ETV Bharat / bharat

ಬುಧವಾರದವರೆಗೂ ಭಾರಿ ಮಳೆ ಸಾಧ್ಯತೆ: ರೆಡ್​ ಅಲರ್ಟ್​ ನೀಡಿದ IMD - ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸಾಧ್ಯತೆ

ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ, ಈ ಪ್ರದೇಶಗಳಿಗೆ ಐಎಂಡಿ 'ರೆಡ್' ಅಲರ್ಟ್ ನೀಡಿದೆ. ಬಂಗಾಳ ಕೊಲ್ಲಿಯಿಂದ ಪ್ರಬಲ ಆಗ್ನೇಯ ಮಾರುತಗಳಿಂದಾಗಿ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಬುಧವಾರದವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

heavy rain in october factor responsible to rain in india imd red alert
ರೆಡ್​ ಅಲರ್ಟ್​ ನೀಡಿದ ಹವಾಮಾನ ಇಲಾಖೆ
author img

By

Published : Oct 19, 2021, 6:59 PM IST

Updated : Oct 19, 2021, 7:25 PM IST

ಹೈದರಾಬಾದ್​​: ದೆಹಲಿ, ಕೇರಳ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಇದುವರೆಗೆ ಕೇರಳದಲ್ಲಿ 33 ಮತ್ತು ಉತ್ತರಾಖಂಡದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮಗಢದಲ್ಲಿ ಸೇನೆ ಮತ್ತು ವಾಯುಪಡೆ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿವೆ.

heavy rain in october factor responsible to rain in india imd red alert
ರೆಡ್​ ಅಲರ್ಟ್​ ನೀಡಿದ ಹವಾಮಾನ ಇಲಾಖೆ

ಕೇರಳದ ಇಡುಕ್ಕಿ, ಎರ್ನಾಕುಲಂ, ಕೊಲ್ಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ 200 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ 94.6 ಮಿಮೀ ಮಳೆಯಾಗಿದ್ದು, ದೆಹಲಿಯಲ್ಲಿ 61 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈ ಹಿಂದೆ 1960 ರಲ್ಲಿ 93.4 ಮಿಮೀ ಮಳೆಯಾಗಿತ್ತು. ಇನ್ನು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಹ ಹೆಚ್ಚು ಮಳೆಯಾಗಿದೆ.

  • #WATCH | An under construction bridge, over a raging Chalthi River in Champawat, washed away due to rise in the water level caused by incessant rainfall in parts of Uttarakhand. pic.twitter.com/AaLBdClIwe

    — ANI (@ANI) October 19, 2021 " class="align-text-top noRightClick twitterSection" data=" ">

ಮುಂಗಾರು ನಿರೀಕ್ಷೆಗಿಂತ ಏಕೆ ಹೆಚ್ಚಾಗಿ ಸುರಿಯುತ್ತಿದೆ?

ಮುಂಗಾರು ಮಾತ್ರ ನಿರೀಕ್ಷೆಗಿಂತ ಹೆಚ್ಚಿನ ಮಳೆಗೆ ಕಾರಣವಲ್ಲ. ಮೆಟ್ರೊಲಾಜಿಕಲ್ ಇಲಾಖೆಯ ಪ್ರಕಾರ, ಅಕ್ಟೋಬರ್ ಮೊದಲ ವಾರದಲ್ಲಿ, ದೇಶದ ಮತ್ತು ಮಧ್ಯ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಎರಡು ಕಡಿಮೆ ಒತ್ತಡದ ಪ್ರದೇಶಗಳಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ, ಮಳೆಯ ಹೆಚ್ಚಳ ಕಂಡು ಬರುತ್ತದೆ.

ಹವಾಮಾನ ತಜ್ಞರ ಪ್ರಕಾರ, ಅಕ್ಟೋಬರ್‌ನಲ್ಲಿ ಮಳೆ ಸಾಮಾನ್ಯವಾಗಿ ಬರುವುದಿಲ್ಲ, ಏಕೆಂದರೆ ಈ ತಿಂಗಳಲ್ಲಿ ನೈರುತ್ಯ ಮಾನ್ಸೂನ್ ಹಿಂತಿರುಗುತ್ತದೆ ಮತ್ತು ಈಶಾನ್ಯ ಮಾನ್ಸೂನ್‌ಗೆ ದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗುತ್ತದೆ. ತಮಿಳುನಾಡು ರಾಜ್ಯದಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಉತ್ತಮ ಮಳೆಯಾಗುತ್ತದೆ.

  • #WATCH | Uttarakhand: Occupants of a car that was stuck at the swollen Lambagad nallah near Badrinath National Highway, due to incessant rainfall in the region, was rescued by BRO (Border Roads Organisation) yesterday. pic.twitter.com/ACek12nzwF

ಈ ಬಾರಿ ಮುಂಗಾರು ಮರಳುವುದು ತಡವಾಗಿತ್ತು. ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ 17 ರಿಂದ ಹಿಂತಿರುಗುತ್ತದೆ. ಆದರೆ, ಈ ಬಾರಿ ಅದು ಅಕ್ಟೋಬರ್ 6 ಕ್ಕೆ ವಿಸ್ತರಣೆಗೊಂಡಿದೆ. ಹಿಂತಿರುಗುವ ಸಮಯದಲ್ಲಿ ಸಹ ಗುಡುಗು ಸಹಿತ ಮಳೆಯಾಗುತ್ತದೆ. ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಭಾಗಗಳಿಂದ ಮತ್ತು ಇಡೀ ದಕ್ಷಿಣ ಪರ್ಯಾಯ ದ್ವೀಪದಿಂದ ಸೋಮವಾರದವರೆಗೆ ಮುಂಗಾರು ವಾಪಸ್​ ಹೋಗಲಿಲ್ಲ. ಮುಂಗಾರು ಹಿಂತಿರುಗುವಿಕೆಯ ವಿಳಂಬದಿಂದಾಗಿ, ಒಡಿಶಾ, ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುತ್ತಿದೆ.

