ETV Bharat / bharat

ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆ ಇರಲಿ: ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರಿಗೆ ಪ್ರಧಾನಿ ಮೋದಿ ಸಲಹೆ

ಮಕ್ಕಳ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ, ಸಾಮಾಜಿಕ ಒತ್ತಡದಿಂದ ಮಕ್ಕಳಿಗೆ ನಿರಂತರ ಒತ್ತಡ ಹೇರುವುದರಿಂದ ಅವರು ಈ ಒತ್ತಡ ಬರಿಸಲಾಗದೇ ತಪ್ಪು ಆಯ್ಕೆಯನ್ನು ಮಾಡುವ ಸಾಧ್ಯತೆ ಇರುತ್ತದೆ ಎಂದು ಪೋಷಕರಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆ ಇರಲಿ; ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರಿಗೆ ಪ್ರಧಾನಿ ಮೋದಿ ಸಲಹೆ
have-expectations-commensurate-with-students-abilities-pm-modi-advises-parents-on-exam-pay-debate
author img

By

Published : Jan 27, 2023, 3:25 PM IST

ನವದೆಹಲಿ: ವಿದ್ಯಾರ್ಥಿಗಳ ವೈಯಕ್ತಿಕ ಸಾಮರ್ಥ್ಯಕ್ಕೆ ಹೊಂದಣಿಕೆ ಆಗುವಂತೆ ನಿರೀಕ್ಷೆ ಇರಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. 'ಪರೀಕ್ಷಾ ಪೇ ಚರ್ಚಾ'ದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ, ಸಾಮಾಜಿಕ ಒತ್ತಡದಿಂದ ನಿಮ್ಮ ಮಕ್ಕಳ ಮೇಲೆ ಹೆಚ್ಚಿನ ನಿರೀಕ್ಷೆ ಹೇರಬೇಡಿ ಎಂದು ಇದೇ ವೇಳೆ ಮನವಿ ಮಾಡಿದರು. ಪೋಷಕರು ಮಕ್ಕಳ ಮೇಲೆ ಭಾರೀ ನಿರೀಕ್ಷೆ ಹೊಂದುವುದು ಸಾಮಾನ್ಯ. ಆದರೆ, ಇದು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಇರಬೇಕು. ಅದನ್ನು ಮೀರಿ ನಿರೀಕ್ಷೆ ಹೊಂದುವುದು ದೊಡ್ಡ ಸಮಸ್ಯೆ ಆಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ನಿರೀಕ್ಷೆ ಇರಬೇಕು. ಇದೇ ವೇಳೆ, ನೀವು ಗುರಿಯತ್ತ ಗಮನ ಹೊಂದಿರಬೇಕು ಎಂದು ವಿದ್ಯಾರ್ಥಿ, ಶಿಕ್ಷಕರು ಮತ್ತು ಪೋಷಕರಿಗೆ ತಿಳಿ ಹೇಳಿದರು.

ಮಕ್ಕಳ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ, ಸಾಮಾಜಿಕ ಒತ್ತಡದಿಂದ ಮಕ್ಕಳಿಗೆ ನಿರಂತರ ಒತ್ತಡ ಹೇರುವುದರಿಂದ ಅವರು ಈ ಒತ್ತಡ ಬರಿಸಲಾಗದೇ ತಪ್ಪು ಆಯ್ಕೆಯನ್ನು ಮಾಡುವ ಸಾಧ್ಯತೆ ಇರುತ್ತದೆ ಎಂದು ಪೋಷಕರಿಗೆ ಸಲಹೆ ನೀಡಿದರು. ಇದೇ ವೇಳೆ, ವಿದ್ಯಾರ್ಥಿಗಳು ಕೂಡ ತಮ್ಮ ಸಾಮರ್ಥ್ಯವನ್ನು ತಪ್ಪು ಅಂದಾಜಿಸಬಾರದು ಎಂದು ಕಿವಿಮಾತು ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 6ನೇ ಕಂತಿನ ವಾರ್ಷಿಕ ಪರೀಕ್ಷಾ ಪೆ ಚರ್ಚಾದಲ್ಲಿ 38.80 ಲಕ್ಷ ಜನರು ಭಾಗಿಯಾಗಿದ್ದಾರೆ. ಇದರಲ್ಲಿ 31. 24 ಲಕ್ಷ ಜನರು ವಿದ್ಯಾರ್ಥಿಗಳಿದ್ದು, 5.60 ಲಕ್ಷ ವಿದ್ಯಾರ್ಥಿಗಳು ಮತ್ತು 1.95 ಲಕ್ಷ ಪೋಷಕರು ಭಾಗಿಯಾಗಿದ್ದಾರೆ. ರಾಜ್ಯ ಮಂಡಳಿ, ಸಿಬಿಎಸ್​ಸಿ, ಕೆವಿಎಸ್​, ಎನ್​ವಿಎಸ್​ ಮತ್ತು ಇತರ ಮಂಡಳಿಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ನವೆಂಬರ್​ 25ರಿಂದ 30ರವರೆಗೆ ನೋಂದಾಣಿ ಆರಂಭವಾಗಿತ್ತು. ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ನಡೆಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಪ್ರಧಾನಿ ಸಹಾಯ ಮಾಡುವುದರ ಜೊತೆ ಹಲವು ಸಲಹೆ ನೀಡಿದರು.

