ETV Bharat / bharat

ರಾಜೀವ್ ಹತ್ಯೆ ಪ್ರಕರಣ: ನಳಿನಿ, ರವಿಚಂದ್ರನ್ ಬಿಡುಗಡೆ ಅರ್ಜಿ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌

author img

By

Published : Jun 17, 2022, 3:40 PM IST

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಅಪರಾಧಿ ಎ.ಜಿ.ಪೆರಾರಿವೇಲನ್ ಎಂಬಾತನನ್ನು ಸುಪ್ರೀಂಕೋರ್ಟ್ ಮೇ 18 ರಂದು ಜೈಲಿನಿಂದ ಬಿಡುಗಡೆಗೊಳಿಸಿ ಆದೇಶಿಸಿತ್ತು. ಸಂವಿಧಾನದ ಆರ್ಟಿಕಲ್ 142 ರಡಿ ಪ್ರದತ್ತವಾದ ಅಧಿಕಾರಗಳನ್ನು ಬಳಸಿ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿತ್ತು.

HC rejects plea from Nalini, Ravichandran accused in Rajiv murder case
ರಾಜೀವ್ ಹಂತಕರ ಅರ್ಜಿ ವಜಾ: ಬಿಡುಗಡೆ ಅಧಿಕಾರ ನಮಗಿಲ್ಲ ಎಂದ ಕೋರ್ಟ್

ಚೆನ್ನೈ: ಜೈಲಿನಿಂದ ಬಿಡುಗಡೆಗೆ ಆದೇಶ ನೀಡುವಂತೆ ರಾಜೀವ್ ಗಾಂಧಿ ಹಂತಕರು ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಳಿನಿ ಹಾಗೂ ರವಿಚಂದ್ರನ್‌ ಕೋರ್ಟಿಗೆ ಅರ್ಜಿ ಸಲ್ಲಿಸಿ, ರಾಜ್ಯಪಾಲರ ಅನುಮತಿ ಇಲ್ಲದೆ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.

ಸುಪ್ರಿಂಕೋರ್ಟಿಗೆ ಇರುವ ವಿಶೇಷ ಅಧಿಕಾರಗಳು ಹೈಕೋರ್ಟಿಗಿಲ್ಲ. ಸುಪ್ರೀಂಕೋರ್ಟಿಗೆ ಸಂವಿಧಾನದ ಆರ್ಟಿಕಲ್ 142 ರಡಿ ವಿಶೇಷ ಅಧಿಕಾರಗಳಿವೆ. ಆದರೆ ಹೈಕೋರ್ಟುಗಳಿಗೆ ಆರ್ಟಿಕಲ್ 226ರ ಅಡಿ ಅಂಥ ವಿಶೇಷ ಅಧಿಕಾರಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಂ.ಎನ್.ಭಂಡಾರಿ ಹಾಗೂ ನ್ಯಾ.ಎನ್.ಮಾಲಾ ಅವರಿದ್ದ ಪೀಠ ಹೇಳಿತು. ಈ ಹಿನ್ನೆಲೆಯಲ್ಲಿ ನಳಿನಿ ಹಾಗೂ ರವಿಚಂದ್ರನ್ ಅವರ ಅರ್ಜಿಗಳನ್ನು ಕೋರ್ಟ್ ವಜಾ ಮಾಡಿತು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲಿನಲ್ಲಿದ್ದ ಮತ್ತೋರ್ವ ಅಪರಾಧಿ ಎ.ಜಿ.ಪೆರಾರಿವೇಲನ್‌ನನ್ನು ಸುಪ್ರೀಂಕೋರ್ಟ್ ಮೇ 18 ರಂದು ಜೈಲಿನಿಂದ ಬಿಡುಗಡೆಗೊಳಿಸಿ ಆದೇಶ ನೀಡಿತ್ತು. ಆರ್ಟಿಕಲ್ 142 ರಡಿ ಪ್ರದತ್ತವಾದ ಅಧಿಕಾರಗಳನ್ನು ಬಳಸಿ ಕೋರ್ಟ್ ಈ ಆದೇಶ ನೀಡಿತ್ತು. ತಮಗೂ ಇದೇ ಮಾನದಂಡವನ್ನು ಆಧರಿಸಿ ಬಿಡುಗಡೆ ಮಾಡಬೇಕೆಂದು ಅಪರಾಧಿಗಳಾದ ನಳಿನಿ ಹಾಗೂ ರವಿಚಂದ್ರನ್ ಕೋರಿದ್ದರು.

ಈ ಹಿಂದಿನ ಎಐಎಡಿಎಂಕೆ ಸರ್ಕಾರವು ರಾಜೀವ್ ಹತ್ಯೆ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿ, ಅದರ ಪ್ರಸ್ತಾವನೆಯನ್ನು ಆಗಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತರಿಗೆ ಕಳುಹಿಸಿತ್ತು. ರಾಜ್ಯಪಾಲರಿಂದ ಸುದೀರ್ಘಾವಧಿಯವರೆಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅಪರಾಧಿಗಳು ತಮ್ಮ ಬಿಡುಗಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪೆರಾರಿವೇಲನ್, ಮುರುಗನ್, ಸನತ್‌, ರಾಬರ್ಟ್ ಪಾಯಿಸ್, ರವಿಚಂದ್ರನ್, ಜಯಕುಮಾರ್ ಮತ್ತು ನಳಿನಿ ಇವರೆಲ್ಲರೂ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.