ETV Bharat / bharat

ನಾಗ್ಪುರದಲ್ಲಿ ಮೇಘಸ್ಫೋಟದಂತಹ ಭಾರೀ ಮಳೆ: ರಸ್ತೆ, ಮನೆಗಳು ಜಲಾವೃತ... ಜನಜೀವನ ಅಸ್ತವ್ಯಸ್ತ - ಮೇಘಸ್ಫೋಟದಂತಹ ಭಾರೀ ಮಳೆ

ಜಲಾವೃತಗೊಂಡ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಕ್ಷಣಾ ತಂಡಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಮಾಡುತ್ತಿವೆ.

Heavy rains in Nagpur
ನಾಗ್ಪುರದಲ್ಲಿ ಮೇಘಸ್ಫೋಟದಂತಹ ಭಾರೀ ಮಳೆ
author img

By ETV Bharat Karnataka Team

Published : Sep 23, 2023, 1:15 PM IST

Updated : Sep 23, 2023, 4:08 PM IST

ನಾಗ್ಪುರದಲ್ಲಿ ಮೇಘಸ್ಫೋಟದಂತಹ ಭಾರೀ ಮಳೆ

ನಾಗ್ಪುರ (ಮಹಾರಾಷ್ಟ್ರ): ನಾಗ್ಪುರದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ನಸುಕಿನ ಜಾವದವರೆಗೆ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳು, ಮನೆಗಳು, ಜಲಾವೃತಗೊಂಡು, ನಾಗರಿಕರು ಪರದಾಡುವಂತಾಗಿದೆ. ರಕ್ಷಣಾ ತಂಡಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ. ಕೆಲವು ಭಾಗಗಳಲ್ಲಿ ಸಿಲುಕಿಕೊಂಡಿದ್ದ ಹಿರಿಯ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಮೇಘಸ್ಫೋಟದಂತಹ ಭಾರೀ ಮಳೆಯಿಂದಾಗಿ ನಾಗ್ಪುರಲ್ಲಿ ಇಂದು ಬೆಳಗ್ಗೆ ಹೊತ್ತಿಗೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮಳೆ ನಿಂತಿದ್ದರೂ, ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆ ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡಗಳನ್ನು ನಿಯೋಜಿಸಲಾಗಿದೆ.

ಪ್ರಾದೇಶಿಕ ವೀಕ್ಷಣಾಲಯದ ಮಾಹಿತಿ ಪ್ರಕಾರ, ನಾಗ್ಪುರದಲ್ಲಿ ಶುಕ್ರವಾರ ರಾತ್ರಿ 2 ಗಂಟೆಗೆ ಧಾರಾಕಾರ ಮಳೆ ಆರಂಭವಾಗಿದೆ. ಬೆಳಗಿನ ಜಾವ 5.30 ವರೆಗೆ 106 ಮಿಮೀ ಮಳೆ ದಾಖಲಾಗಿದೆ. ಪರಡ್ಡಿ ಪ್ರದೇಶದ ಗೌರಿ ನಗರಕ್ಕೆ 3 ರಿಂದ 4 ಅಡಿ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ನಾಗ್ಪುರಲ್ಲಿ ಹರಿಯುವ ನದಿಗಳು, ತೊರೆಗಳು ತುಂಬಿ ಹರಿಯುತ್ತಿರುವುದರಿಂದ ಹಲವೆಡೆ ರಸ್ತೆಗಳ ಮೇಲೆ ನೀರು ತುಂಬಿದೆ. ರಕ್ಷಣಾ ತಂಡಗಳು ರಸ್ತೆಯಲ್ಲಿಯೇ ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ. ನಗರದ ಹಜಾರಿ ಪಹಾರ್​ ಪ್ರದೇಶದಲ್ಲಿ ದನದ ಕೊಟ್ಟಿಗೆಯಲ್ಲಿದ್ದ ಕೆಲವು ಪ್ರಾಣಿಗಳೂ ಸಾವನ್ನಪ್ಪಿವೆ. ಅಲ್ಲದೆ ಸೀತಾಬರ್ಡಿ ಪ್ರದೇಶದ ಮೋರಬವನದ ಸಿಟಿಬಸ್​ ನಿಲ್ದಾಣದಲ್ಲಿ 14 ಪ್ರಯಾಣಿಕರು ಸಿಲುಕೊಂಡಿದ್ದರು. ಅವರೆಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಎಡಬಿಡದೆ ಸುರಿದ ಮಳೆಯಿಂದಾಗಿ ಅಂಬಾಜರಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದಾಗಿ ಸುತ್ತಲಿನ ತಗ್ಗು ಪ್ರದೇಶಗಳು, ಕೆರೆಯ ಮುಂಭಾಗ ರಸ್ತೆ ಸಂಫೂರ್ಣ ಜಲಾವೃತಗೊಂಡಿದೆ. ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ನಗರಸಭೆಯ ಸುಮಾರು 40 ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಬಡಾವಣೆಗಳಲ್ಲಿ ನೀರು ತೆಗೆಯುವ ಕಾರ್ಯ ಆರಂಭವಾಗಿದೆ.