ಸ್ಮಾರ್ಟ್​ ವರ್ಕ್​​ ಅಥವಾ ಹಾರ್ಡ್​ ವರ್ಕಾ?: ವಿದ್ಯಾರ್ಥಿಗಳು ಜೀವನದಲ್ಲಿ ಬುದ್ದಿವಂತಿಕೆಯಿಂದ ಕೆಲಸ ಮಾಡಬೇಕಾ ಅಥವಾ ಕಠಿಣ ಶ್ರಮ ಪಡಬೇಕಾ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಮೋದಿ, ಕೆಲವು ಜನರು ಕಷ್ಟಕಟ್ಟು ಕೆಲಸ ಮಾಡುವ ಜೊತೆಗೆ ಬುದ್ದಿವಂತಿಕೆ ಕಾರ್ಯ ಮಾಡುತ್ತಾರೆ. ಮತ್ತೆ ಕೆಲವರು ಬುದ್ದಿವಂತಿಕೆಯಿಂದಲೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದರು. ಹಾರ್ಡ್​ ವರ್ಕ್​ ಮತ್ತು ಸ್ಮಾರ್ಟ್​ವರ್ಕ್​ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದಕ್ಕೆ ಉದಾಹರಣೆ ನೀಡಿದ ಪ್ರಧಾನಿ, ಬಾಯಾರಿದ ಕಾಗೆ ಬುದ್ದಿವಂತಿಕೆಯಿಂದ ಕಲ್ಲು ಹಾಕಿ ನೀರು ಕುಡಿಯಿತೋ ಹಾಗೆ ಜಾಣತನ ಹಾಗೂ ಕೆಲಸ ಮಾಡಬೇಕು ಎಂದರು.

ಸಮಯ ನಿರ್ವಹಣೆಯನ್ನ ಕೌಶಲ್ಯವನ್ನು ನಿಮ್ಮ ತಾಯಿಯರಿಂದ ನೋಡಿ ಕಲಿಯಬೇಕು ಎಂದು ಇದೇ ವೇಳೆ ಪ್ರಧಾನಿ ಮಂತ್ರಿಗಳು ಸಲಹೆ ನೀಡಿದರು. ನಿಮ್ಮ ತಾಯಿಯ ಸಮಯ ನಿರ್ವಹಣೆ ಕೌಶಲ್ಯವನ್ನು ಗಮನಿಸಿ. ತಾಯಿ ಬಹು ಕೆಲಸದ ನಡುವೆಯೂ ಆಕೆಗೆ ಅದು ಹೊರೆಯಾಗುವುದಿಲ್ಲ. ಪರೀಕ್ಷೆಯಲ್ಲಿ ಮೋಸ ಮಾಡುವುದು ನಿಮಗೆ ಸಹಾಯ ಮಾಡಬಹುದು. ಆದರೆ, ಇದು ದೀರ್ಘಾವಧಿವರೆಗೆ ಸಹಾಯ ಆಗುವುದಿಲ್ಲ. ಈ ಹಿನ್ನೆಲೆ ಶಾರ್ಟ್​ಕಟ್​​ ಬಳಕೆ ಮಾಡಬೇಡಿ. ಕಠಿಣ ಶ್ರಮವೇ ನಿಮಗೆ ಸಹಾಯ ಮಾಡುವುದು ಎಂದು ತಿಳಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದ​ ಗ್ರಾಮವೊಂದರಲ್ಲಿ ಕೆರೆ ನಿರ್ಮಾಣ: ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.