಮುಗಿದಿದ್ದು, ಸೆಪ್ಟೆಂಬರ್​ 19 ಕ್ಕೆ ವಿಚಾರಣೆ ಮುಂದೂಡಿದೆ.

hijab-case-hearing-from-supreme-court
ಸುಪ್ರೀಂಕೋರ್ಟ್​ನಲ್ಲಿ 6 ನೇ ದಿನದ ವಿಚಾರಣೆ
author img

By

Published : Sep 15, 2022, 5:06 PM IST

Updated : Sep 15, 2022, 8:42 PM IST

ನವದೆಹಲಿ: ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಸರ್ಕಾರಕ್ಕಿದೆ ಅದನ್ನು ನಿರಾಕರಿಸಲಾಗುವುದಿಲ್ಲ. ಸರ್ಕಾರಗಳು ಶಾಲಾ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಹೊಂದಿವೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ.

ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್​ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ 6ನೇ ದಿನದ ವಿಚಾರಣೆ ವೇಳೆ, ನ್ಯಾಯಮೂರ್ತಿ ಹೇಮಂತ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷವಾಗಿ ತಾರತಮ್ಯ ಮಾಡಲಾಗುತ್ತಿದೆ ಎಂದು ಫಿರ್ಯಾದುದಾರರ ಪರವಾಗಿ ಹಿರಿಯ ವಕೀಲರಾದ ಹುಜೇಫಾ ಅಹ್ಮದಿ, ರಾಜೀವ್ ಧವನ್, ಆದಿತ್ಯ ಸೋಂಧಿ, ರಿಷದ್​ ಚೌಧರಿ, ಪ್ರಶಾಂತ್​ ಭೂಷಣ್​, ಕಪಿಲ್​ ಸಿಬಲ್​ ಸೇರಿದಂತೆ ಮತ್ತಿತರ ವಕೀಲರು ವಾದ ಮಂಡಿಸಿದರು.

ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಹೈಕೋರ್ಟ್‌ನ ತೀರ್ಪು ಇಸ್ಲಾಂ ಧರ್ಮವನ್ನು ಅನುಸರಿಸುವವರಿಗೆ ನೋವುಂಟು ಮಾಡುತ್ತದೆ. ಇದು ತೀವ್ರ ಆಕ್ರಮಣಕಾರಿಯಾಗಿಯೂ ಇದೆ ಎಂದು ವಕೀಲರು ವಾದಿಸಿದರು.

ಈ ವೇಳೆ ಪೀಠ, ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರವನ್ನು ನಿಗದಿ ಮಾಡುವ ಅಧಿಕಾರ ಆಯಾ ಸರ್ಕಾರಗಳಿಗಿದೆ. ಅದನ್ನು ಯಾರೂ ಅಲ್ಲಗಳೆಯಲು ಬರುವುದಿಲ್ಲ ಎಂದು ಹೇಳಿತು. ಬಳಿಕ ವಾದ- ಪ್ರತಿವಾದದ ನಂತರ ಸೆಪ್ಟೆಂಬರ್ 19 ರಂದು ವಿಚಾರಣೆಯನ್ನು ಮುಂದೂಡಿತು.

ಓದಿ: ಬಹುಕೋಟಿ ವಂಚನೆ ಕೇಸ್: ಜಾಕ್ವೆಲಿನ್​ ಬಳಿಕ ವಿಚಾರಣೆಗೆ ಹಾಜರಾದ ನೋರಾ ಫತೇಹಿ

Last Updated : Sep 15, 2022, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.