ಅಕ್ಟೋಬರ್​​ನಲ್ಲಿ ಹೆಚ್ಚು ಮಳೆಯಾಗುತ್ತಿದೆ:

ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ, ಈ ಪ್ರದೇಶಗಳಿಗೆ ಐಎಂಡಿ 'ರೆಡ್' ಅಲರ್ಟ್ ನೀಡಿದೆ. ಇದರೊಂದಿಗೆ ಉತ್ತರ ಆಂಧ್ರಪ್ರದೇಶ ಕರಾವಳಿ ಮತ್ತು ದಕ್ಷಿಣ ಒಡಿಶಾದಲ್ಲಿ ಮತ್ತೊಂದು ಕಡಿಮೆ ಒತ್ತಡದ ವ್ಯವಸ್ಥೆ ರೂಪುಗೊಂಡಿದೆ. ಕೇರಳದ ಮೇಲೆ ಪ್ರಭಾವ ಬೀರುವ ಕಡಿಮೆ ಒತ್ತಡದ ಚಂಡಮಾರುತ ಈಗ ದುರ್ಬಲಗೊಂಡಿದೆ.

ಆದರೆ, ಇದು ಮಧ್ಯ ಭಾರತದಲ್ಲಿ ಈಗಲೂ ಸಕ್ರಿಯವಾಗಿದೆ. ಈ ಕಾರಣದಿಂದಾಗಿ, ಉತ್ತರ ಭಾರತದಲ್ಲಿ ಉತ್ತಮ ಮಳೆಯಾಗಬಹುದು. ಬಂಗಾಳ ಕೊಲ್ಲಿಯಿಂದ ಪ್ರಬಲ ಆಗ್ನೇಯ ಮಾರುತಗಳಿಂದಾಗಿ, ಅರುಣಾಚಲ ಪ್ರದೇಶ, ಅಸ್ಸೋಂ ಮತ್ತು ಮೇಘಾಲಯದಲ್ಲಿ ಬುಧವಾರದವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಬಂಗಾಳ, ಬಿಹಾರದಲ್ಲಿ ಕೂಡ ಮಳೆಯಾಗಲಿದೆ.

ಮಳೆಯಿಂದ ಹಾನಿಗೊಳಗಾದ ಬೆಳೆಗಳು:

ಸರಕು ಮಾರುಕಟ್ಟೆ ತಜ್ಞ ಅಜಯ್ ಕೆಡಿಯಾ ಅವರ ಪ್ರಕಾರ, ಈ ವರ್ಷ ಅತಿಯಾದ ಮಳೆಯಿಂದಾಗಿ, ಕೊಯ್ಲು ಮಾಡದ ಖಾರಿಫ್ ಬೆಳೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. 50ರಷ್ಟು ಖಾರಿಫ್ ಬೆಳೆಗಳನ್ನು ಕಟಾವು ಮಾಡಲಾಗಿದೆ ಎನ್ನಲಾಗಿದೆ. ಆದರೆ, ಹತ್ತಿ ಬೆಳೆಯುವ ರೈತರು ಮಳೆಯಿಂದ ಹೆಚ್ಚು ತೊಂದರೆ ಅನುಭವಿಸಬಹುದು. ಹತ್ತಿ ಬೆಳೆಯಲ್ಲಿ ತೇವಾಂಶ ಹೆಚ್ಚಾದರೆ ಅದು ಉತ್ತಮ ಫಸಲು ನೀಡಲು ಸಾಧ್ಯವಾಗುವುದಿಲ್ಲ.

ಇನ್ನು ಈ ಮಳೆಯ ಪರಿಣಾಮವು ರಾಬಿ ಬೆಳೆಗಳಾದ ಗೋಧಿ, ಬೇಳೆ, ಸಾಸಿವೆ ಮತ್ತು ಜೀರಿಗೆಗಳ ಮೇಲೆಯೂ ಉಂಟಾಗಲಿದೆ ಎಂದು ಅಜಯ್ ಕೇಡಿಯಾ ಹೇಳುತ್ತಾರೆ. ಏಕೆಂದರೆ ಮಳೆಯಿಂದಾಗಿ ಅವುಗಳ ಬಿತ್ತನೆ ವಿಳಂಬವಾಗುತ್ತದೆ, ಇದರಿಂದ ಕೊಯ್ಲು ಕೂಡ ವಿಳಂಬವಾಗುತ್ತದೆ. ಹೆಚ್ಚು ಮಳೆಯಾದರೆ, ಶೀತದ ಅಮಯ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಇಬ್ಬನಿ ಮತ್ತು ಶೀತವು ಸಾಸಿವೆ ಬೆಳೆಗೆ ಹಾನಿ ಮಾಡಬಹುದು. ಅಲ್ಲದೇ, ತೇವಾಂಶದಿಂದಾಗಿ ಜೀರಿಗೆ ಕೂಡ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಳಪೆ ಗುಣಮಟ್ಟದ ಕಾರಣ ರಾಬಿ ಬೆಳೆಗಳ ಬೆಲೆ ದುಬಾರಿಯಾಗಬಹುದು.

Last Updated : Oct 19, 2021, 7:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.