ETV Bharat / bharat

ಕೆಸಿಆರ್ ಭೇಟಿಯಾದ ಹೆಚ್​ಡಿಕೆ: ಪರ್ಯಾಯ ರಾಜಕೀಯ ಕೂಟ ರಚನೆ ಬಗ್ಗೆ ಚರ್ಚೆ - ತೆಲಂಗಾಣ ಸಿಎಂ ಕೆಸಿಆರ್​

ಹೈದರಾಬಾದ್‌ನ ಸಿಎಂ ಕಚೇರಿ ಪ್ರಗತಿ ಭವನದಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ಅವರನ್ನು ಭೇಟಿಯಾದ ಹೆಚ್​ಡಿಕೆ ಅತ್ಯಂತ ಮಹತ್ವದ ಮಾತುಕತೆ ನಡೆಸಿದರು.

hd-kumaraswamy-met-k-chandrashekar-rao-in-hyderabad
ಕೆಸಿಆರ್ ಭೇಟಿಯಾದ ಹೆಚ್​ಡಿಕೆ: ಪರ್ಯಾಯ ರಾಷ್ಟ್ರೀಯ ರಾಜಕೀಯ ಕೂಟ ರಚನೆ ಬಗ್ಗೆ ಚರ್ಚೆ
author img

By

Published : Sep 11, 2022, 10:34 PM IST

Updated : Sep 11, 2022, 11:00 PM IST

ಬೆಂಗಳೂರು/ಹೈದರಾಬಾದ್​: ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರು ಭಾನುವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪರ್ಯಾಯ ರಾಜಕೀಯ ಕೂಟ ರಚಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ಹೈದರಾಬಾದ್‌ನ ಸಿಎಂ ಕಚೇರಿ ಪ್ರಗತಿ ಭವನದಲ್ಲಿ ಕೆಸಿಆರ್​ ಅವರನ್ನು ಭೇಟಿಯಾದ ಹೆಚ್​ಡಿಕೆ ಅತ್ಯಂತ ಮಹತ್ವದ ಮಾತುಕತೆ ನಡೆಸಿದರು. ಕರ್ನಾಟಕ, ತೆಲಂಗಾಣ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳ ಕುರಿತು ಹಾಗೂ ಸದ್ಯದ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚಿಸಲಾಯಿತು.

ಕೆಸಿಆರ್ ಭೇಟಿಯಾದ ಹೆಚ್​ಡಿಕೆ: ಪರ್ಯಾಯ ರಾಜಕೀಯ ಕೂಟ ರಚನೆ ಬಗ್ಗೆ ಚರ್ಚೆ

ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದು, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಭೇಟಿಯಾಗಿ ಅತ್ಯಂತ ಮಹತ್ವದ ಸ್ನೇಹಪೂರ್ವಕ ಮಾತುಕತೆ ನಡೆಸಲಾಯಿತು. ಕರ್ನಾಟಕ, ತೆಲಂಗಾಣ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳ ಕುರಿತು ಹಾಗೂ ಸದ್ಯದ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚನೆ ನಡೆಯಿತು ಎಂದು ಹೇಳಿದ್ದಾರೆ.

ಅಲ್ಲದೇ, ರಾಷ್ಟ್ರ ರಾಜಕಾರಣಕ್ಕೆ ಪರಿಣಾಮಕಾರಿ ತಿರುವು ನೀಡಿ, ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ರೈತ, ಕಾರ್ಮಿಕ, ದೀನದಲಿತ ಮತ್ತು ಒಟ್ಟಾರೆ ಶ್ರೀಸಾಮಾನ್ಯನ ಪರವಾದ ದನಿಯುಳ್ಳ ಪರ್ಯಾಯ ರಾಜಕೀಯ ಕೂಟ ರಚಿಸುವ ತಮ್ಮ ಮನದಿಂಗಿತವನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅವರಿಗೆ ಶುಭ ಹಾರೈಸಿದೆ ಹಾಗೂ ಜೊತೆಯಲ್ಲಿ ನಿಲ್ಲುವುದಾಗಿ ಭರವಸೆಯನ್ನು ನೀಡಿದೆ ಎಂದೂ ಹೆಚ್​ಡಿಕೆ ಮತ್ತೊಂದು ಟ್ವೀಟ್​ ಮಾಡಿದ್ದಾರೆ.

ಜೊತೆಗೆ 2023ರ ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ವಿಜಯದಶಮಿಗೆ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿಗೆ ಅಂಕುರಾರ್ಪಣೆ ಮಾಡುವ ಬಗ್ಗೆ ಹೆಚ್ಚು ಒತ್ತು ಕೊಟ್ಟು ಹಿರಿಯರಾದ ಕೆಸಿಆರ್‌ ಅವರು ಮಾತುಕತೆ ನಡೆಸಿದರು. ಈ ವೇಳೆ ಅವರು ನನ್ನಡೆಗೆ ತೋರಿದ ಆದರಾಭಿಮಾನ, ವಾತ್ಸಲ್ಯ, ವಿಶ್ವಾಸಕ್ಕೆ ನಾನು ಮಾರು ಹೋಗಿದ್ದೇನೆ ಎಂದಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ.

ರಾಷ್ಟ್ರೀಯ ಪಕ್ಷ ಪ್ರಾರಂಭ?: ಇತ್ತ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಮತ್ತು ನೀತಿಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೆಸಿಎಆ್​ ಕಚೇರಿಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಪರ್ಯಾಯ ರಾಷ್ಟ್ರೀಯ ಅಜೆಂಡಾದಲ್ಲಿ ಒಮ್ಮತವಿದೆ. ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರೊಂದಿಗೆ ಸುದೀರ್ಘ ಚರ್ಚೆಯ ಅಭಿಪ್ರಾಯ ವ್ಯಕ್ತವಾಗಿದೆ. ತೆಲಂಗಾಣ ಚಳವಳಿಯ ಆರಂಭಕ್ಕೂ ಮುನ್ನ ಮಾಡಿದಂತೆಯೇ ಚರ್ಚೆ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷ ಮತ್ತು ಅದರ ನೀತಿಗಳ ರಚನೆ ನಡೆಯುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ ಸಚಿವ ಕೆಟಿಆರ್‌-ಹೆಚ್​ಡಿಕೆ ಭೇಟಿ: ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚೆ

Last Updated : Sep 11, 2022, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.