ನುಹ್ (ಹರಿಯಾಣ): ನುಹ್ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ನಡೆಯದಂತೆ ತಡೆಯಲು ಜಿಲ್ಲಾಡಳಿತವು ಸೆಕ್ಷನ್ 144 ಅನ್ನು ವಿಧಿಸಿದೆ. ಜಿಲ್ಲೆಯ ಎಲ್ಲಾ ಶಾಲೆಗಳು ಮತ್ತು ಬ್ಯಾಂಕ್‌ಗಳನ್ನು ಬಂದ್ ಮಾಡಲಾಗಿದೆ ಎಂದು ನುಹ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವಿನಿ ಕುಮಾರ್ ಹೇಳಿದ್ದಾರೆ.
-
#WATCH | On VHP yatra in Nuh, Haryana Mamata Singh, ADG, Law & Order says, "We have denied (permission) for any type of yatra or group movement...Internet service is suspended...Investigation is underway, more than 250 accused have been identified and arrested. Four SITs are… pic.twitter.com/OKVODFS7i1
— ANI (@ANI) August 28, 2023 " class="align-text-top noRightClick twitterSection" data="
">#WATCH | On VHP yatra in Nuh, Haryana Mamata Singh, ADG, Law & Order says, "We have denied (permission) for any type of yatra or group movement...Internet service is suspended...Investigation is underway, more than 250 accused have been identified and arrested. Four SITs are… pic.twitter.com/OKVODFS7i1
— ANI (@ANI) August 28, 2023#WATCH | On VHP yatra in Nuh, Haryana Mamata Singh, ADG, Law & Order says, "We have denied (permission) for any type of yatra or group movement...Internet service is suspended...Investigation is underway, more than 250 accused have been identified and arrested. Four SITs are… pic.twitter.com/OKVODFS7i1
— ANI (@ANI) August 28, 2023
"ಜಿಲ್ಲೆಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಪ್ಪಿಸುವಂತೆ ನಾನು ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲೆಗಳು ಮತ್ತು ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಯಾತ್ರೆಯನ್ನು ಪ್ರಚಾರ ಮಾಡುವಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದು ಸೆಕ್ಷನ್ 144 ರ ಉಲ್ಲಂಘನೆಯಾಗುತ್ತದೆ" ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ13 ಅರೆಸೇನಾ ಪಡೆಗಳು, ಮೂರು ಹರಿಯಾಣ ಸಶಸ್ತ್ರ ಪೊಲೀಸ್ (ಎಚ್‌ಎಪಿ) ಮತ್ತು 657 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನುಹ್ ಉಪ ಆಯುಕ್ತ ಧೀರೇಂದ್ರ ಖಡ್ಗಟಾ ಹೇಳಿದ್ದಾರೆ.
ಯಾತ್ರೆಗೆ ಯಾವುದೇ ಅನುಮತಿ ನೀಡಿಲ್ಲ: "ನಾವು ಯಾತ್ರೆಗೆ ಯಾವುದೇ ಅನುಮತಿ ನೀಡಿಲ್ಲ. ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಸೆಕ್ಷನ್ 144 ವಿಧಿಸಲಾಗಿದೆ. ಜೊತೆಗೆ ಫೋರ್ಸ್ ನಿಯೋಜನೆ ಮಾಡಲಾಗಿದೆ. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಸೆಕ್ಷನ್ 144 ಅನ್ನು ಉಲ್ಲಂಘಿಸಲು ಪ್ರಯತ್ನಿಸುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಆಡಳಿತವು ಸ್ಪಷ್ಟ ಸೂಚನೆಗಳನ್ನು ನೀಡಿದೆ. ನಾವು ಅವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ. ಶಾಲೆಗಳು ಮತ್ತು ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ. ಹರಿಯಾಣ ಪೊಲೀಸರು ಜಿಲ್ಲೆಯ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಣ್ಗಾವಲು ಪಡೆಗಳು ಡ್ರೋನ್ ಅನ್ನು ಬಳಸುತ್ತಿವೆ'' ಎಂದು ಹೇಳಿದರು.
