ETV Bharat / bharat

Tokyo Olympics: ರಾಜ್ಯದ ಹಾಕಿ ಆಟಗಾರ್ತಿಯರಿಗೆ ತಲಾ 50 ಲಕ್ಷ ರೂ ಘೋಷಿಸಿದ ಹರಿಯಾಣ

ರಾಣಿ ರಾಂಪಾಲ್, ಸವಿತಾ ಪೂನಿಯಾ, ಮೋನಿಕಾ ಮಲಿಕ್, ನೇಹಾ ಗೋಯಲ್​, ನವಜೋತ್ ಕೌರ್​, ನವನೀತ್ ಕೌರ್​, ನಿಶಾ, ಶರ್ಮಿಳಾ, ಉದಿತಾ ಹರಿಯಾಣ ರಾಜ್ಯದಿಂದ ಭಾಗವಹಿಸಿದ ಆಟಗಾರರಾಗಿದ್ದಾರೆ.

Haryana govt to award Rs 50 lakh each state player in Indian women's hockey team
Tokyo Olympics: ತನ್ನ ರಾಜ್ಯದ ಹಾಕಿ ಆಟಗಾರ್ತಿಯರಿಗೆ 50 ಲಕ್ಷ ಘೋಷಿಸಿದ ಹರಿಯಾಣದ ಸರ್ಕಾರ
author img

By

Published : Aug 6, 2021, 10:54 AM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನ ಹಾಕಿ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರ ಅತ್ಯದ್ಭುತ ಆಟಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಹಾಕಿ ತಂಡಕ್ಕೆ ವಿವಿಧ ಕ್ಷೇತ್ರಗಳ ಗಣ್ಯರೆಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪದಕ ಗೆಲ್ಲುವಲ್ಲಿ ವಿಫಲವಾದರೂ ಮಹಿಳಾ ತಂಡದ ಸಾಧನೆಗೆ ಹರಿಯಾಣ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹರಿಯಾಣದಿಂದ ಹಾಕಿ ತಂಡಕ್ಕೆ ಆಯ್ಕೆಯಾದ 9 ಮಂದಿಗೆ ತಲಾ 50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಿಎಂ ಮನೋಹರ್ ಲಾಲ್ ಕಟ್ಟರ್ ಘೋಷಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅಭಿನಂದನಾರ್ಹ ಆಟವನ್ನು ಆಡಿದ ಮಹಿಳಾ ತಂಡಕ್ಕೆ ಶುಭಾಶಯಗಳು ಎಂದು ಸಿಎಂ ಮನೋಹರ್ ಲಾಲ್ ಕಟ್ಟರ್​​ ಟ್ವೀಟ್​ ಮಾಡಿದ್ದು, ಇದೇ ವೇಳೆ ತಲಾ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ರಾಣಿ ರಾಂಪಾಲ್, ಸವಿತಾ ಪೂನಿಯಾ, ಮೋನಿಕಾ ಮಲಿಕ್, ನೇಹಾ ಗೋಯಲ್​, ನವಜೋತ್ ಕೌರ್​, ನವನೀತ್ ಕೌರ್​, ನಿಶಾ, ಶರ್ಮಿಳಾ, ಉದಿತಾ ಹರಿಯಾಣ ರಾಜ್ಯದಿಂದ ಭಾಗವಹಿಸಿದ ಆಟಗಾರರಾಗಿದ್ದಾರೆ.

ಕುಸ್ತಿ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಬಜರಂಗ್ ಪುನಿಯಾ ಬಗ್ಗೆಯೂ ಟ್ವೀಟ್ ಮಾಡಿರುವ ಅವರು ಸೆಮಿಫೈನಲ್​ ತಲುಪಿರುವ ಹರಿಯಾಣದ ಮಗ ಬಜರಂಗ್ ಪುನಿಯಾಗೆ ಅಭಿನಂದನೆಗಳು, ಇಡೀ ದೇಶ ಮತ್ತು ರಾಜ್ಯದ ಕಣ್ಣುಗಳು ನಿಮ್ಮ ಮೇಲಿವೆ, ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತರಬೇಕೆಂದು ನನ್ನ ಆಸೆ ಎಂದಿದ್ದಾರೆ.

ಇದನ್ನೂ ಓದಿ: Tokyo Olympics: ಬಜರಂಗ್​ ಪುನಿಯಾ ಸೆಮಿಫೈನಲ್‌ ಪ್ರವೇಶ: ಕುಸ್ತಿಯಲ್ಲಿ ಮತ್ತೊಂದು ಪದಕ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.