ಪಿಲಿಭಿತ್(ಉತ್ತರ ಪ್ರದೇಶ): ಅದೃಷ್ಟ ಅನ್ನೋದು ಹಾಗೆಯೇ. ಯಾವಾಗ, ಯಾರ ಕೈ ಹಿಡಿಯುತ್ತೆ ಎಂದು ಹೇಳುವುದು ಕಷ್ಟ. ಅಂತಹ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆದಿದೆ. ಇಲ್ಲೋರ್ವ ಯುವಕ ರಾತ್ರಿ ಬೆಳಗಾಗುವುದರೊಳಗೆ ಒಂದು ಕೋಟಿ ಹಣ ಸಂಪಾದಿಸಿದ್ದಾನೆ.
ಪಿಲಿಭಿತ್‌ನ ಸೆಹ್ರಾಮೌ ಪೊಲೀಸ್ ಠಾಣೆಯ ಹರಿಪುರ್ ಕಿಶನ್ಪುರ ಗ್ರಾಮದ ನಿವಾಸಿ ಹಾಶಿಮ್ 'ಡ್ರೀಮ್ 11' ಆ್ಯಪ್ ಮೂಲಕ ಭಾರತ-ಐರ್ಲೆಂಡ್ ನಡುವಿನ ಪಂದ್ಯದಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾನೆ.
ಈ ಆನ್‌ಲೈನ್ ಆ್ಯಪ್‌ನಲ್ಲಿ ಯುವಕರಿಂದ ಹಿಡಿದು ಹಿರಿಯರು ಕೂಡಾ ತಂಡ ರಚನೆ ಮಾಡಿ, ಪ್ರತಿ ಗೇಮ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕೋಟ್ಯಧಿಪತಿಯಾಗುವ ಅದೃಷ್ಟ ಕೆಲವರಿಗೆ ಮಾತ್ರ ಸಿಗುತ್ತದೆ. ಪಿಲಿಭಿತ್‌ನ ಹಾಶಿಮ್ ಕೂಡ ನಿನ್ನೆ ಐರ್ಲೆಂಡ್-ಭಾರತದ ನಡುವೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಹಲವು ತಂಡಗಳನ್ನು ಕಣಕ್ಕಿಳಿಸಿದ್ದು, ಆತನಿಗೆ ಅದೃಷ್ಟದ ಬಾಗಿಲನ್ನೇ ತೆರೆಸಿದೆ.
ಇದನ್ನೂ ಓದಿ: ಉದಯಪುರ ಕೃತ್ಯ ಖಂಡನೀಯ, ಪ್ರಧಾನಿ ಮೋದಿ ಮೌನ ಮುರಿಯಲಿ- ಖರ್ಗೆ
ಈತ ಕಳೆದ 4 ವರ್ಷಗಳಿಂದಲೂ ಆನ್‌ಲೈನ್ ಆ್ಯಪ್ ಮೂಲಕ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದನಂತೆ. ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಗೇಮ್ಗಳಲ್ಲಿ ತಂಡಗಳನ್ನು ಕಣಕ್ಕಿಳಿಸಿದ್ದಾನೆ. ಆದರೆ, ಅದೃಷ್ಟ ಕೈಹಿಡಿದಿರಲಿಲ್ಲ. ಕೋಟಿ ರೂಪಾಯಿ ಗೆಲ್ಲುತ್ತಿದ್ದಂತೆ ಆತನ ಕುಟುಂಬಸ್ಥರಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.