ಡೆಹ್ರಾಡೂನ್ (ಉತ್ತರಾಖಂಡ) : ಮಂಗಳವಾರ ಸುರಿದ ಭಾರಿ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಹಲವು ಮನೆಗಳು, ಕಟ್ಟಡಗಳಿಗೆ ಒಳಚರಂಡಿ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಾಜ್ಯ ಸರ್ಕಾರ, ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ಸೂಚಿಸಿದೆ. ಎಸ್ಡಿಆರ್ಎಫ್ ತಂಡ ಐಟಿ ಪಾರ್ಕ್ನಲ್ಲಿರುವ ರಾಜ್ಯ ಆರೋಗ್ಯ ಕಟ್ಟಡದಲ್ಲಿ ಸಿಲುಕಿದ್ದ 10-12 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಇದನ್ನೂ ಓದಿ: ಗ್ರೀನ್ಲ್ಯಾಂಡ್ನಲ್ಲಿ ಭಾರಿ ಮಳೆ, ವಿಜ್ಞಾನಿಗಳಲ್ಲಿ ಆತಂಕ: ಭಾರತಕ್ಕೂ ಎಚ್ಚರಿಕೆಯ ಕರೆಗಂಟೆ
ಉತ್ತರಾಖಂಡದಲ್ಲಿ ಆಗಸ್ಟ್ 28ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.