ETV Bharat / bharat

ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಟಾಲಿವುಡ್​ ನಟನಿಗೆ ಪಾಸಿಟಿವ್! - ಇಂದಿನ ಸಿನಿಮಾ ನಟರ ಟ್ವೀಟ್​ಗಳು

ಕೊರೊನಾದಿಂದ ಜಾಗೃತರಾಗಿ ಎಂದು ವಿಡಿಯೋ ಮೂಲಕ ತಿಳಿವಳಿಕೆ ನೀಡಿದ್ದ ಟಾಲಿವುಡ್​ನ ಜೂ. ಟೈಗರ್ ಎನ್​ಟಿಆರ್​ಗೂ ಸೋಂಕು ತಾಗಿದೆ. ಟ್ವೀಟ್​ ಮಾಡಿ ವೈದ್ಯರು ನೀಡಿದ ಪ್ರೋಟೋಕಾಲ್‌ಗಳನ್ನು ನಾವು ಅನುಸರಿಸಿತ್ತಿದ್ದೇವೆ, ನೀವು ಅನುಸರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

NTR test covid positive
ಜೂ. ಟೈಗರ್ (ಸಂಗ್ರಹ ಚಿತ್ರ)
author img

By

Published : May 10, 2021, 4:37 PM IST

ಹೈದರಾಬಾದ್​: ಟಾಲಿವುಡ್​ ನಟ ಜೂ. ಎನ್​ಟಿಆರ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದ್ದು, ಈ ಬಗ್ಗೆ ಸ್ವತಃ ಟ್ವೀಟ್​ ಮಾಡಿ ಖಚಿತಪಡಿಸಿದ್ದಾರೆ.

ಕಳೆದ ಎರಡು ದಿನದ ಹಿಂದೆ ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'​(RRR) ಚಿತ್ರತಂಡದ ಮೂಲಕ ಕೋವಿಡ್ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದರು. ಈಗ ಈ ಡೆಡ್ಲಿ ವೈರಸ್​ ಅವರಿಗೂ ತಾಕಿದ್ದು ಅಭಿಮಾನಿಗಳಲ್ಲಿ ಕೊಂಚ ಆತಂಕ ತರಿಸಿದೆ.

NTR test covid positive
ಜೂ. ಟೈಗರ್ (ಸಂಗ್ರಹ ಚಿತ್ರ)

ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜೂ. ಟೈಗರ್​, ಇಂದು ಬೆಳಗ್ಗೆ ನಾನು ಸಹ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದೆ. ವರದಿಯಲ್ಲಿ ಪಾಸಿಟಿವ್​ ಕಾಣಿಸಿಕೊಂಡಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಆರಾಮಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ನನ್ನ ಕುಟುಂಬದ ಸದಸ್ಯರೊಂದಿಗೆ ಹೋಂ ಕ್ವಾರಂಟೈನ್ ಆಗಿರುವೆ.

  • I’ve tested positive for Covid19. Plz don’t worry,I’m doing absolutely fine. My family & I have isolated ourselves & we’re following all protocols under the supervision of doctors. I request those who’ve come into contact with me over the last few days to pl get tested. Stay safe

    — Jr NTR (@tarak9999) May 10, 2021 " class="align-text-top noRightClick twitterSection" data=" ">

ನನ್ನ ಮನವಿ ಇಷ್ಟೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೂ ಕೂಡ ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಸುರಕ್ಷಿತೆ ಎಲ್ಲರ ಸುರಕ್ಷತೆ. ದಯಮಾಡಿ ಸರ್ಕಾರ ಹಾಗೂ ವೈದ್ಯರು ನೀಡಿದ ಪ್ರೋಟೋಕಾಲ್‌ಗಳನ್ನು ನೀವೂ ಅನುಸರಿಸಿ. ನಾವು ಅನುಸರಿಸಿತ್ತಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.