ಕೋಲ್ಕತ್ತಾ: ಸಚಿವ ಪರೇಶ್ ಅಧಿಕಾರಿ ಅವರ ಪುತ್ರಿ ಅಂಕಿತಾ ಅಧಿಕಾರಿಯನ್ನು ಶಾಲೆಗೆ ಪ್ರವೇಶಿಸದಂತೆ ನಿಷೇಧಿಸಿ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ಮುಂದೆ ಆಕೆಯನ್ನು ಶಿಕ್ಷಕಿ ಎಂದು ಪರಿಗಣಿಸುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಪ್ರಕರಣದಲ್ಲಿ ಮುಂದಿನ ಆದೇಶದವರೆಗೆ ಅವರ ವೇತನವನ್ನು ತಕ್ಷಣವೇ ಅಮಾನತುಗೊಳಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಆಕೆ ತನ್ನ ಉದ್ಯೋಗದಿಂದ ಇದುವರೆಗೆ ಪಡೆದ ಸಂಬಳವನ್ನು ಹಿಂದಿರುಗಿಸಬೇಕು ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಇದೇ ವೇಳೆ ತಿಳಿಸಿದ್ದಾರೆ. ಜೂನ್ 30 ಮತ್ತು ಜುಲೈ 30ರಂದು ಎರಡು ಕಂತುಗಳಲ್ಲಿ ಹಣವನ್ನು ಮರುಪಾವತಿಸಬೇಕಾಗುತ್ತದೆ.
ಒಟ್ಟು 41 ತಿಂಗಳ ವೇತನವನ್ನು ಅಂಕಿತಾ ಅಧಿಕಾರಿ ಅವರು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದರೂ ಸಚಿವರ ಮಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅಭ್ಯರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಸ್ವತಃ ಮಾಜಿ ಸಿಎಂ ಬೇಡವೆಂದ್ರೂ ಸಿದ್ದರಾಮಯ್ಯ ಶೂ ಹಾಕಿದ ಕಾರ್ಯಕರ್ತ..