ರಾಯ್ಪುರ್(ಛತ್ತೀಸ್ಗಢ): ಹೈ ಪ್ರೊಫೈಲ್ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ರಾಯ್ಪುರ್ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 11 ಯುವತಿಯರು ಹಾಗೂ ಓರ್ವ ಕಿಂಗ್ಪಿನ್ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೋಟೆಲ್ನಲ್ಲಿ ಈ ಅಕ್ರಮ ವ್ಯಾಪಾರ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ.
ರಾಯ್ಪುರ್ದ ಪ್ರಮುಖ ಫೋರ್ಸ್ಟಾರ್ ಹೋಟೆಲ್ನಲ್ಲಿ ಹೈ-ಪ್ರೊಫೈಲ್ ಸೆಕ್ಸ್ ರಾಕೆಟ್ ದಂಧೆ ನಡೆಸಲಾಗ್ತಿತ್ತು. ಇಂದು ಬೆಳಗ್ಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಬೆಂಗಳೂರಿನ ಓರ್ವ ಯುವತಿ ಸೇರಿದಂತೆ 11 ಹುಡುಗಿಯರು ಹಾಗೂ ಓರ್ವ ಕಿಂಗ್ ಪಿನ್ ಬಲೆಗೆ ಬಿದ್ದಿದ್ದಾರೆ.
ಬಂಧಿತ ಯುವತಿಯರು ಮೂಲತಃ ನೇಪಾಳ, ಮುಂಬೈ, ದೆಹಲಿ, ಗುಜರಾತ್ ಮತ್ತು ಬೆಂಗಳೂರು ಮೂಲದವರು ಎಂದು ವರದಿಯಾಗಿದೆ. ಇವರೆಲ್ಲರೂ ಸೆಕ್ಸ್ ರಾಕೆಟ್ ದಂಧೆಗೆ ಇಳಿದಿದ್ದರು. ಬಂಧಿತ ಹುಡುಗಿಯರ ಮೊಬೈಲ್ ಫೋನ್ಗಳಲ್ಲಿನ ಚಾಟ್ ಸಂದೇಶ ಚೆಕ್ ಮಾಡಿರುವ ಪೊಲೀಸರಿಗೆ ಶಾಕ್ ಆಗಿದ್ದು, ಇದರಲ್ಲಿ ಕೆಲ ರಾಜಕೀಯ ನಾಯಕರ ಹೆಸರು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅವರ ಹೆಸರು ಬಹಿರಂಗ ಪಡಿಸಿಲ್ಲ.
ರಾಜಕೀಯ ನಾಯಕರ ನಂಟು: ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿರುವ ಯುವತಿಯರು ಅನೇಕ ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಬಳಕೆ ಮಾಡ್ತಿದ್ದ ಮೊಬೈಲ್ ಫೋನ್ಗಳಿಂದ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. ಆದರೆ, ಯಾವೆಲ್ಲ ರಾಜಕೀಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಹೊರಹಾಕಿಲ್ಲ.
ಇದನ್ನೂ ಓದಿರಿ: ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಬಯಲಿಗೆಳೆದ ಸಿಸಿಬಿ ತಂಡ: ಇಬ್ಬರು ನಟಿಯರು ಸೇರಿ ಐವರ ಬಂಧನ
ಹೋಟೆಲ್ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿದ್ದ ಬಗ್ಗೆ ರಾಯ್ಪುರ್ ಪೊಲೀಸ್ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕಕ್ಕೆ ದೂರು ನೀಡಲಾಗಿತ್ತು. ಇದಕ್ಕೋಸ್ಕರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಎಸ್ಎಸ್ಪಿ ಅಭಿಷೇಕ್ ಮಹೇಶ್ವರಿ ಅವರ ಸೂಚನೆಯಂತೆ ಹೋಟೆಲ್ಗೆ ವಿಶೇಷ ತಂಡ ಲಗ್ಗೆಹಾಕಿತ್ತು. ಈ ವೇಳೆ, ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧಿಗಳ ಬಂಧನ ಮಾಡಿದ್ದಾರೆ.