ETV Bharat / bharat

Heart attack: ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಎದೆಯಲ್ಲಿ ನೋವು.. ಹಠಾತ್ ಹೃದಯಾಘಾತದಿಂದ ಯುವಕ ಸಾವು

ಹಠಾತ್ ಹೃದಯಾಘಾತದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಾಂಗ್ರೆಸ್ ಮುಖಂಡ ರಾಧಾ ಕಿಶೋರ್ ಅವರ ಪುತ್ರ ಶ್ರೀಧರ್ ಮೃತ ಯುವಕ.

Telangana man dies of heart attack after workout

author img

By

Published : Jul 10, 2023, 1:53 PM IST

ಹೈದರಾಬಾದ್ (ತೆಲಂಗಾಣ): ಜಿಮ್‌ನಲ್ಲಿ ವರ್ಕೌಟ್​ ಮಾಡಿದ ಬಳಿಕ ಯುವಕನೊಬ್ಬ ಹಠಾತ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಖಮ್ಮಂನಲ್ಲಿ ನಡೆದಿದೆ. ಖಮ್ಮಂ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಧಾ ಕಿಶೋರ್ ಅವರ ಪುತ್ರ ಶ್ರೀಧರ್ (31) ಮೃತರು.

ಭಾನುವಾರವಷ್ಟೇ ಪಟ್ಟಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಜಿಮ್‌ನಿಂದ ಮನೆಗೆ ಹಿಂದಿರುಗಿದ ಶ್ರೀಧರ್, ತನಗೇಕೋ ಆಯಾಸವಾಗುತ್ತದೆ, ಅಲ್ಲದೇ ಎದೆಯಲ್ಲಿ ತೀವ್ರತರಹದ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಕುಟುಂಬಸ್ಥರ ಮುಂದೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ. ಮಗನ ಕುಂದಿದ ನಿರುತ್ಸಾಹ ಮತ್ತು ಅಸ್ವಸ್ಥ ರೀತಿಯಲ್ಲಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದಕೊಂಡು ಬಂದಿದ್ದರು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಶ್ರೀಧರ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರಿಗೆ ಆಕಾಶವೇ ಕಳಚಿ ತಲೆ ಮೇಲೆ ಕಳಚಿ ಬಿದ್ದಷ್ಟು ಆಘಾತವಾಗಿದೆ.

ಮೃತ ಶ್ರೀಧರ್‌ ಈ ಹಿಂದೆ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದರು. ಆರೈಕೆಯಾದ ಬಳಿಕ ಇತ್ತೀಚೆಗಷ್ಟೇ ಜಿಮ್‌ಗೆ ತೆರಳುತ್ತಿದ್ದರು. ಭಾನುವಾರ ಖಮ್ಮಂನಲ್ಲಿ ನಾಗರಾಜು (33) ಎಂಬ ವ್ಯಕ್ತಿ ಕೂಡ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇತ್ತೀಚಿಗೆ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಎರಡು ದಿನಗಳಲ್ಲಿ ಇಬ್ಬರು ಯುವಕರು ಹಠಾತ್ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಯುವಕರನ್ನು ಚಿಂತೆಗೀಡು ಮಾಡಿದೆ.

ತೆಲಂಗಾಣ-ಆಂಧ್ರದಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳು: ಆಟ ಆಡುತ್ತಿರುವಾಗ, ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಇಲ್ಲವೇ ತಮ್ಮ ದೈನಂದಿನ ಕೆಲಸಗಳಲ್ಲಿ ತಲ್ಲೀನರಾಗಿದ್ದಾಗ ಹಠಾತ್ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ ಆಘಾತ ತರಿಸುವಂತಿದೆ. ಕಳೆದ ತಿಂಗಳು, ಜಗ್ತಿಯಾಲ್ ಪಟ್ಟಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯ ಸ್ತಂಭನ (cardiac arrest)ದಿಂದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದರು. ಮಾರ್ಚ್‌ನಲ್ಲಿ ಆಂಧ್ರಪ್ರದೇಶದ ಬಪಟ್ಲಾದಲ್ಲಿ ಶಾಲಾ ಶಿಕ್ಷಕರೊಬ್ಬರು ತರಗತಿಯಲ್ಲಿ ಪಾಠ ಮಾಡುತ್ತಲೇ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.

ಫೆಬ್ರವರಿ 28 ರಂದು ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಹೃದಯ ಸ್ತಂಭನದಿಂದ ಮೃತಪಟ್ಟರು. ಫೆಬ್ರವರಿ 25 ರಂದು ನಿರ್ಮಲ್ ಜಿಲ್ಲೆಯಲ್ಲಿ 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ. ಫೆಬ್ರವರಿ 22 ರಂದು ಹೈದರಾಬಾದ್‌ನ ಜಿಮ್‌ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗಲೇ 24 ವರ್ಷದ ಪೊಲೀಸ್ ಕಾನ್​ಸ್ಟೇಬಲ್​​ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದರು. ಅದಕ್ಕೂ ಮುನ್ನ ಫೆಬ್ರವರಿ 20 ರಂದು, ಹೈದರಾಬಾದ್‌ನಲ್ಲಿ ತಮ್ಮ ಸಂಬಂಧಿಕರ ವಿವಾಹದ ಅಂಗವಾಗಿ ನಡೆದ ಹಲ್ದಿ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದರು. ಇದೀಗ ಕಾಂಗ್ರೆಸ್ ಮುಖಂಡ ರಾಧಾ ಕಿಶೋರ್ ಅವರ ಪುತ್ರ ಶ್ರೀಧರ್ ಕೂಡ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹೆಚ್ಚಿನ ಜಿಮ್​, ಹೃದಯಸಂಬಂಧಿ ಕಾಯಿಲೆ ಬಗ್ಗೆ ಡಾ. ಮಂಜುನಾಥ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.