ಹೈದರಾಬಾದ್(ತೆಲಂಗಾಣ) : ಮುನಗೋಡು ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಹವಾಲ ಹಣದ ಮೇಲೆ ತೀವ್ರವಾಗಿ ಗಮನ ಹರಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಶೇಷ ಟಾಸ್ಕ್ ಫೋರ್ಸ್ನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಹತ್ತು ದಿನದ ಕಾರ್ಯಾಚರಣೆಯಲ್ಲಿ ಸುಮಾರು 11 ಕೋಟಿ ಅಕ್ರಮ ಹಣ ವಶಕ್ಕೆ ಪಡೆಯಲಾಗಿದೆ.
ಇಂದು ಬೆಳಗ್ಗೆ ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿ 2 ಕೋಟಿ ಹವಾಲ ಹಣ ಸಿಕ್ಕಿದೆ. ಮಾಹಿತಿ ಆಧರಿಸಿ ದಾಳಿಮಾಡಿದ ವಿಶೇಷ ಟಾಸ್ಕ್ ಫೋರ್ಸ್ ಯಶಸ್ವಿ ಕಾರ್ಯಚರಣೆ ನಡೆಸಿದೆ. ಹಣ ಗುಜರಾತ್ ಮೂಲದ ಆಕಾಶ್ ಕಾಂತಿ ಕೊರಿಯರ್ ಮತ್ತು ಪಾರ್ಸೆಲ್ ಸರ್ವೀಸ್ ಮಾಲೀಕರಿಗೆ ಸೇರಿದ್ದು ಎಂದು ಗುರುತಿಸಿದೆ. ಈ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು 29ರಂದು ಮಸಾಬ್ಟಾಂಕ್ ಪ್ರದೇಶದಲ್ಲಿ ಶೋಯೆಬ್ ಮಲಿಕ್ ಎಂಬುವರಿಂದ 24 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ಶೋಯೆಬ್ಉತ್ತರ ಪ್ರದೇಶದ ಮೀರತ್‌ನ ಸಂಬಂಧಿ ಕಾಮಿಲ್ ಸೂಚನೆ ಮೇರೆಗೆ ಹಣ ಪಡೆದಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಶುಕ್ರವಾರ ರಾತ್ರಿ ಚಂದ್ರಯ್ಯನಗುಟ್ಟ ಪ್ರದೇಶದಲ್ಲಿ 79 ಲಕ್ಷ ರೂ ಹವಾಲ ಹಣ ಮತ್ತು ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಶುಕ್ರವಾರವೇ ಮತ್ತೊಂದು ಪ್ರಕರಣ ಜುಬಿಲಿ ಹಿಲ್ಸ್ ನಲ್ಲಿ ಪತ್ತೆ ಹಚ್ಚಲಾಗಿತ್ತು. ಕಾರ್ತಿಕೇಯ ಎಂಬುವರಿಂದ 50 ಲಕ್ಷ ರೂ ಹವಾಲ ಹಣವನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ಜುಬ್ಲಿ ಹಿಲ್ಸ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಕೋಟಿ ರೂ. ನಗದು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಗಾಂಧಿನಗರ ಪೊಲೀಸ್ ಠಾಣೆಯ ಮ್ಯಾರಿಯಟ್ ಹೋಟೆಲ್ನಲ್ಲಿ ಮೂರೂವರೆ ಕೋಟಿ ರೂ ವಶಪಡಿಸಿಕೊಳ್ಳಲಾಗಿದೆ ಮತ್ತು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗಷ್ಟೇ ತೆಲಂಗಾಣದ ಉಪಚುನಾವಣೆ ವೇಳ ಪಟ್ಟಿ ಬಿಡುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹವಾಲ ಹಣದ ಹರಿವು ಹೆಚ್ಚಾಗಿದೆ. ಈ ಉದ್ದೇಶದಿಂದ ಪೊಲೀಸರು ಹೆಚ್ಚಿನ ಗಮನ ಹರಿಸಿದ್ದಾರೆ. ಹತ್ತು ದಿನದ ಕಾರ್ಯಚರಣೆಯಲ್ಲಿ 11 ಕೋಟಿಗಳಷ್ಟು ಅಕ್ರಮ ಹಣವನ್ನ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಶಿಂದೆ ಬಣಕ್ಕೆ 'ಎರಡು ಕತ್ತಿ ಮತ್ತು ಗುರಾಣಿ' ಚಿಹ್ನೆ ಹಂಚಿಕೆ ಮಾಡಿದ ಚುನಾವಣಾ ಆಯೋಗ