-
#WATCH | Haryana: On VHP yatra in Nuh, Rajender, IG, South Range, Rewari says, "The Local and State Administration has denied the permission (for the yatra)...For Law & Order, force deployment has been done in the area. Section 144 has been imposed in the area...I would appeal to… pic.twitter.com/FcoUHIv8C5
— ANI (@ANI) August 28, 2023 " class="align-text-top noRightClick twitterSection" data="
">#WATCH | Haryana: On VHP yatra in Nuh, Rajender, IG, South Range, Rewari says, "The Local and State Administration has denied the permission (for the yatra)...For Law & Order, force deployment has been done in the area. Section 144 has been imposed in the area...I would appeal to… pic.twitter.com/FcoUHIv8C5
— ANI (@ANI) August 28, 2023#WATCH | Haryana: On VHP yatra in Nuh, Rajender, IG, South Range, Rewari says, "The Local and State Administration has denied the permission (for the yatra)...For Law & Order, force deployment has been done in the area. Section 144 has been imposed in the area...I would appeal to… pic.twitter.com/FcoUHIv8C5
— ANI (@ANI) August 28, 2023
"ಸಿದ್ಧತೆಯನ್ನು ಗಣನೆಗೆ ತೆಗೆದುಕೊಂಡು ನಾವು ಡ್ರೋನ್‌ಗಳು ಮತ್ತು ಹಸ್ತಚಾಲಿತ ತಪಾಸಣೆಯ ಸಹಾಯದಿಂದ ನೆರೆಹೊರೆಯ ಪ್ರದೇಶವನ್ನು ಪರಿಶೀಲಿಸುತ್ತಿದ್ದೇವೆ" ಎಂದು ನುಹ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಂದರ್ ಕುಮಾರ್ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಯಾತ್ರೆಗೆ ಮುನ್ನ ಗುರುಗ್ರಾಮದ ಸೋಹ್ನಾ-ನುಹ್ ಟೋಲ್ ಪ್ಲಾಜಾದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದೇನು?: ಹರ್ಯಾಣ ಸರ್ಕಾರವು ನುಹ್‌ನಲ್ಲಿ ಬ್ರಿಜ್ ಮಂಡಲ್ ಯಾತ್ರೆಗೆ ಅನುಮತಿ ನಿರಾಕರಿಸಿದ ನಂತರ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಅವರು, ಶ್ರಾವಣ ತಿಂಗಳಾಗಿರುವುದರಿಂದ ಜನರು ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದರು. "ತಿಂಗಳ ಆರಂಭದಲ್ಲಿ (ನುಹ್) ಸಂಭವಿಸಿದ ರೀತಿಯ ಘಟನೆಯನ್ನು ನೋಡಿದರೆ, ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ನಮ್ಮ ಪೊಲೀಸರು ಮತ್ತು ಆಡಳಿತವು ಯಾತ್ರೆ ನಡೆಸುವ ಬದಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜನರು ಹತ್ತಿರದ ದೇವಸ್ಥಾನಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬೇಕು. ಯಾತ್ರೆಗೆ (ಬ್ರಾಜ್ ಮಂಡಲ್ ಶೋಭಾ ಯಾತ್ರೆ) ಅನುಮತಿ ನಿರಾಕರಿಸಲಾಗಿದೆ. ಆದರೆ, ಜನರು ಶ್ರಾವಣ ಮಾಸವಾಗಿರುವುದರಿಂದ ಜನರು ಹತ್ತಿರದ ದೇವಸ್ಥಾನಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬಹುದು” ಎಂದು ಸಿಎಂ ಖಟ್ಟರ್ ಹೇಳಿದರು.
ಯಾತ್ರೆ ಶಾಂತಿಯುತವಾಗಿ ಆಯೋಜಿಸುತ್ತೇವೆ- ವಿಎಚ್‌ಪಿ ನಾಯಕ ಅಲೋಕ್ ಕುಮಾರ್: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಅಲೋಕ್ ಕುಮಾರ್ ಅವರು, ಸೋಮವಾರ ಬ್ರಜ್ ಮಂಡಲ್ ಶೋಬಾ ಯಾತ್ರೆಯನ್ನು ನೂಹ್‌ನಲ್ಲಿ ಶಾಂತಿಯುತವಾಗಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಶಾಂತಿ ಕಾಪಾಡುವತ್ತ ಸರ್ಕಾರ ಗಮನ ಹರಿಸಬೇಕು. ಜನರು ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ಆಯೋಜಿಸಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರವಿದೆ. ನಾವು ಅದನ್ನು ಶಾಂತಿಯುತವಾಗಿ ಆಯೋಜಿಸುತ್ತೇವೆ. ಅವರು (ಆಡಳಿತ ಮತ್ತು ಸರ್ಕಾರ) ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದರು.
ನುಹ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ: ದಕ್ಷಿಣ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ರಾಜೇಂದ್ರ ಕುಮಾರ್ ಅವರು, ನೂಹ್‌ನಲ್ಲಿ ಯಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ಕಾನೂನು ಸುವ್ಯವಸ್ಥೆ ನಿಯೋಜನೆಗೆ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು. "ತಡೆಗಟ್ಟುವ ಕ್ರಮವಾಗಿ, ಆಗಸ್ಟ್ 26 ರಂದು ಮಧ್ಯಾಹ್ನ 12ರಿಂದ ಆಗಸ್ಟ್ 28ರ ರಾತ್ರಿ 11:59 ರವರೆಗೆ ನುಹ್‌ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: Manipur violence: ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ.. ಮನೆಗಳಿಗೆ ಬೆಂಕಿ, ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಲೂಟಿ