ETV Bharat / bharat

ಪ್ರತ್ಯೇಕ ರಾಜ್ಯ ರಚನೆ ಕೂಗು: ನಾಳೆ ನಾಗಾಲ್ಯಾಂಡ್‌ಗೆ ಗೃಹ ಸಚಿವಾಲಯದ ತಂಡ ಭೇಟಿ

author img

By

Published : Dec 15, 2022, 6:14 PM IST

ನಾಗಾಲ್ಯಾಂಡ್ ರಾಜ್ಯವನ್ನು ವಿಭಜಿಸಿ ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಯ ವಾಸ್ತವತೆಯನ್ನು ಗೃಹ ಸಚಿವಾಲಯದ ತಂಡ ಅಧ್ಯಯನ ಮಾಡಲಿದೆ.

high-level-mha-team-to-visit-nagaland-from-tomorrow
ನಾಳೆಯಿಂದ ನಾಗಾಲ್ಯಾಂಡ್​ಗೆ ಉನ್ನತ ಮಟ್ಟದ ಎಂಎಚ್​​ಎ ತಂಡ ಭೇಟಿ

ನಾಗಾಲ್ಯಾಂಡ್‌: ಈಸ್ಟರ್ನ್​ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ಇಎನ್‌ಪಿಒ) ಬೇಡಿಕೆಯಂತೆ ಫ್ರಾಂಟಿಯರ್ ನಾಗಾಲ್ಯಾಂಡ್ ರಾಜ್ಯ ರಚನೆಯ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯದ ಮೂವರು ಸದಸ್ಯರ ತಂಡ ಶುಕ್ರವಾರ ನಾಗಾಲ್ಯಾಂಡ್‌ಗೆ ಭೇಟಿ ನೀಡಲಿದೆ. ಈ ತಂಡವು ನಾಳೆ ಮಧ್ಯಾಹ್ನ ತುಯೆನ್ಸಾಂಗ್‌ಗೆ ಆಗಮಿಸಲಿದೆ.

ಪ್ರಸ್ತುತ ನಾಗಾಲ್ಯಾಂಡ್ ರಾಜ್ಯವನ್ನು ವಿಭಜಿಸಿ ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಯ ವಾಸ್ತವತೆಯನ್ನು ಅಧ್ಯಯನ ಮಾಡಲಿದೆ. ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾಜಿ ವಿಶೇಷ ನಿರ್ದೇಶಕ ಎ ಕೆ ಮಿಶ್ರಾ, ಐಬಿಯ ಜಂಟಿ ನಿರ್ದೇಶಕ ಡಾ.ಮಂದೀಪ್ ಸಿಂಗ್ ತುಲಿ ಮತ್ತು ಕೇಂದ್ರ ಗೃಹ ಸಚಿವಾಲಯದ ಈಶಾನ್ಯ ವಿಭಾಗದ ನಿರ್ದೇಶಕ ಎ ಕೆ ಧ್ಯಾನಿ ಇದ್ದಾರೆ.

ಮೂರು ದಿನಗಳ ನಾಗಾಲ್ಯಾಂಡ್ ಭೇಟಿಯಲ್ಲಿ ತಂಡವು ಇಎನ್​ಪಿಒ ನಾಯಕರನ್ನು ಮತ್ತು ಆ ಪ್ರದೇಶದ ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ. ಬಳಿಕ ವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

ಕೇಂದ್ರ ಸರ್ಕಾರದ ಮುಂದಿಟ್ಟ ಬೇಡಿಕೆ ಈಡೇರಿಸುವವರೆಗೆ ಮುಂದಿನ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸದಂತೆ ಇಎನ್​ಪಿಒ ಈಗಾಗಲೇ ಜನರಿಗೆ ಕರೆ ನೀಡಿದೆ. ಅಲ್ಲದೇ ರಾಜ್ಯ ವಿಭಜನೆಗಾಗಿ ಪ್ರಸಿದ್ಧ ಹಾರ್ನ್‌ಬಿಲ್ ಉತ್ಸವವನ್ನೂ ಕೂಡ ಪೂರ್ವ ನಾಗಾಲ್ಯಾಂಡ್‌ನ ಜನರು ಬಹಿಷ್ಕರಿಸಿದ್ದರು.

ಇದನ್ನೂ ಓದಿ: ನಾಗಾಲ್ಯಾಂಡ್​ ಪ್ರತ್ಯೇಕ ರಾಷ್ಟ್ರಕ್ಕೆ ಎನ್‌ಎಸ್‌ಸಿಎನ್ ಬೇಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.