ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಯಶಸ್ವಿಯಾಗಿರುವ ರೈತರು ಕನಿಷ್ಠ ಬೆಂಬಲ ಬೆಲೆಗಾಗಿ (MSP) ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಹೋರಾಟ ಮುಂದುವರೆದಿದೆ. ಈ ಬೆನ್ನಲ್ಲೆ ಹರಿಯಾಣದ ಯುವಕನೊಬ್ಬ ವಿಭಿನ್ನ ರೀತಿಯಲ್ಲಿ ಕನಿಷ್ಠ ಬೆಂಬಲ ಬೆಲೆಗಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೌದು, ಬಿವಾನಿ ನಿವಾಸಿಯಾದ ಪ್ರದೀಪ್ ಕಾಳಿರಮಣ ಎಂಬ ಯುವಕನೊಬ್ಬ ತನ್ನ ವಿವಾಹ ಆಮಂತ್ರಣದ ಕಾರ್ಡ್ನಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗ್ಯಾರೆಂಟಿ ನೀಡುವಂತೆ ಒತ್ತಾಯಿಸಿದ್ದಾನೆ. ಎರಡು ವಾರದ ಹಿಂದೆ ಸುಮಾರು ಒಂದೂವರೆ ಸಾವಿರ ಕಾರ್ಡ್ಗಳನ್ನು ಮುದ್ರಿಸಿರುವ ಆತ ಎಲ್ಲರಿಗೂ ಹಂಚಿದ್ದಾನೆ.
'ಯುದ್ಧ ಇನ್ನೂ ಜಾರಿಯಲ್ಲಿದೆ. ಈಗ ಎಂಎಸ್‌ಪಿ ಸರದಿ' ಎಂದು ಆಮಂತ್ರಣ ಕಾರ್ಡ್ ಉಲ್ಲೇಖಿಸಲಾಗಿದ್ದು, ಟ್ರ್ಯಾಕ್ಟರ್ ಚಿತ್ರವನ್ನು ಮುದ್ರಿಸಲಾಗಿದೆ. ಇದರ ಜೊತೆಗೆ 'ರೈತರಿಲ್ಲದಿದ್ದರೆ, ಆಹಾರವಿಲ್ಲ' (No Farmers, No Food) ಎಂದು ಮುದ್ರಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರದೀಪ್ ಫೆಬ್ರವರಿ 14ರಂದು ವಿವಾಹವಾಗಲಿದ್ದು, ರೈತರ ಪ್ರತಿಭಟನೆಗೆ ಇನ್ನೂ ಗೆಲುವು ಸಿಕ್ಕಿಲ್ಲ ಎಂಬ ಸಂದೇಶವನ್ನು ಜನರಿಗೆ ರವಾನಿಸುವ ಸಲುವಾಗಿ ಆಮಂತ್ರಣ ಕಾರ್ಡ್ ಮೇಲೆ ಈ ರೀತಿಯಾಗಿ ಮುದ್ರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಇದರ ಜೊತೆಗೆ ಎಂಎಸ್‌ಪಿ ಮೇಲೆ ಸರ್ಕಾರ ಕಾನೂನು ಬದ್ಧ ಭರವಸೆ ನೀಡಿದಾಗ ಮಾತ್ರ ರೈತರಿಗೆ ಜಯ ಸಿಗುತ್ತದೆ ಮತ್ತು ಹುತಾತ್ಮ ರೈತರ ತ್ಯಾಗಕ್ಕೂ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಇಂದು ದೇಶದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