ಪರಿಸ್ಥಿತಿಯ ಬಗ್ಗೆ ನಿರಂತರ ಅವಲೋಕಿಸುತ್ತಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​,"ನಾಗ್ಪುರದಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಅಂಬಾಜರಿ ಕೆರೆ ತುಂಬಿ ಹರಿದಿದ್ದು, ಕೆಲ ಪ್ರದೇಶಗಳಿಗೆ ನೀರು ನುಗ್ಗಿದೆ. ಕೇವಲ ನಾಲ್ಕು ಗಂಟೆಗಳಲ್ಲಿ 100 ಮಿಮೀಗೂ ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ನಾಗ್ಪುರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಹಾಗೂ ಪೊಲೀಸ್​ ಆಯುಕ್ತರು ಸ್ಥಳಕ್ಕೆ ಆಗಮಿಸಿದ್ದು, ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಜನರಿಗೆ ಮೊದಲು ಸಹಾಯ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಎನ್​ಡಿಆರ್​ಎಫ್​ನ ಒಂದು ತಂಡ ಹಾಗೂ ಎಸ್​ಡಿಆರ್​ಎಫ್​ನ ಎರಡು ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ" ಎಂದು ಪೋಸ್ಟ್​ ಹಾಕಿದ್ದಾರೆ.

ಹಲವೆಡೆ ಮನೆಗಳಿಗೆ ನುಗ್ಗಿದ ನೀರು: ಮಹಾಮಳೆಗೆ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ. ವರ್ಧಮಾನ್​ ನಗರ, ಶಾಂತಿ ನಗರ, ಪರಡಿ, ಭಾರತವಾರ, ಶಿವಶಂಭು ನಗರ, ಮನೀಶ್​ ನಗರ, ನರೇಂದ್ರ ನಗರ, ಸೂರ್ಯ ನಗರ, ಹೆಚ್.ಬಿ.ಪಟ್ಟಣ ಇತ್ಯಾದಿ ಪ್ರದೇಶಗಳು ಜಲಾವೃತಗೊಂಡಿವೆ. ನಾಗ್ಪುರ ನಗರದ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ಶಾಲೆಗಳಿಗೆ ರಜೆ ಘೋಷಣೆ: ಏಕಾಏಕಿ ಸುರಿದ ಭಾರಿ ಮಳೆಗೆ ನಾಗ್ಪುರ ಜಲಾವೃತಗೊಂಡಿದ್ದು, ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ವಿಪಿನ್​ ಇಟಂಕರ್​ ಅವರು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ನೈರುತ್ಯ ಮುಂಗಾರು: ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Last Updated : Sep 23, 2023, 4:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.